ಚಿಕ್ಕಬಳ್ಳಾಪುರ: ಬೆಂಗಳೂರಿನ ಹೆಸರಘಟ್ಟ ರಸ್ತೆಯ ತರಬನಹಳ್ಳಿ ಬಳಿಯ ರೈಲ್ವೆ ಲೆವೆಲ್ ಕ್ರಾಸಿಂಗ್ ಬಳಿ ಮೇಲ್ಸೇತುವೆ ನಿರ್ಮಿಸಲು ಚಿಕ್ಕಬಳ್ಳಾಪುರ ಲೋಕಸಭಾ ಕ್ಷೇತ್ರದ ಸಂಸದ ಡಾ.ಕೆ.ಸುಧಾಕರ್ ಮಾಡಿದ್ದ ಮನವಿಗೆ ಕೇಂದ್ರ ಸರ್ಕಾರ ಸ್ಪಂದಿಸಿದೆ. 125 ಕೋಟಿ ರೂ. ವೆಚ್ಚದಲ್ಲಿ ಕಾಮಗಾರಿ ಆರಂಭವಾಗಲಿದ್ದು, ಸ್ಥಳೀಯರು ಹಾಗೂ ಪ್ರಯಾಣಿಕರ ಬಹುವರ್ಷಗಳ ಸಮಸ್ಯೆ ಅಂತ್ಯ ಕಾಣಲಿದೆ.
ಹೆಸರಘಟ್ಟ ರಸ್ತೆಯ ತರಬನಹಳ್ಳಿ ಬಳಿ ಇರುವ ರೈಲ್ವೆ ಲೆವೆಲ್ ಕ್ರಾಸಿಂಗ್ (ಎಲ್ ಸಿ -11) ಸ್ಥಳದಲ್ಲಿ ಮೇಲ್ಲೇತುವೆ ನಿರ್ಮಿಸಲು ಸಂಸದಡಾ.ಕೆ.ಸುಧಾಕರ್ ಮಾಡಿದ್ದ ಮನವಿಗೆ ಕೇಂದ್ರ ರೈಲ್ವೆ ಸಚಿವಾಲಯ ಒಪ್ಪಿಗೆ ನೀಡಿದೆ.
ರೂ.125 ಕೋಟಿ ವೆಚ್ಚದ ಯೋಜನೆ: ಮೇಲ್ಲೇ ತುವೆ ಹಾಗೂ ಸುರಂಗಮಾರ್ಗ ನಿರ್ಮಿಸಲು 125 ಕೋಟಿ ರೂ. ವೆಚ್ಚದ ಕಾಮಗಾರಿ ಮಂಜೂರು ಮಾಡಲಾಗಿದೆ. ಇದಕ್ಕಾಗಿ ಕೇಂದ್ರ ರೈಲ್ವೆ ಸಚಿವ ಅಶ್ವಿನಿ ವೈಷ್ಣವ್ ಹಾಗೂ ಕೇಂದ್ರ ದೆಹಲಿಯಲ್ಲಿ ರೈಲ್ವೆ ಖಾತೆ ರಾಜ್ಯ ಸಚಿವ ಸೋಮಣ್ಣ ಅವರಿಗೆ ಸಂಸದ ಡಾ.ಕೆ.ಸುಧಾಕರ್ ಮನವಿ ಸಲ್ಲಿಸಿದ್ದರು.
ರೈಲ್ವೆ ಖಾತೆ ರಾಜ್ಯ ಸಚಿವ ವಿ.ಸೋಮಣ್ಣ ಅವರಿಗೆ ಸಂಸದರು ಧನ್ಯವಾದ ಸಲ್ಲಿಸಿದ್ದಾರೆ. ಚಿಕ್ಕಬಾಣಾವಾರ ಹಾಗೂ ಗೊಲ್ಲಹಳ್ಳಿ ರೈಲ್ವೆ ನಿಲ್ದಾಣಗಳನಡುವೆ ಇರುವ ಈ ಲೆವೆಲ್ ಕ್ರಾಸಿಂಗ್ನಿಂದ ಬೆಂಗಳೂರು-ಹೆಸರಘಟ್ಟ ರಸ್ತೆಯಲ್ಲಿ ಪ್ರಯಾಣಿಸುವ ವಾಹನಗಳಿಗೆ ತೊಂದರೆಯಾ ಗುತ್ತಿರುವುದನ್ನು ಇತ್ತೀಚೆಗೆ ನವದೆಹಲಿಗೆ ಭೇಟಿ ನೀಡಿದ್ದ ಸಂದರ್ಭದಲ್ಲಿ ಕೇಂದ್ರ ರೈಲ್ವೆ ಸಚಿವರು ಹಾಗೂ ಹಿರಿಯ ಅಧಿಕಾರಗಳ ಗಮನಕ್ಕೆ ತಂದಿದ್ದೆ.
ನನ್ನ ಮನವಿಯ ಮೇರೆಗೆ ಈ ಕಾಮಗಾರಿ ಯನ್ನು ಕೇಂದ್ರ ರೈಲ್ವೆ ಸಚಿವಾಲಯ ಮಂಜೂರು ಮಾಡಿದ್ದು, 125 ಕೋಟಿ ರೂ. ವೆಚ್ಚದಲ್ಲಿ ಮೇಲೇತುವೆ (ಆರ್ಓ ಬಿ) ಹಾಗೂ ಸುರಂಗ ಮಾರ್ಗ (ಎಲ್ ಹೆಚ್ ಎಸ್) ನಿರ್ಮಾಣ ಕಾಮ ಗಾರಿಯನ್ನು ಶೀಘ್ರದಲ್ಲೇ ಪ್ರಾರಂಭಿಸಲಾಗುವುದು ಎಂದು ಸಂಸದ ಡಾ.ಕೆ.ಸುಧಾಕರ್ ಟ್ವಿಟ್ ಮಾಡಿದ್ದಾರೆ.
ವಾಹನ ಸಂಚಾರಕ್ಕೆ ಅನುಕೂಲ: ಈ ಮೇಲೇತುವೆಯಿಂದ ತರಬನಹಳ್ಳಿ ಲೆವೆಲ್ ಕ್ರಾಸಿಂಗ್ನಲ್ಲಿ ಪ್ರತಿ ದಿನ ಹಾದು ಹೋಗುವ ಸುಮಾರು 3 ಲಕ ವಾಹನಗಳಿಗೆ ಅನುಕೂಲವಾಗಲಿದೆ. ವಿಶೇಷವಾಗಿ ಶಾಲಾ ಬಸ್ಸುಗಳು ಹಾಗೂ ಆ್ಯಂಬುಲೆನ್ಸ್ಗಳಿಗೆ ಆಗುತ್ತಿದ್ದ ತೊಂದರೆ ನಿವಾರಣೆಯಾಗಲಿದೆ ಎಂದು ಅವರು ತಿಳಿಸಿದ್ದಾರೆ.