ಹರಿತಲೇಖನಿ

Doddaballapura; ಬಾಶೆಟ್ಟಿಹಳ್ಳಿ ಪಟ್ಟಣ ಪಂಚಾಯಿತಿ ಬಳಿ ಪ್ರತಿಭಟನೆ..!

Hukukudi trust

ದೊಡ್ಡಬಳ್ಳಾಪುರ: ವಸತಿ ವಂಚಿತರಿಗೆ ನಿವೇಶನ ನೀಡಬೇಕು.ಬಾಶೆಟ್ಟಿಹಳ್ಳಿ ಪಟ್ಟಣಪಂಚಾಯಿತಿಯಲ್ಲಿ ವೈಜ್ಞಾನಿಕ ವಾರ್ಡ್ಗಳ ವಿಂಗಡಣೆ ಮಾಡಬೇಕು, ಖಾಸಗಿ ಒಡೆತನದಲ್ಲಿ ಕಾರ್ಯ ನಿರ್ವಹಿಸಿತ್ತಿರುವ ಶುದ್ಧ ಕುಡಿಯುವ ನೀರಿನ ಘಟಕಗಳನ್ನು ಪಂಚಾಯತಿಯ ಅಧೀನಕ್ಕೆ ಪಡೆಯಬೇಕು ಎಂದು ಆಗ್ರಹಿಸಿ ದಲಿತರ ಹಾಗೂ ಪ್ರಗತಿಪರ ಒಕ್ಕೂಟದಿಂದ ತಾಲ್ಲೂಕಿನ ಬಾಶೆಟ್ಟಿಹಳ್ಳಿ ಪಟ್ಟಣ ಪಂಚಾಯಿತಿ ಆವರಣದಲ್ಲಿ ಗುರುವಾರ ಪ್ರತಿಭಟನೆ ನಡೆಸಲಾಯಿತು.

Aravind, BLN Swamy, Lingapura

ಪ್ರತಿಭಟನೆಯಲ್ಲಿ ಮಾತನಾಡಿದ ಸಂಘಟನೆಯ ಮುಖಂಡರು, ಬಡವರಿಗೆ ದಲಿತರಿಗೆ ಆಸ್ತಿ ಮತ್ತು ನೀರಿನ ತೆರಿಗೆಯನ್ನು ಕಡಿತ ಮಡುವುದು, ವರದನಹಳ್ಳಿ ಗ್ರಾಮದ ಸರ್ಕಾರಿ ಓಣಿ ಜಾಗ ಮುಖ್ಯ ರಸ್ತೆ ಒತ್ತುವರಿ ತೆರವು ಹಾಗೂ ಶೇಖರಿಸುತ್ತಿರುವ ಘನ ತ್ಯಾಜ್ಯ ಕಸವನ್ನು ಈ ಕೂಡಲೇ ಸಂಸ್ಕರಣ ಘಟಕಕ್ಕೆ ವರ್ಗಾಯಿಸಬೇಕು,‌ ಎಳ್ಳುಪುರದ,ಬಾಶೆಟ್ಟಹಳ್ಳಿ ಗ್ರಾಮದ ಬಡಾವಣೆಗಳಲ್ಲಿನ ಮೀಸಲು ಉದ್ಯಾನವನ ಮತ್ತು ಬಯಲು ಪ್ರದೇಶ ಜಾಗವನ್ನು ಖಾಸಗಿ ವ್ಯಕ್ತಿಗಳಿಗೆ ಅಕ್ರಮವಾಗಿ ಖಾತೆ ಮಾಡಿರುವುದನ್ನು ರದ್ದು ಮಾಡಬೇಕು ಎಂದು ಒತ್ತಾಯಿಸಿದರು.

ಅರಹಳ್ಳಿ ಗುಡದಹಳ್ಳಿ ಗ್ರಾಮದಲ್ಲಿ 10 ಸರ್ಕಾರಿ ಜಮೀನು ಇದೆ. ಈ ಜಮೀನು ನಗರ ಸಭೆಯ 5 ಕಿ. ಮೀ ವ್ಯಾಪ್ತಿಯಲ್ಲಿದ್ದು, ಪಟ್ಟಣ ಪಂಚಾಯಿತಿಯ 3 ಕಿ.ಮೀ ವ್ಯಾಪ್ತಿಯಲ್ಲಿದೆ.

Aravind, BLN Swamy, Lingapura

ಬಕರ್ ಹುಕಂ ನಿಯಮಾವಳಿಗಳನ್ನು ಪಾಲಿಸದೇ ಅನರ್ಹ ವ್ಯಕ್ತಿಗಳಿಗೆ 6 ಎಕೆರೆ ಭೂಮಿಯನ್ನು ಸಾಗುವಳಿ ಮಾಡಿರುವುದು ಕಾನೂನು ಉಲ್ಲಂಘನೆಯಾಗಿ. ಈ ಕೂಡಲೇ ಈ ಮಂಜೂರಾತಿಯನ್ನು ರದ್ದುಪಡಿಸಬೇಕು ಎಂದು ಆಗ್ರಹಿಸಿದರು.

ಅರಹಳ್ಳಿ ಗುಡದಹಳ್ಳಿ ಗ್ರಾಮದ ಸರ್ವೆ ನಂಬರ್ 57 ರಲ್ಲಿ ಸುಮಾರು 30 ಬಡ ಕುಟುಂಬಗಳು ಮತ್ತು ದಲಿತ ನಿರಾಶ್ರಿತರು ವಾಸವಿದ್ದು,94ಸಿಸಿ ಅಡಿಯಯಲ್ಲಿ ಅಕ್ರಮ ಸಕ್ರಮ ಅರ್ಜಿಸಲ್ಲಿಸಿದರೂ ಅವರಿಗೆ ಹಕ್ಕು ಪತ್ತ ನೀಡದೇ ಉದ್ದೇಶ ಪೂರ್ವಕವಾಗಿ ತಹಶೀಲ್ದಾರ್ ವಜಾಗೊಳಿಸಿದ್ದಾರೆ.

ಇದರ ಪರಿಣಾಮ ಇಲ್ಲಿನ ಕುಟುಂಬಗಳಿಗೆ ಮೂಲಭೂತ ಸೌಕರ್ಯ ದೊರೆಯದಂತಾಗಿವೆ ಎಂದರು.

ಪಟ್ಟಣ ಪಂಚಾಯಿತಿಯಲ್ಲಿ ಅಕ್ರಮ ಖಾತೆಗಳಿಗೆ ಕಾರಣವಾಗಿರುವ ಅಧಿಕಾರಿಗಳ ವಿರುದ್ಧ ಕ್ರಮಗೈಕೊಂಡು ಪಟ್ಟಣ ಪಂಚಾಯಿತಿ ಹುದ್ದೆಯಿಂದ ತೆಗೆಯಬೇಕು ಮತ್ತು ಲೋಕಾಯುಕ್ತ ತನಿಖೆಗೆವಹಿಸಬೇಕು ಎಂದು ಆಗ್ರಹಿಸಿ ತಹಶೀಲ್ದಾರ್ ವಿಭಾ ವಿದ್ಯಾ ರಾಥೋಡ್ ಅವರಿಗೆ ಮನವಿ ಪತ್ರ ಸಲ್ಲಿಸಿದರು.

ಪ್ರತಿಭಟನೆಯಲ್ಲಿ ಮುಂಖಡರಾದ ಮುರುಳಿ, ಬಿಸುವನಹಳ್ಳಿ ನಾರಾಯಣಸ್ವಾಮಿ,ಕಸುವನಹಳ್ಳಿ ರವಿಕುಮಾರ್, ಎಳ್ಳುಪುರ ಮಹೇಶ್,ಓಬದೇನಹಳ್ಳಿ ರಾಜು, ಮುನಿರಾಜು ಸೇರಿದಂತೆ ಪ್ರಜಾ ವಿಮೋಚನಾ ಚಳವಳಿ (ಸಮತಾವಾದ),ಜನಧ್ವನಿ ವೇದಿಕೆ, ಪ್ರಭುದ್ಧ ಕರ್ನಾಟಕ ಭೀಮಸೇನೆ,ಭೂಮಿ, ವಸತಿ ವಂಚತರ ಹೋರಾಟ ಸಮನ್ವಯ ಸಮಿತಿಯ ಪದಾಧಿಕಾರಿಗಳು ಇದ್ದರು.

Exit mobile version