ಮೈಸೂರು; ಮದ್ಯದ ಅಮಲಿನಲ್ಲಿ ಭಾವನೇ ಭಾವಮೈ ದುನನ್ನು ಮಚ್ಚಿನಿಂದ ಕೊಚ್ಚಿ ಬರ್ಭರ ವಾಗಿ ಹತ್ಯೆಗೈದಿರುವ (Murder) ಘಟನೆ ಮೇಟಗಳ್ಳಿಯಲ್ಲಿ ನಡೆದಿದೆ.
ಪಿರಿಯಾಪಟ್ಟಣದ ಈಡಿಗರ ಬೀದಿಯ ನಿವಾಸಿ ಮನೋಜ್ (26) ಕೊಲೆಯಾದ ಬಾಮೈದ. ವಿನೋದ್ ಕೊಲೆ ಮಾಡಿದ ಭಾವ.
ಹಣಕಾಸಿನ ವಿಚಾರವಾಗಿ ಭಾವ ಭಾವಮೈದುನನ ನಡುವೆ ದಿನನಿತ್ಯ ಜಗಳ ನಡೆಯುತ್ತಿತ್ತು. ಮದ್ಯ ಸೇವಿಸಿ ಮನೋಜ್ ಮನೆಗೆ ಬಂದು ಗಲಾಟೆ ಮಾಡುತ್ತಿದ್ದ. ಆತನ ಉಪಟಳ ತಾಳಲಾರದೇ ವಿನೋದ್ ಸಮಾಧಾನ ಮಾಡಿ ಪುಸಲಾಯಿಸಿ ಬಾರ್‌ಗೆ ಕರೆದುಕೊಂಡು ಹೋಗಿ ಕಂಠಪೂರ್ತಿ ಮದ್ಯ ಸೇವಿಸಿದ್ದಾರೆ.
ಈ ವೇಳೆ ಮನೋಜ್ ಪ್ರಜ್ಞೆ ತಪ್ಪಿದ್ದು, ಎಚ್ಚರದಲ್ಲಿದ್ದ ವಿನೋದ್ ಭಾವಮೈದುನನ ಮೇಲೆ ಮನಸೋಇಚ್ಛೆ ಮಚ್ಚಿನಿಂದ ಕೊಚ್ಚಿ ಕೊಲೆ ಮಾಡಿ ಪರಾರಿಯಾಗಿದ್ದಾನೆ.
ಬಾರ್ ಸಿಬ್ಬಂದಿ ಹೋಗಿ ನೋಡಿದಾಗ ಕೊಲೆ ನಡೆದಿರುವುದು ಬೆಳಕಿಗೆ ಬಂದಿದೆ. ಕೂಡಲೇ ಮೇಟಗಳ್ಳಿ ಪೊಲೀಸರಿಗೆ ಮಾಹಿತಿ ತಿಳಿಸಿದ್ದಾರೆ.
ಸ್ಥಳಕ್ಕಾಗಮಿಸಿದ ಪೊಲೀಸರು ಹಾಗೂ ಎಫ್‌ಎಸ್‌ಐಎಲ್ ತಂಡ ಪರಿಶೀಲನೆ ನಡೆಸಿ ಪ್ರಕರಣ ದಾಖಲಿಸಿಕೊಂಡು ಆರೋಪಿ ಪತ್ತೆಗಾಗಿ ಬಲೆ ಬೀಸಿದ್ದಾರೆ.