ಹುಣಸೂರು: ಆಸ್ಪತ್ರೆಗೆ ತೆರಳುತ್ತಿದ್ದ ತಂದೆ ಮಗಳಿಗೆ ಬೈಕ್ ಡಿಕ್ಕಿ ಹೊಡೆದ ಪರಿಣಾಮ 7 ವರ್ಷದ ಬಾಲಕಿ ಮೃತಪಟ್ಟು, ಬಾಲಕಿಯ ತಂದೆ ಹಾಗೂ ಬೈಕ್ ಸವಾರ ಗಂಭೀರ ಗಾಯಗೊಂಡಿರುವ ಘಟನೆ ನಗರದ ಬೈಪಾಸ್ ರಸ್ತೆಯಲ್ಲಿ ನಡೆದಿದೆ.
ಹುಣಸೂರು ತಾಲ್ಲೂಕಿನ ಎರಡನೇ ಪಕ್ಷಿರಾಜಪುರ ಗ್ರಾಮದ ಬಾಲಕಿ 7ವರ್ಷದ ಅರೋವಿ ಮೃತ ಬಾಲಕಿ.
ಅರೋವಿ ಜ್ವರದಿಂದ ಬಳಲುತ್ತಿದ್ದ ಹಿನ್ನೆಲೆಯಲ್ಲಿ ಅವರ ತಂದೆ ಪಿಲಿಪ್ ಜೊತೆಯಲ್ಲಿ ಕಾವೇರಿ ಆಸ್ಪತ್ರೆಗೆ ನಡೆದು ಹೋಗುವ ವೇಲೆ ಹೆದ್ದಾರಿಯಲ್ಲಿ ರಸ್ತೆ ದಾಟುತ್ತಿದ್ದ ಸಂದರ್ಭ ಮೈಸೂರು ಕಡೆಯಿಂದ ಬಂದ ಬೈಕ್ ತಂದೆ, ಮಗಳಿಗೆ ಡಿಕ್ಕಿ ಹೊಡೆದಿದೆ.
ಈ ವೇಳೆ ಬಾಲಕಿ ಗಂಭೀರ ಗಾಯಗೊಂಡು ಸ್ಥಳದಲ್ಲೇ ಮೃತಪಟ್ಟಿದ್ದರೆ. ತಂದೆ ಹಾಗೂ ಬೈಕ್ ಸವಾರನಿಗೆ ಗಾಯಗಳಾಗಿ ಆಸ್ಪತ್ರೆಗೆ ದಾಖಲಾಗಿದ್ದಾರೆ.