Site icon ಹರಿತಲೇಖನಿ

ಇಂದು ನಟ ದರ್ಶನ್ ಜಾಮೀನು ಅರ್ಜಿ ತೀರ್ಪು: ಅಭಿಮಾನಿಗಳ ಪ್ರಾರ್ಥನೆ

ಬೆಂಗಳೂರು: ಅಶ್ಲೀಲ ಸಂದೇಶ ಕಳುಹಿಸಿದ ವ್ಯಕ್ತಿಯೋರ್ವನ ಹತ್ಯೆ ಆರೋಪದಡಿಯಲ್ಲಿ ನ್ಯಾಯಾಂಗ ಬಂಧನದಲ್ಲಿರುವ ನಟ ದರ್ಶನ್ (Darshan) ಅವರ ಜಾಮೀನು ತೀರ್ಪು ಇಂದು ಹೊರಬೀಳಲಿದೆ.

ಸಿಸಿಎಚ್ 57 ಕೋರ್ಟ್ ತೀರ್ಪಿನತ್ತ ಎಲ್ಲರ ಚಿತ್ರ ಮೂಡಿದ್ದು, ನಟ ದರ್ಶನ್ ಜಾಮೀನು ಭವಿಷ್ಯ ತೀವ್ರ ಕುತೂಹಲಕ್ಕೆ ಕಾರಣವಾಗಿದೆ. ಎ2 ಆರೋಪಿ ದರ್ಶನ್, ಎ1 ಪವಿತ್ರಾ ಗೌಡ, ಎ8 ರವಿಶಂಕರ್, ಎ11 ನಾಗರಾಜ್ ಹಾಗೂ ಎ12 ಲಕ್ಷ್ಮಣ್, ಎ13 ದೀಪಕ್ ಜಾಮೀನು ಭವಿಷ್ಯ ನಿರ್ಧರ ವಾಗಲಿದೆ.

ಈಗಾಗಲೇ ಎಸ್‌ ಪಿಪಿ ದೀಪಕ್ ಮತ್ತು ರವಿಶಂಕರ್‌ಗೆ ಜಾಮೀನು ನೀಡಬಹುದು ಎಂದಿದ್ದಾರೆ. ಆದರೆ ದರ್ಶನ್ ಸೇರಿ ನಾಲ್ವರ ಜಾಮೀನಿಗೆ ಎಸ್‌ಪಿಪಿ ಆಕ್ಷೇಪ ವ್ಯಕ್ತಪಡಿಸಿದ್ದಾರೆ.

ದರ್ಶನ್ ಪರವಾಗಿ ವಕಾಲತ್ತು ವಹಿಸಿರುವ ಹಿರಿಯ ವಕೀಲರಾದ ಸಿವಿ ನಾಗೇಂದ್ರ ಸಾಕ್ಷ್ಯಗಳೇ ಇಲ್ಲವೆಂದು ಪ್ರಬಲವಾಗಿ ವಾದಿಸಿದ್ದಾರೆ. ಪವಿತ್ರಾಗೌಡ ಪರವಾಗಿ ಟಾಮಿ ಸೆಬಾಸ್ಟಿಯನ್ ವಾದಿಸಿದ್ದರು.

ವಾದ ಪ್ರತಿವಾದ ಆಲಿಸಿದ ನ್ಯಾಯಾಧೀಶರು ಇಂದು ತೀರ್ಪು ನೀಡುವುದಾಗಿ ತಿಳಿಸಿದ್ದು, ದರ್ಶನ್ ಅವರಿಗೆ ಜಾಮೀನು ದೊರಕಲೆಂದು ಅಭಿಮಾನಿಗಳು ದೇವರ ಮೊರೆಯಿಡುತ್ತಿದ್ದಾರೆ.

Exit mobile version