ದೊಡ್ಡಬಳ್ಳಾಪುರ: ತಾಲೂಕಿನ ತಿಪ್ಪೂರು ಹಾಲು ಉತ್ಪಾದಕರ ಸಹಕಾರ ಸಂಘಕ್ಕೆ ನಡೆದ ನಿರ್ದೇಶಕರ ಚುನಾವಣೆಯಲ್ಲಿ ಕಾಂಗ್ರೆಸ್ ಬೆಂಬಲಿತ ಅಭ್ಯರ್ಥಿಗಳು ಭರ್ಜರಿ ಜಯ ಸಾಧಿಸಿದ್ದಾರೆ.
ಚುನಾವಣೆ ಅಧಿಕಾರಿ ಭಾಸ್ಕರ ಅವರ ನೇತೃತ್ವದಲ್ಲಿ ನಡೆದ ಚುನಾವಣೆಯಲ್ಲಿ ಕಾಂಗ್ರೆಸ್ ಬೆಂಬಲಿತ ಅಭ್ಯರ್ಥಿಗಳಾದ ಸುಧಾಕರ್, ಆನಂದ್.ಟಿ.ಆರ್., ಅಶೋಕ್, ಹರೀಶ್. ಎನ್., ರವಿಕುಮಾರ್.ಟಿ.ಎಂ., ಕೃಷ್ಣಮೂರ್ತಿ, ಸುಮಿತ್ರಾ, ಜಯಮ್ಮ, ಅನಸೂಯಮ್ಮಾ, ಶಾಂತಮ್ಮ, ಗಂಗಾಧರ, ಕುಮಾರ.ಎಂ ಮತ್ತು ರಾಜಣ್ಣ.ಪಿ ಅವರು ಆಯ್ಕೆಯಾಗಿದ್ದಾರೆ.
ಡೈರಿ ಆರಂಭವಾದ ಸುಮಾರು ಮೂವತ್ತು ವರ್ಷಗಳ ಬಳಿಕ ಇದೇ ಮೊದಲ ಬಾರಿಗೆ ಕಾಂಗ್ರೆಸ್ ಬೆಂಬಲಿತ ನಿರ್ದೇಶಕರ ಕಮಿಟಿ ಆಯ್ಕೆಯಾಗಿದೆ ಎನ್ನಲಾಗಿದೆ.
ವಿಜೇತರಾದ ನಿರ್ದೇಶಕರನ್ನು ಕೆಪಿಸಿಸಿ ಉಪಾಧ್ಯಕ್ಷ ಟಿ.ವೆಂಕಟರಮಣಯ್ಯ, ಮಾಜಿ ಶಾಸಕರಾದ ಆರ್.ಜಿ.ವೆಂಕಟಾಚಲಯ್ಯ, ದೊಡ್ಡಬಳ್ಳಾಪುರ ಯೋಜನಾ ಪ್ರಾಧಿಕಾರ ಅಧ್ಯಕ್ಷ ಚುಂಚೆಗೌಡ, ದೊಡ್ಡಬಳ್ಳಾಪುರ ಗ್ರಾಮಾಂತರ ಕಾಂಗ್ರೆಸ್ ಬ್ಲಾಕ್ ಅಧ್ಯಕ್ಷ ಎಂ.ಬೈರೇಗೌಡ ಹಾಗೂ ಸ್ಥಳೀಯ ಮುಖಂಡರು ಶುಭಕೋರಿದ್ದಾರೆ.