Site icon Harithalekhani

ದೊಡ್ಡಬಳ್ಳಾಪುರದ ಜಾಹ್ನವಿ ಕರ್ನಾಟಕ ತಂಡದ ನಾಯಕಿ..!

ದೊಡ್ಡಬಳ್ಳಾಪುರ; ಯೋಗ ಫೆಡರೇಷನ್ ಆಫ್ ಇಂಡಿಯಾ ಮತ್ತು ಹಿಮಾಚಲ ಯೋಗ ಅಸೋಸಿಯೇಷನ್ ವತಿಯಿಂದ ಆಯೋಜಿಸಲಾಗಿರುವ 49ನೇ ರಾಷ್ಟ್ರೀಯ ಸಬ್ ಜೂನಿಯರಮತ್ತು ಜೂನಿಯರ್ ಯೋಗ ಕ್ರೀಡಾ ಚಾಂಪಿಯನ್ ಶಿಪ್ 2024ಗೆ ಕರ್ನಾಟಕ ರಾಜ್ಯ ತಂಡದ ಬಾಲಕಿಯರ ವಿಭಾಗದ ನಾಯಕಿಯಾಗಿ ಆಯ್ಕೆಯಾಗಿದ್ದಾರೆ.

ಇವರಿಗೆ ಕರ್ನಾಟಕ ರಾಜ್ಯ ಅಮೆಚೂರ್ ಯೋಗ ಕ್ರೀಡಾ ಸಂಸ್ಥೆಯ ಅಧ್ಯಕ್ಷ ಜಿ.ಎನ್.ಕೃಷ್ಣಮೂರ್ತಿ, ಬೆಂಗಳೂರು ಗ್ರಾಮಾಂತರ ಜಿಲ್ಲಾ ಅಮೆಚೂರು ಯೋಗ ಕ್ರೀಡಾ ಸಂಸ್ಥೆಯ ಅಧ್ಯಕ್ಷ ಪ್ರೊ.ಎಂ.ಜಿ.ಅಮರನಾಥ್, ನಿಸರ್ಗ ಯೋಗ ಕೇಂದ್ರದ ಕಾರ್ಯದರ್ಶಿ ಯೋಗ ನಟರಾಜ್, ಖಜಾಂಚಿ ಕೆ.ಆರ್.ಶ್ಯಾಮ ಸುಂದರ್, ನಿಸರ್ಗ ಯೋಗ ಕೇಂದ್ರದ ವಿದ್ಯಾರ್ಥಿ ವಿದ್ಯಾರ್ಥಿನಿಯರು ಶುಭ ಕೋರಿದ್ದಾರೆ.

Exit mobile version