Site icon ಹರಿತಲೇಖನಿ

ಮಾಜಿ ಸಿಎಂ‌ ಎಸ್.ಎಂ ಕೃಷ್ಣ ಆಸ್ಪತ್ರೆಗೆ ದಾಖಲು.!

Channel Gowda
Hukukudi trust

ಬೆಂಗಳೂರು; ಕೆಲ ದಿನಗಳ ಹಿಂದಷ್ಟೇ ಅನಾರೋಗ್ಯದಿಂದ ಚೇತರಿಸಿಕೊಂಡಿದ್ದ ಮಾಜಿ ಮುಖ್ಯಮಂತ್ರಿ ಎಸ್.ಎಂ ಕೃಷ್ಣ ಅವರ ಆರೋಗ್ಯದಲ್ಲಿ ಮತ್ತೆ ಏರುಪೇರು ಉಂಟಾಗಿದ್ದು, ನಗರದ ಮಣಿಪಾಲ್‌ ಆಸ್ಪತ್ರೆಗೆ ದಾಖಲಿಸಲಾಗಿದೆ.

Aravind, BLN Swamy, Lingapura

ಕೆಲ ದಿನಗಳ ಹಿಂದೆಯಷ್ಟೆ ಕೆಮ್ಮು ಜ್ವರ ಕಾಣಿಸಿಕೊಂಡ ಹಿನ್ನಲೆ ಎಸ್.ಎಂ ಕೃಷ್ಣ ಅವರನ್ನು ಬೆಂಗಳೂರಿನ ಮಲ್ಯ ರಸ್ತೆಯ ಖಾಸಗಿ ಆಸ್ಪತ್ರೆಗೆ ದಾಖಲಿಸಿದ್ದು, ಚೇತರಿಕೆಯಾದ ಹಿನ್ನಲೆ ಡಿಸ್ಟಾರ್ಜ ಮಾಡಲಾಗಿತ್ತು.

ಆದರೆ ಇದೀಗ ಮತ್ತೆ ಅನಾರೋಗ್ಯದ ಸಮಸ್ಯೆ ಉದ್ಭವಿಸಿದ್ದು, ಕೂಡಲೇ ಮಣಿಪಾಲ್‌ ಆಸ್ಪತ್ರೆಗೆ ದಾಖಲಿಸಲಾಗಿದೆ.

Aravind, BLN Swamy, Lingapura

ಡಾ.ಸತ್ಯನಾರಾಯಣ ಹಾಗೂ ಡಾ. ಸುನಿಲ್ ಕಾರಂತ್ ನೇತೃತ್ವದಲ್ಲಿ ಎಸ್.ಎಂ ಕೃಷ್ಣ ಅವರಿಗೆ ಚಿಕಿತ್ಸೆ ನೀಡಲಾಗುತ್ತಿದೆ ಎಂದು ವರದಿಯಾಗಿದೆ.

Exit mobile version