Site icon ಹರಿತಲೇಖನಿ

ದೆವ್ವ ಚಲಾಯಿಸ್ತಾ ಬೆಂಕಿ ಹೊತ್ತಿದ ಕಾರನ್ನ..?; ದಿಕ್ಕಾಪಾಲಾಗಿ ಓಡಿದ ಜನ..!| ವೈರಲ್ ವಿಡಿಯೋ ನೋಡಿ

Channel Gowda
Hukukudi trust

ಜೈಪುರ: ರಸ್ತೆಯಲ್ಲಿ ಚಾಲಕನಿಲ್ಲದ ಕಾರು ಬೆಂಕಿ ಹೊತ್ತಿಕೊಂಡಿದ್ದರು, ತನ್ನಷ್ಟಕ್ಕೆ ತಾನೆ ಚಲಿಸಿ, ಸುಟ್ಟು ಕರಕಲಾದ ಘಟನೆ ರಾಜಸ್ಥಾನದ ಜೈಪುರದಲ್ಲಿ ನಡೆದಿದೆ.

Aravind, BLN Swamy, Lingapura

ಈ ಘಟನೆಯ ವಿಡಿಯೋ ಸಾಮಾಜಿಕ ಜಾಲತಾಣದಲ್ಲಿ ವೈರಲ್ ಆಗಿದೆ.

ಕಾರಿನ ಚಾಲಕ ಜಿತೇಂದ್ರ ಜಂಗಿದ್ ಅವರು ಕಾರಿನ ಎಸಿಯಿಂದ ಹೊಗೆ ಬರುತ್ತಿರುವುದನ್ನು ಗಮನಿಸಿದ್ದಾರೆ. ಅದಾದ ನಂತರ ಜಿತೇಂದ್ರ ಕಾರನ್ನು ನಿಲ್ಲಿಸಿ, ಬಾನೆಟ್ ತೆರೆದು ಎಂಜಿನ್‌ಗೆ ಬೆಂಕಿ ಹೊತ್ತಿರುವುದನ್ನು ನೋಡಿದ್ದಾರೆ.

Aravind, BLN Swamy, Lingapura

ಕಾರಿನಿಂದ ಇಳಿಯುವ ಮುನ್ನ ಹ್ಯಾಂಡ್‌ಬ್ರೇಕ್ ಹಾಕಿ ಕಾರಿನಿಂದ ಹೊರ ಬಂದಿದ್ದಾರೆ. ಆದರೆ ಇದಕ್ಕಿದ್ದಂತೆ ಕಾರು ಚಲಿಸಲು ಪ್ರಾರಂಭಿಸಿದೆ. ಅದಾದ ಬಳಿಕ ಬೆಂಕಿ ಜೋರಾಗಿ ಉರಿದಿದ್ದು ಸುಟ್ಟು ಕರಕಲಾಗಿದೆ.

ಘಟನೆಯ ವೇಳೆ ಸ್ಥಳದಲ್ಲಿದ್ದ ಸಾರ್ವಜನಿಕರು ದಿಕ್ಕಾಪಾಲಾಗಿ ಓಡಿದ್ದಾರೆ. ಘಟನೆಯ ವಿಡಿಯೋಗೆ ಘೋಸ್ಟ್‌ ರೈಡರ್ (Ghost Rider) ಎಂದು ಹೆಸರನ್ನು ಇಡಲಾಗಿದ್ದು, ಸಾಮಾಜಿಕ ಜಾಲತಾಣದಲ್ಲಿ ವೈರಲ್ ಆಗಿದೆ‌.

ಘಟನೆಗೆ ಕಾರಣವೇನು ಎಂದು ಅಧಿಕಾರಿಗಳು ತನಿಖೆ ನಡೆಸುತ್ತಿದ್ದಾರೆ.

Exit mobile version