ಬೆಂಗಳೂರು; ನ್ಯಾಯಾಂಗ ಬಂಧನದಲ್ಲಿರುವ ಖ್ಯಾತ ನಟ ದರ್ಶನ್ ಅವರ ಪಾಲಿಗೆ ಇಂದು (ಸೋಮವಾರ) ಅತ್ಯಂತ ಮಹತ್ವದ ದಿನವಾಗಿದೆ.
ಅಶ್ಲೀಲ ಸಂದೇಶ ಕಳುಹಿಸಿದ ವ್ಯಕ್ತಿಯೋರ್ವನ ಹತ್ಯೆ ಆರೋಪದಡಿಯಲ್ಲಿ ನ್ಯಾಯಾಂಗ ಬಂಧನದಲ್ಲಿರುವ ದರ್ಶನ್ ಅವರಿಗೆ ಜಾಮೀನು ಅರ್ಜಿ ತೀರ್ಪು ಇಂದು ಹೊರಬೀಳಲಿದ್ದು, ಜಾಮೀನು ದೊರೆತು ದರ್ಶನ್ ಅವರು ಹೊರಬರಲಿ ಎಂದು ಅಸಂಖ್ಯಾತ ಅಭಿಮಾನಿಗಳು ದೇವರಲ್ಲಿ ಪ್ರಾರ್ಥಿಸುತ್ತಿದ್ದಾರೆ.
ಈ ನಡುವೆ ಬೇಕಾಬಿಟ್ಟಿ ಹೇಳಿಕೆ ನೀಡಿ ದರ್ಶನ್ ಅಭಿಮಾನಿಗಳ ಕೆಂಗಣ್ಣಿಗೆ ಗುರಿಯಾಗಿದ್ದ ನಟ ಪ್ರಥಮ್, ದರ್ಶನ್ ಬಗ್ಗೆ ಸಾಮಾಜಿಕ ಜಾಲತಾಣದಲ್ಲಿ ಪೋಸ್ಟ್ ಮಾಡಿದ್ದು, ದರ್ಶನ್ ಬಿಡುಗಡೆಗಾಗಿ ಪ್ರಾರ್ಥಿಸಿದ್ದಾರೆ.
ಪ್ರಥಮ್ ಪೋಸ್ಟ್
‘ಈಶ್ವರನಲ್ಲಿ ಪಾಮಾಣಿಕ ಪ್ರಾರ್ಥನೆ ದರ್ಶನ್ ಸರ್ ಬಿಡುಗಡೆಯಾಗಿ ಚಿತ್ರರಂಗದಲ್ಲಿ ಹೊಸ ಇನ್ನಿಂಗ್ಸ್ ಶುರು ಮಾಡುವಂತಾಗಲಿ. ಕೆಟ್ಟ ಕಾಲ ಎಲ್ಲರಿಗೂ ಬರುತ್ತದೆ.ಅದನ್ನು ದಾಟಿ ಅಭಿಮಾನಿಗಳನ್ನ ರಂಜಿಸಲಿ
ಅಂಧಾಭಿಮಾನಿ ಅಂದಿದ್ದು ನೋವಾಗಿದ್ದರೆ ಮರೆತುಬಿಡಿ. ವ್ಯಂಗ್ಯ ಬೇಡ; ದೇವ್ರಾಣೆ ಬಿಡುಗಡೆಯಾಗಲಿ. ಮನಸ್ಸಿನಿಂದ ಈಶ್ವರನಲ್ಲಿ ಪ್ರಾರ್ಥನೆ ಮಾಡಿದ್ದೇನೆ ಎಂದು ಪ್ರಥಮ್ ಪೋಸ್ಟ್ ಮಾಡಿದ್ದಾರೆ.
ಈ ಹಿಂದೆ ದರ್ಶನ್ ಬಗ್ಗೆ ಬೇಕಾಬಿಟ್ಟಿ ಹೇಳಿಕೆ ನೀಡಿದ್ದ ಪ್ರಥಮ್, ದರ್ಶನ್ ಅಭಿಮಾನಿಗಳಿಂದ ತೀವ್ರ ಆಕ್ರೋಶವನ್ನೂ ಸಹ ಎದುರಿಸಿದ್ದರು.
ಅಲ್ಲದೆ ಪದೇ ಪದೇ ದರ್ಶನ್ ಅಭಿಮಾನಿಗಳನ್ನು ಕೆರಳಿಸುವಂತಹ ಮಾತನಾಡಿ, ಕಾಟೇರನ ಅಭಿಮಾನಿಗಳ ಆಕ್ರೋಶದ ನುಡಿಗಳಿಗೆ ತತ್ತರಿಸಿದ್ದರು.
ಈಗ ಧಿಡೀರನೆ ದರ್ಶನ್ ಪರವಾಗಿ ಪೋಸ್ಟ್ ಹಾಕುವ ಮೂಲಕ ಪ್ರಥಮ್, ಕೆರಳಿರುವ ದರ್ಶನ್ ಅಭಿಮಾನಿಗಳ ಓಲೈಸಲು ಮುಂದಾಗಿದ್ದಾರೆ ಎನ್ನಲಾಗುತ್ತಿದೆ.