ನವದೆಹಲಿ: ಲೋಕಮಾನ್ಯ ತಿಲಕ್ ಎಕ್ಸ್‌ಪ್ರೆಸ್ ರೈಲು ಗುರುವಾರ ಅಸ್ಸಾಂನ ಲಾಮ್‌ಡಿಂಗ್ ವಿಭಾಗದ ಲಾಮ್‌ಡಿಂಗ್-ಬರ್ದಾರ್ಪುರ್ ಮಾರ್ಗದಲ್ಲಿ ಹಳಿ ತಪ್ಪಿದೆ ಎಂದು ವರದಿಯಾಗಿದೆ.
ಅಗರ್ತಲಾ- ಮುಂಬೈ ನಡುವೆ ಸಂಚರಿಸುವ ಲೋಕಮಾನ್ಯ ತಿಲಕ್ ಎಕ್ಸ್‌ಪ್ರೆಸ್ ರೈಲಿನ ಎಂಜಿನ್, ಪವರ್ ಕಾರ್ ಸೇರಿದಂತೆ ಒಟ್ಟು ಎಂಟು ಕೋಚ್‌ಗಳು ಹಳಿ ತಪ್ಪಿದ್ದು, ಯಾವುದೇ ಸಾವು ನೋವುಗಳು ಸಂಭವಿಸಿಲ್ಲ ಎಂದು ಈಶಾನ್ಯ ರೈಲ್ವೆ ಅಧಿಕಾರಿಗಳು ಮಾಧ್ಯಮಗಳಿಗೆ ತಿಳಿಸಿದ್ದಾರೆ.
#Accident/#Derailment details-
— RAILWHISPERS (@Railwhispers) October 17, 2024
Train no. 12520, AGTL-LTT
Date: 17.10.2024
Engine no. 70857, Shed-NGC
8 coaches derailed including engine
Km 26/8 at over facing point of Dibalong (#DBLG) station at 15.55 hrs.
No casualty
Load: 22+1 (VP)
Examination done at AGTL
Single Line section pic.twitter.com/rbwwJ3hF4r
ರಕ್ಷಣಾ ತಂಡಗಳು ರಕ್ಷಣಾ ಕಾರ್ಯದಲ್ಲಿ ನಿರತವಾಗಿದ್ದು, ಈ ಮಾರ್ಗದಲ್ಲಿ ರೈಲು ಸಂಚಾರವನ್ನು ಸ್ಥಗಿತಗೊಳಿಸಲಾಗಿದೆ ಎಂದು ಅವರು ತಿಳಿಸಿದ್ದಾರೆ.