ದೊಡ್ಡಬಳ್ಳಾಪುರ: ಬೆಂಗಳೂರು ಗ್ರಾಮಾಂತರ ಜಿಲ್ಲಾಡಳಿತ, ಶಾಲಾ ಶಿಕ್ಷಣ ಇಲಾಖೆ (ಪದವಿ ಪೂರ್ವ) ವತಿಯಿಂದ ನಗರದ ದೇವರಾಜ ಅರಸು ಪದವಿ ಪೂರ್ವ ಕಾಲೇಜಿನಲ್ಲಿ ನಡೆದ ಪದವಿ ಪೂರ್ವ ಕಾಲೇಜುಗಳ ರಾಜ್ಯಮಟ್ಟದ ಯೋಗ ಪಂದ್ಯಾವಳಿಯ ಸಮಾರೋಪ ಸಮಾರಂಭ ನಡೆಯಿತು.
ಸ್ಪರ್ಧೆಯ ವಿಜೇತರಿಗೆ ಬಹುಮಾನ ವಿತರಿಸಿದ ಜೆಡಿಎಸ್ ರಾಜ್ಯ ಪ್ರಧಾನ ಕಾರ್ಯದರ್ಶಿ ಹರೀಶ್ ಗೌಡ ಮಾತನಾಡಿ, ಯೋಗ ಮಾಡುವುದರಿಂದ ಮನುಷ್ಯನ ಹಲವು ಕಾಯಿಲೆಗಳು ದೂರವಾಗಿ ಒಳ್ಳೆಯ ಆರೋಗ್ಯ ಪಡೆಯಬಹುದಾಗಿದೆ. ದಿನನಿತ್ಯದ ಜೀವನದಲ್ಲಿ ಮನುಷ್ಯ ತುಂಬ ಚಟುವಟಿಕೆಯಿಂದ ಇರಲು ಅನುಕೂಲ ಕಲ್ಪಿಸುವ ನಿಟ್ಟಿನಲ್ಲಿ ಸದಾ ಯೋಗ ಮಾಡುವುದು ರೂಡಿಸಿ ಕೊಳ್ಳಬೇಕು ಎಂದರು.
ಯೋಗ ಪಟುಗಳು ರಾಜ್ಯ, ರಾಷ್ಟ್ರ ಹಾಗೂ ಅಂತಾರಾಷ್ಟ್ರೀಯ ಮಟ್ಟಗಳಲ್ಲಿ ಭಾಗವಹಿಸುವುದರ ಮೂಲಕ ಯೋಗ ಅಭ್ಯಾಸ ಕಲಿಸಿದ ಗುರುಗಳಿಗೆ ಹಾಗೂ ಹೆತ್ತ ತಂದೆ ತಾಯಿಯರಿಗೆ ಕೀರ್ತಿ ತರುವ ಕೆಲಸ ಮಾಡುವಂತಾಗಲಿ ಎಂದು ಹರೀಶ್ ಗೌಡ ಹರಿಸಿದರು.
ಮಹಿಳಾ ಮತ್ತು ಪುರುಷರ ವಿಭಾಗದಲ್ಲಿ ನಡೆದ ಸ್ಪರ್ಧೆಯಲ್ಲಿ ಒಟ್ಟು 14 ಮಂದಿ ರಾಷ್ಟ್ರ ಮಟ್ಟಕ್ಕೆ ಆಯ್ಕೆಯಾಗಿದ್ದಾರೆ.
ಪುರುಷರ ವಿಭಾಗ: ದಕ್ಷಿಣಕನ್ನಡ ಜಿಲ್ಲೆಯ ನಿಖಿಲ್ ಬಿಕೆ, ಮೈಸೂರು ಜಿಲ್ಲೆಯ ತವಿಶ್ ವಿಎಸ್, ದಕ್ಷಿಣಕನ್ನಡ ಜಿಲ್ಲೆಯ ಮೋಹಿತ್, ಬಾಗಲಕೋಟೆ ಜಿಲ್ಲೆಯ ಉತ್ತಪ್ಪ ಉಲ್ಗನರ್, ಧಾರವಾಡ ಜಿಲ್ಲೆ ಶಿವಾನಂದ ಕುಂಡಗಲ್, ದಕ್ಷಿಣ ಕನ್ನಡ ಜಿಲ್ಲೆಯ ಕುಮಾರ್, ಬೀದರ್ ಜಿಲ್ಲೆಯ ಸಮರ್ಥ್ ಮೋಹನ್.
ಮಹಿಳಾ ವಿಭಾಗ: ಉಡುಪಿ ಜಿಲ್ಲೆಯ ನಿರೀಕ್ಷಾ, ಬೆಂಗಳೂರು ದಕ್ಷಿಣ ಜಿಲ್ಲೆಯ ನೇಹಾಬಿ ಕುರ್ಸೆ, ಉಡುಪಿ ಜಿಲ್ಲೆಯ ತನ್ವಿತಾ ವಿ, ದಕ್ಷಿಣ ಕನ್ನಡ ಜಿಲ್ಲೆಯ ಕವನ ವಿರೂಪಾಕ್ಷ ಗೌಡ ಪಾಟೀಲ್, ಚಿಕ್ಕೋಡಿ ಜಿಲ್ಲೆಯ ಸೃಷ್ಟಿ ಬಲ್ಲಾಳ್, ಬೆಂಗಳೂರು ಉತ್ತರ ಜಿಲ್ಲೆಯ ತನುಶ್ರಿ ಜಿ, ಬೆಂಗಳೂರು ದಕ್ಷಿಣ ಜಿಲ್ಲೆಯ ಐಶ್ವರ್ಯ ಎಂ.
ರಾಜ್ಯದ ವಿವಿಧ ಜಿಲ್ಲೆಗಳಿಂದ ಆಗಮಿಸಿದ್ದ 500 ಯೋಗಪಟುಗಳು ಸ್ಪರ್ಧೆಗಳಲ್ಲಿ ಭಾಗವಹಿಸಿದ್ದರು. 4 ವೇದಿಕೆಗಳಲ್ಲಿ ವಿವಿಧ ವಿಭಾಗದ ಯೋಗ ಸ್ಪರ್ಧೆಗಳನ್ನು ನಡೆಸಲಾಯಿತು.
ಪ್ರತಿ ವಿಭಾಗಕ್ಕೂ 5 ಮಂದಿ ತೀರ್ಪುಗಾರರಿದ್ದರು. ಸ್ಪರ್ಧಿಗಳ ಭಾಗವಹಿಸಿಕೆ ವಿವರ ಹಾಗೂ ಸ್ಪರ್ಧೆಗಳಲ್ಲಿ ನೀಡಿದ ಅಂಕಗಳನ್ನು ಪ್ರಥಮ ಬಾರಿಗೆ ಡಿಜಿಟಲ್ ಪರದೆಯ ಮೂಲಕ ವೀಕ್ಷಣೆ ಮಾಡಲು ಅವಕಾಶ ಮಾಡಿದ್ದುದು ವಿಶೇಷವಾಗಿತ್ತು.
ಕಾರ್ಯಕ್ರಮದಲ್ಲಿ ಲಯನ್ಸ್ ಕ್ಲಬ್ ಆಫ್ ಆರ್.ಎಲ್.ಜಾಲಪ್ಪ ಇನ್ಸ್ಟಿಟ್ಯೂಷನ್ಸ್‍ನ ಅಧ್ಯಕ್ಷ ಜೆ.ಆರ್.ರಾಕೇಶ್, ಪ್ರಾಂಶುಪಾರ ಸಂಘದ ಕಾರ್ಯದರ್ಶಿ ವೇಣುಗೋಪಾಲ್, ರಾಷ್ಟ್ರೀಯ ಯೋಗಾಸನ ತೀರ್ಪುಗಾರ ಬಿ.ಜಿ.ಅಮರನಾಥ್, ಯೋಗ ನಟರಾಜ್, ಮುಖಂಡರಾದ ಪ್ರವೀಣ್ ಶಾಂತಿನಗರ, ಬಾಬಣ್ಣ, ಸಂಜೀವ, ಕೋದಂಡರಾಮ. ಕಾಲೇಜಿನ ಪ್ರಾಂಶುಪಾಲರದಾದ ಮಾಂತೇಶ್, ಉಪನ್ಯಾಸ ಶಿವರಾಮೇಗೌಡ, ಕೇಶವಮೂರ್ತಿ, ಎಇಇ ರಮೇಶ್, ದೈಹಿಕ ಶಿಕ್ಷಣ ನಿರ್ದೇಶಕರಾದ ದಾದಪೀರ್, ಶ್ರೀಕಾಂತ್ ಮೊದಲಾದವರು ಹಾಜರಿದ್ದರು.