Site icon ಹರಿತಲೇಖನಿ

ಮನೆ ಬೀಗ ಮುರಿಯದೆ ಕದಿಯುವ ಡೆಲಿವರಿ ಬಾಯ್..!

Dandupalya gang associates arrested..!

Dandupalya gang associates arrested..!

ಬೆಂಗಳೂರು: ಬೀಗ ಹಾಕಿ ಮನೆ ಮುಂಭಾಗದಲ್ಲಿ ಕೀ ಇಡಬೇಡಿ ಎಂದು ಪೊಲೀಸರು ನಿರಂತರ ಜಾಗೃತಿ ಮೂಡಿಸಿದರೂ ಕೆಲವರು ಎಚ್ಚರ ವಹಿಸುತ್ತಿಲ್ಲ.

ಮಾಲೀಕರ ನಿರ್ಲಕ್ಷ್ಯವನ್ನು ಬಂಡವಾಳ ಮಾಡಿಕೊಂಡ ಖದೀಮನೊಬ್ಬ ಮನೆ ಮುಂದಿಟ್ಟಿದ್ದ ಕೀ ಬಳಸಿಕೊಂಡು ಕಳ್ಳತನ ಮಾಡಿ, ಇದೀಗ ವೈಟ್ ಫೀಲ್ಡ್ ಠಾಣೆ ಪೊಲೀಸರ ಅತಿಥಿಯಾಗಿದ್ದಾನೆ.

ಪ್ರದೀಪ್ ಬಂಧಿತ ಖದೀಮ. ಈತನಿಂದ 10 ಲಕ್ಷ ರೂ. ಮೌಲ್ಯದ 152 ಗ್ರಾಂ ಚಿನ್ನ ಹಾಗೂ ಒಂದು ದ್ವಿಚಕ್ರ ವಾಹನ ವಶಕ್ಕೆ ಪಡೆದುಕೊಳ್ಳಲಾಗಿದೆ.

ಆರೋಪಿಯು ಕಂಪನಿಯೊಂದರ ಡೆಲಿವರಿ ಬಾಯ್ ಆಗಿ ಹಲವು ತಿಂಗಳಿನಿಂದ ಕೆಲಸ ಮಾಡುತ್ತಿದ್ದ. ಡೆಲಿವರಿ ಮಾಡಲು ಮನೆಗಳಿಗೆ ಹೋದಾಗ ಮಾಲೀಕರು ಮನೆ ಮುಂದೆ ಕೀ ಇಡುವ ಬಗ್ಗೆ ಅರಿತುಕೊಂಡಿದ್ದ ಎಂದು ಪೊಲೀಸರು ತಿಳಿಸಿದ್ದಾರೆ.

ಚಿನ್ನಾಭರಣ, ನಗದು ಕಳ್ಳತನ: ಇದೇ ರೀತಿ ಸೆಪ್ಟೆಂಬರ್ 27ರಂದು ಜ್ಯೂಸ್ ಅಂಗಡಿಗೆ ತೆರಳಲು ಮಾಲೀಕರು ಮನೆ ಲಾಕ್‌ಮಾಡಿ, ಕೀಯನ್ನು ಮನೆ ಹೊರಗಡೆಯ ಪ್ಲಾಸ್ಟಿಕ್ ಬಾಕ್ಸ್‌ನಲ್ಲಿ ಇಟ್ಟು ಹೋಗಿದ್ದರು. ಇದನ್ನು ಅರಿತ ಪ್ರದೀಪ್, ಬೀಗ ತೆಗೆದು ಮನೆಗೆ ನುಗ್ಗಿ ಬಿರುವಿನಲ್ಲಿದ್ದ 8 ಗ್ರಾಂ ಚಿನ್ನ ಹಾಗೂ 10 ಸಾವಿರ ನಗದು ದೋಚಿಕೊಂಡು ಪರಾರಿಯಾಗಿದ್ದ ಎಂದು ಪೊಲೀಸರು ಹೇಳಿದ್ದಾರೆ.

ಕಳ್ಳತನ ತಿಳಿದು ಮಾಲೀಕರೇ ದಂಗು: ಮನೆ ಮಾಲೀಕರು ನೀಡಿದ ದೂರಿನ ಮೇರೆಗೆ ಪ್ರಕರಣ ದಾಖಲಿಸಿಕೊಂಡ ಪೊಲೀಸರು, ತನಿಖೆ ಕೈಗೊಂಡು ಆರೋಪಿ ಬಂಧಿಸಿದ್ದರು. ಹೆಚ್ಚಿನ ವಿಚಾರಣೆಗೊಳಪಡಿಸಿದಾಗ ವೈಟ್‌ಫೀಲ್ಡ್ ಠಾಣಾ ವ್ಯಾಪ್ತಿಯ ಆರು ಕಡೆಗಳಲ್ಲಿ ಕಳ್ಳತನ ಎಸಗಿರುವುದಾಗಿ ಒಪ್ಪಿಕೊಂಡಿದ್ದಾನೆ.

ಕಳ್ಳತನವು ಕೃತ್ಯ ಮನೆ ಮಾಲೀಕರಿಗೂ ತಿಳಿದಿರಲಿಲ್ಲ. ಈ ಬಗ್ಗೆ ಪೊಲೀಸರು ವಿಷಯ ತಿಳಿಸಿದಾಗ ಮಾಲೀಕರೇ ದಂಗಾಗಿದ್ದಾರೆ. ಈ ಹಿಂದೆ ಮಹದೇವಪುರ ಠಾಣೆ ವ್ಯಾಪ್ತಿ ಯಲ್ಲಿನ ಕಳ್ಳತನ ಪ್ರಕರಣದಲ್ಲಿಯೂ ಬಂಧಿಸಲಾಗಿತ್ತು ಎಂದು ಪೊಲೀಸ್ ಅಧಿಕಾರಿಗಳು ಮಾಹಿತಿ ನೀಡಿದ್ದಾರೆ.

Exit mobile version