Site icon ಹರಿತಲೇಖನಿ

ತಗ್ಗಿದ ಮಳೆ ಅಬ್ಬರ: 3 ದಿನಕ್ಕೆ ದೊಡ್ಡಬಳ್ಳಾಪುರದಲ್ಲಿ 40 ಮಿ.ಮೀ ಮಳೆ ದಾಖಲು..!

ದೊಡ್ಡಬಳ್ಳಾಪುರ: ಸೋಮವಾರದಿಂದ (rain in doddaballapur) ತಾಲೂಕಿನಲ್ಲಿ ಧಾರಾಕಾರವಾಗಿ ಸುರಿಯುತ್ತಿರುವ ಮಳೆ ಗುರುವಾರ ಅಲ್ಪ ಮಟ್ಟಿಗೆ ಬಿಡುವು ನೀಡಿದ್ದು, ಮೋಡ ಕವಿದ ವಾತಾವರಣ ಮುಂದುವರಿದಿದೆ.

ಬುಧವಾರ ಬೆಳಗ್ಗೆಯಿಂದ ಸುರಿಯುತ್ತಿದ್ದ ತುಂತುರು ಮಳೆ, ಆರೆಂಜ್ ಅಲರ್ಟ್ ಘೋಷಣೆಯ ನಡುವೆಯೂ, ಮಧ್ಯಾಹ್ನದಿಂದ ಅಲ್ಪಮಟ್ಟಿಗೆ ಬಿಡುವು ನೀಡಿದ್ದು, ಜನಜೀವನ ಯಥಾಸ್ಥಿತಿಗೆ ಮರಳುತ್ತಿದೆ.

ಇದನ್ನೂ ಓದಿ; ಹೊಟ್ಟೆಪಾಡಿಗೆ ಜೊತೆಗಿರುವವರ ವಿಷಕಾರಿ ಮಾತು ನಂಬಬೇಡಿ: ಶಾಸಕ ಧೀರಜ್ ಮುನಿರಾಜುಗೆ ಕಾಂಗ್ರೆಸ್ ಮುಖಂಡರ ಸಲಹೆ

ವರದಿಯನ್ವಯ ಕಳೆದ ಮೂರು ದಿನಗಳಿಂದ ದೊಡ್ಡಬಳ್ಳಾಪುರ ತಾಲೂಕಿನಲ್ಲಿ (rain in doddaballapur) 40.26ಮಿ.ಮೀ ಮಳೆಯಾಗಿದ್ದು, ಸಾಸಲು ಹೋಬಳಿಯಲ್ಲಿ ಅತಿ ಹೆಚ್ಚು 45.05 ಮಿ.ಮೀ ಮಳೆಯಾಗಿದೆ.

ಉಳಿದಂತೆ ಕಸಬ ಹೋಬಳಿ 44.08 ಮಿ.ಮೀ, ಮಧುರೆ ಹೋಬಳಿ 43.04 ಮಿ‌ಮೀ, ತೂಬಗೆರೆ ಹೋಬಳಿ 37.03 ಮಿ‌ಲಿ ಮೀಟರ್ ಮಳೆಯಾಗಿದೆ.

Exit mobile version