ಮುಂಬೈ: ಫೆಮಿನಾ ಮಿಸ್ ಇಂಡಿಯಾ (MissIndia) 2024ರ ಕಿರೀಟವನ್ನು ಮಧ್ಯಪ್ರದೇಶದ ನಿಕಿತಾ ಪೋರ್ವಾಲ್ ಅವರು ಮುಡಿಗೇರಿದೆ.
ಸ್ಪರ್ಧೆಯ ತೀರ್ಪುಗಾರರಾಗಿ ಮಾಜಿ ಸ್ಪರ್ಧಿ ಸಂಗೀತಾ ಬಿಜ್ಲಾನಿ, ನಿಕಿತಾ ಮಹೈಸಲ್ಕರ್, ಅನೀಸ್ ಬಾಜ್, ನೇಹಾ ಧೂಪಿಯಾ, ಬಾಸ್ಕೋ ಮಾರ್ಟಿಸ್ ಮತ್ತು ಮಧುರ್ ಭಂಡಾರ್ಕರ್ ಇದ್ದರು.
ಮಿಸ್ ವರ್ಲ್ಡ್ ಸ್ಪರ್ಧೆಯ ಮುಂದಿನ ಆವೃತಿಯಲ್ಲಿ ನಿಕಿತಾ ಅವರು ಭಾರತವನ್ನು ಪ್ರತಿನಿಧಿಸಲಿದ್ದು, ಮಿಸ್ ಇಂಡಿಯಾ-2023ರ ವಿಜೇತೆ ನಂದಿನಿ ಗುಪ್ತಾ ಅವರು ನಿಕಿತಾ ಅವರಿಗೆ ಕಿರೀಟ ತೊಡಿಸಿದರು.
ದಾದ್ರಾ ಮತ್ತು ನಗರ ಹವೇಲಿಯ ರೇಖಾ ಪಾಂಡೆ ಮತ್ತು ಗುಜರಾತ್ನ ಆಯುಷಿ ಧೋಲಾಕಿಯಾ ಅವರು ಕ್ರಮವಾಗಿ ಮೊದಲ ಮತ್ತು ಎರಡನೇ ರನ್ನರ್ ಅಪ್ ಆಗಿದ್ದಾರೆ.