![Channel Gowda](https://www.harithalekhani.com/wp-content/uploads/2025/02/IMG-20250204-WA0002.jpg)
ದೊಡ್ಡಬಳ್ಳಾಪುರ: ಚಂಡಮಾರುತದ ಕಾರಣ ಕಳೆದ ಕೆಲ ದಿನದಿಂದ ತಾಲೂಕಿನಲ್ಲಿ (rain in doddaballapur) ಧಾರಾಕಾರ ಮಳೆ ಸುರಿದಿದೆ. ನಿರಂತರವಾಗಿ ಸುರಿದ ಮಳೆಯಿಂದ ತಾಲೂಕಿನ ಕೆಲವೆಡೆ ಅವಾಂತರ ಸೃಷ್ಟಿಯಾಗಿದ್ದರೆ, ಹಲವು ಕೆರೆ, ಕುಂಟೆಗಳಿಗೆ ನೀರು ಬಂದಿದೆ.
![hulukudi maharathotsava](https://www.harithalekhani.com/wp-content/uploads/2025/02/IMG-20250205-WA0002.jpg)
ಕಳೆದ ಸೋಮವಾರದಿಂದ ಒಂದೇ ಸಮ ಸುರಿಯುತ್ತಿರುವ ಮಳೆ ಗುರುವಾರ ಮಧ್ಯಾಹ್ನ ಹಾಗೂ ಶುಕ್ರವಾರ ಬೆಳಗ್ಗೆ ಬಿಡುವು ನೀಡಿತ್ತಾದರು, ಶುಕ್ರವಾರ ಸಂಜೆಯಿಂದ ಮತ್ತೆ ಆರ್ಭಟಿಸುತ್ತಿದೆ.
ಕೋಡಿ ಬಿದ್ದ ಕೆರೆ: ತಾಲೂಕಿನ ದೊಡ್ಡಕೆರೆಯಾದ ಗುಂಡಮಗೆರೆ ಕೆರೆ ಸುರಿಯುತ್ತಿರುವ ಮಳೆಗೆ ತುಂಬಿ ಕೋಡಿ ಹರಿದಿದೆ. ಮಳಯ ಕೊರೆತೆಯಿಂದ ಕಳೆದ ವರ್ಷ ತುಂಬದ ಕೆರೆ. ಈ ವರ್ಷ ಆರಂಭದಿಂದ ಸುರಿಯುತ್ತಿರುವ ಉತ್ತಮ ಮಳೆಯಿಂದಾಗಿ ಶನಿವಾರ ರಾತ್ರಿ ಕೋಡಿ ಹರಿದಿದೆ.
![Hulukudi mahajathre](https://www.harithalekhani.com/wp-content/uploads/2025/02/IMG-20250205-WA0001.jpg)
ಕೋಡಿ ಹರಿಯುತ್ತಿರುವ ನೀರನ್ನು ನೋಡಲು ಸಾರ್ವಜನಿಕರು ತಂಡೋಪತಂಡವಾಗಿ ಭೇಟಿ ನೀಡುತ್ತಿದ್ದಾರೆ.
ಮತ್ತೊಂದೆಡೆ ತಾಲೂಕಿನ ಚಿಕ್ಕನಾಯಕನಹಳ್ಳಿ ವಿದ್ಯುತ್ ಕಂಬವೊಂದು ಮುರಿದು ಬಿದ್ದಿದ್ದು, ವಿದ್ಯುತ್ ಪೂರೈಕೆ ಸ್ಥಗಿತ ಗೊಂಡಿತು.
![](https://www.harithalekhani.com/wp-content/uploads/2024/10/1000482955-1024x576.webp)