ಗೂಡ್ಸ್‌ ರೈಲಿಗೆ ಮೈಸೂರು-ದರ್ಬಾಂಗ ಎಕ್ಸ್‌ಪ್ರೆಸ್‌ ರೈಲು ಡಿಕ್ಕಿ: ನಿನ್ನೆ ತುಂಬಾ ಒಳ್ಳೇ ದಿನ ಎಂದ ಸೋಮಣ್ಣ

ಬೆಂಗಳೂರು: ನಿನ್ನೆ ರಾತ್ರಿ ತಮಿಳುನಾಡಿನ ತಿರುವಳ್ಳೂರು ಜಿಲ್ಲೆಯ ಕವರಪೇಟ್ಟೈನಲ್ಲಿ ಸಂಭವಿಸಿದ ರೈಲು ಅಪಘಾತ ಇಡೀ ದೇಶವನ್ನೇ ಬೆಚ್ಚಿಬೀಳಿಸಿದ್ದು, ಪದೇ ಪದೇ ಸಂಭವಿಸುತ್ತಿರುವ ರೈಲುಗಳ ಅಪಘಾತ ಕುರಿತು ಕೇಂದ್ರ ಸರ್ಕಾರದ ವಿರುದ್ಧ ವ್ಯಾಪಕ ಆಕ್ರೋಶ ವ್ಯಕ್ತವಾಗುತ್ತಿದೆ.

ಘಟನೆ ಸಂಬಂಧ ರೈಲ್ವೆ ಇಲಾಖೆ ರಾಜ್ಯ ಸಚಿವ ಸೋಮಣ್ಣ ಪ್ರತಿಕ್ರಿಯೆ ನೀಡಿದ್ದು, ಗೂಡ್ಸ್‌ ರೈಲಿಗೆ ಮೈಸೂರು-ದರ್ಬಾಂಗ ಎಕ್ಸ್‌ಪ್ರೆಸ್‌ ರೈಲು ಡಿಕ್ಕಿಯಾಗಿ ಭಾರಿ ಅನಾಹುತ ನಡೆದಿದೆ. ಆದರೆ ಅದೃಷ್ಟವಶಾತ್ ರೈಲಿನಲ್ಲಿದ್ದ ಅಷ್ಟೂ ಜನರ ಜೀವ ಉಳಿದಿದೆ. ನಿನ್ನೆ ತುಂಬಾ ಒಳ್ಳೇ ದಿನ, ದೇವರ ದಯೆಯಿಂದ ಅಪಘಾತದಲ್ಲಿ ದೊಡ್ಡ ಅನಾಹುತ ತಪ್ಪಿದೆ ಎಂದರು.

ರೈಲ್ವೆ ಅಪಘಾತದಲ್ಲಿ 19 ಜನರು ಗಾಯಗೊಂಡಿದ್ದಾರೆ. ರೈಲು ಅಪಘಾತದಲ್ಲಿ ಇಬ್ಬರಿಗೆ ಗಂಭೀರವಾಗಿ ಗಾಯವಾಗಿದ್ದು ಅದೃಷ್ಟವಶಾತ್ ಯಾವುದೇ ಸಾವು ಸಂಭವಿಸಿಲ್ಲ. 13 ಬೋಗಿಗಳು ಹಳಿ ತಪ್ಪಿದ್ವು ಎಂದು ವಿ.ಸೋಮಣ್ಣ ತಿಳಿಸಿದ್ದಾರೆ.

ಅಪಘಾತದಲ್ಲಿ ದೊಡ್ಡ ಅನಾಹುತವಾಗಿಲ್ಲ. ಎಲ್ಲ ಪ್ರಯಾಣಿಕರನ್ನೂ ಮೆಮು ಟ್ರೈನ್ ಮೂಲಕ ಶಿಫ್ಟ್ ಮಾಡಲಾಗಿದೆ. ಪ್ರಯಾಣಿಕರಿಗೆ ಊಟ, ವಸತಿ ವ್ಯವಸ್ಥೆ ಮಾಡಲಾಗಿದೆ. ಇಂದು ಅವರು ಎಲ್ಲೆಲ್ಲಿಗೆ ತಲುಪಬೇಕು ಅಲ್ಲಿಗೆ ವ್ಯವಸ್ಥೆ ಮಾಡಲಾಗುವುದು. ದೇವರ ದಯೆಯಿಂದ ದೊಡ್ಡ ಅನಾಹುತ ತಪ್ಪಿದೆ. ಯಾವ ಕಾರಣಕ್ಕೆ ಅಪಘಾತವಾಯ್ತು ಎಂದ ತನಿಖೆ ಆಗಬೇಕಿದೆ ಎಂದರು.

ಇನ್ನು ನಿನ್ನೆಯೇ ಸ್ಥಳೀಯರು ರೈಲಿನಲ್ಲಿದ್ದವರನ್ನ ರಕ್ಷಿಸಿದ್ದಾರೆ. ತಮಿಳುನಾಡು ಪೊಲೀಸರು, ರೈಲ್ವೆ ಅಧಿಕಾರಿಗಳು, NDRF ಸಿಬ್ಬಂದಿ ಸ್ಥಳಕ್ಕೆ ಆಗಮಿಸಿ ರಕ್ಷಣಾ ಕಾರ್ಯಾಚರಣೆ ಮಾಡಿದ್ದಾರೆ. ಗಾಯಗೊಂಡವರನ್ನ ಆಸ್ಪತ್ರೆಗಳಿಗೆ ರವಾನಿಸಲಾಗಿದೆ.

ಅಪಘಾತದಲ್ಲಿ ಎಲ್ಲಾ ಪ್ರಯಾಣಿಕರು ಕ್ಷೇಮವಾಗಿದ್ದಾರೆ. ಆದರೂ, ಶ್ವಾನ ದಳದಿಂದ ಯಾರಾದ್ರೂ ನಾಪತ್ತೆಯಾಗಿದ್ದಾರಾ ಅಂತಾ ಹುಡುಕಾಟ ನಡೆದಿದೆ. ರೈಲ್ವೆ ಇಲಾಖೆ ಸಹಾಯವಾಣಿ ಕೂಡ ಓಪನ್‌ ಮಾಡಿದೆ. ಪ್ರಯಾಣಿಕರ ಬಗ್ಗೆ ಮಾಹಿತಿ ನೀಡುತ್ತಿದೆ. ಬದುಕುಳಿದ ಪ್ರಯಾಣಿಕರು ಘಟನೆಯ ಬಗ್ಗೆ ವಿವರಿಸಿದ್ದಾರೆ.

ಶುಕ್ರವಾರ ಸಂಜೆ ಮೈಸೂರಿನಿಂದ ಹೊರಟಿದ್ದ ಎಕ್ಸ್‌ಪ್ರೆಸ್‌ ರೈಲು ಬೆಂಗಳೂರಿನ KSR ರೈಲ್ವೆ ನಿಲ್ದಾಣ ದಾಟಿ ಹೋಗ್ತಿತ್ತು. ರಾತ್ರಿ 8 ಗಂಟೆ ಸುಮಾರಿಗೆ ಪೆರಂಬೂರು ದಾಟಿದ್ದ ರೈಲು, ದರ್ಬಾಂಗದತ್ತ ಪ್ರಯಾಣ ಬೆಳೆಸಿತ್ತು. ಆದ್ರೆ, 75 ಕಿಲೋಮೀಟರ್‌ ವೇಗದಲ್ಲಿ ಸಂಚರಿಸುತ್ತಿದ್ದ ಎಕ್ಸ್‌ಪ್ರೆಸ್‌ ರೈಲು, ಕಾವರಪೇಟ್ಟೈ ತಲುಪುತ್ತಿದ್ದಂತೆ ಲೂಪ್‌ ಲೇನ್‌ನಲ್ಲಿದ್ದ ಗೂಡ್ಸ್‌ ರೈಲಿಗೆ ಡಿಕ್ಕಿ ಹೊಡೆದಿತ್ತು.

ಪೆರಂಬೂರು ದಾಟಿ ಕಾವರಪೇಟ್ಟೈಗೆ ಎಕ್ಸ್‌ಪ್ರೆಸ್ ರೈಲು ತೆರಳುತ್ತಿತ್ತು. ಕಾವರ ಪೇಟ್ಟೈ ರೈಲು ನಿಲ್ದಾಣದಲ್ಲಿ ಮುಖ್ಯ ಲೇನ್‌ಗೆ ಹೋಗುವಂತೆ ಸೂಚನೆ ಸಿಗ್ನಲ್‌ ನೀಡಿದ್ರು. ಆದರೆ, ಮೇನ್‌ ಲೇನ್‌ಗೆ ಸಿಗ್ನಲ್‌ ಇದ್ದರೂ ಗೂಡ್ಸ್‌ ರೈಲು ನಿಂತಿದ್ದ ಲೂಪ್‌ ಲೇನ್‌ ಟ್ರ್ಯಾಕ್‌ಗೆ ನುಗ್ಗಿತ್ತು. ಗೂಡ್ಸ್ ರೈಲಿಗೆ ಗುದ್ದಿದ ರಭಸಕ್ಕೆ, 75 km ವೇಗದಲ್ಲಿ ಗೂಡ್ಸ್‌ ರೈಲಿಗೆ ಡಿಕ್ಕಿ ಆಗಿದೆ. ಡಿಕ್ಕಿಯಾದ ರಭಸಕ್ಕೆ ರೈಲಿನ ಬೋಗಿಯಲ್ಲಿ ಬೆಂಕಿ ಹೊತ್ತಿಕೊಂಡಿದೆ.

ಎಕ್ಸ್‌ಪ್ರೆಸ್‌ ರೈಲಿನಲ್ಲಿದ್ದ ಎಲ್ಲರಿಗೂ ಭೂಕಂಪನದ ಅನುಭವವಾಗಿದೆ. 12ರಿಂದ 13 ಬೋಗಿಗಳು ಹಳಿ ತಪ್ಪಿ ಅಕ್ಕಪಕ್ಕಕ್ಕೆ ಬಂದು ಬಿದ್ದಿದೆ.

ಘಟನೆ ಹಿನ್ನೆಲೆಯಲ್ಲಿ, ರೈಲ್ವೆ ಇಲಾಖೆ ಒಟ್ಟು 8 ರೈಲುಗಳ ಸಂಚಾರ ಮಾರ್ಗವನ್ನ ಬದಲಿಸಿದೆ. ಈ ಬಗ್ಗೆ ಮಾಧ್ಯಮ ಪ್ರಕಟಣೆ ಹೊರಡಿಸಿದೆ. ಚೆನ್ನೈ-ವಿಜಯವಾಡ, ವಿಜಯವಾಡ-ಚೆನ್ನೈ 2 ರೈಲುಗಳ ಸಂಚಾರವನ್ನ ರದ್ದು ಮಾಡಿದೆ. ಇನ್ನು, ತಮಿಳುನಾಡು ಮುಖ್ಯಮಂತ್ರಿ ಎಂ.ಕೆ. ಸ್ಟಾಲಿನ್‌ ಘಟನೆ ಬಗ್ಗೆ ಕಳವಳ ವ್ಯಕ್ತಪಡಿಸಿದ್ದಾರೆ. ಇನ್ನು, ಉಪ ಮುಖ್ಯಮಂತ್ರಿ ಉದಯನಿಧಿ ಸ್ಟಾಲಿನ್‌ ಆಸ್ಪತ್ರೆಗಳಿಗೆ ಭೇಟಿ ನೀಡಿ, ಗಾಯಾಳುಗಳ ಆರೋಗ್ಯ ವಿಚಾರಿಸಿದ್ದಾರೆ.

ರಾಜಕೀಯ

ತಮಿಳುನಾಡು BJP ಅಧ್ಯಕ್ಷ ಸ್ಥಾನದ ರೇಸ್ ನಲ್ಲಿ ನಾನಿಲ್ಲ; ಅಣ್ಣಾಮಲೈ

ತಮಿಳುನಾಡು BJP ಅಧ್ಯಕ್ಷ ಸ್ಥಾನದ ರೇಸ್ ನಲ್ಲಿ ನಾನಿಲ್ಲ; ಅಣ್ಣಾಮಲೈ

ಕೊಯಮತ್ತೂರಿನಲ್ಲಿ ಸುದ್ದಿಗಾರರೊಂದಿಗೆ ಮಾತನಾಡಿದ ಅವರು, ಬಿಜೆಪಿ ಅಧ್ಯಕ್ಷ ಹುದ್ದೆಗೆ ನಾನು ಸ್ಪರ್ಧೆ ಮಾಡುವುದಿಲ್ಲ. ನಾವೆಲ್ಲರೂ ಒಗ್ಗಟ್ಟಿನಿಂದ ಪಕ್ಷಕ್ಕೆ Annamalai

[ccc_my_favorite_select_button post_id="104958"]
ಮೈ ಫ್ರೆಂಡ್ ಮೋದಿ ಎನ್ನುತ್ತಲೇ ಭಾರತಕ್ಕೆ ಬರೆ ಎಳೆದ ಟ್ರಂಪ್

ಮೈ ಫ್ರೆಂಡ್ ಮೋದಿ ಎನ್ನುತ್ತಲೇ ಭಾರತಕ್ಕೆ ಬರೆ ಎಳೆದ ಟ್ರಂಪ್

ಇಷ್ಟು ದಿನ ಬಾಯಿ ಮಾತಲ್ಲೇ ಸುಂಕ ಸಂಘರ್ಷದ ಮಾತುಗಳನ್ನು ಆಡುತ್ತಾ ಬಂದಿದ್ದ ಅಮೆರಿಕ ಅಧ್ಯಕ್ಷ ಡೊನಾಲ್ಡ್ ಟ್ರಂಪ್, ಮಂಗಳವಾರ ಮಧ್ಯರಾತ್ರಿ 2.20 (ಭಾರತೀಯ ಕಾಲಮಾನ) trump

[ccc_my_favorite_select_button post_id="104924"]
los angeles fire| ಅಮೆರಿಕ ಕಾಡ್ಗಿಚ್ಚು: ಸಾವಿನ ಸಂಖ್ಯೆ 11ಕ್ಕೆ| Video

los angeles fire| ಅಮೆರಿಕ ಕಾಡ್ಗಿಚ್ಚು: ಸಾವಿನ ಸಂಖ್ಯೆ 11ಕ್ಕೆ| Video

ಹಾಲಿವುಡ್ ಹಿಲ್ ಹಾಗೂ ಸ್ಟುಡಿಯೋ ಸಿಟಿಗೆ ಹೊತ್ತಿಕೊಂಡಿದ್ದ ಬೆಂಕಿಯನ್ನು ವಿಮಾನ, ಹೆಲಿಕಾಪ್ಟರ್ ಗಳ ಮೂಲಕ ನೀರು ಸಿಂಪಡಿಸಿ ನಂದಿಸಲಾಗಿತ್ತು los Angeles fire

[ccc_my_favorite_select_button post_id="100721"]

ಕ್ರೀಡೆ

ಏಪ್ರಿಲ್ 5 ರಂದು ಬೆಂ.ಗ್ರಾ. ಜಿಲ್ಲಾ ಮಟ್ಟದ ಸರ್ಕಾರಿ ನೌಕರರ ಕ್ರೀಡಾಕೂಟ

ಏಪ್ರಿಲ್ 5 ರಂದು ಬೆಂ.ಗ್ರಾ. ಜಿಲ್ಲಾ ಮಟ್ಟದ ಸರ್ಕಾರಿ ನೌಕರರ ಕ್ರೀಡಾಕೂಟ

2024-25 ನೇ ಸಾಲಿನ ಬೆಂಗಳೂರು ಗ್ರಾಮಾಂತರ ಜಿಲ್ಲಾ ಮಟ್ಟದ ಸರ್ಕಾರಿ ನೌಕರರ ಕ್ರೀಡಾಕೂಟ (Sports Meet) ಮತ್ತು ಸಾಂಸ್ಕೃತಿಕ ಸ್ಪರ್ಧೆಗಳ (Cultural competitions)

[ccc_my_favorite_select_button post_id="104945"]
Doddaballapura: ಅಯ್ಯಪ್ಪ ಸ್ವಾಮಿ ದೇವಾಲಯದಲ್ಲಿ ಕಳವು..! Video

Doddaballapura: ಅಯ್ಯಪ್ಪ ಸ್ವಾಮಿ ದೇವಾಲಯದಲ್ಲಿ ಕಳವು..! Video

ದೇವಾಲಯದ ಬಾಗಿಲು ಮೀಟಿ ಒಳಬಂದಿರುವ ಅಪರಿಚಿತ ದುಷ್ಕರ್ಮಿ, ಹುಂಡಿಯನ್ನು ಹೊಡೆದು ಕಳ್ಳವು ನಡೆಸಿದ್ದಾನೆ ಎನ್ನಲಾಗಿದೆ. Doddaballapura

[ccc_my_favorite_select_button post_id="104979"]
ಡಿವೈಡರ್‌ಗೆ ಡಿಕ್ಕಿ.. 15 ಬಾರಿ ನಿರಂತರವಾಗಿ ಉರುಳಿ ಬಿದ್ದ ಕಾರು..!| Video

ಡಿವೈಡರ್‌ಗೆ ಡಿಕ್ಕಿ.. 15 ಬಾರಿ ನಿರಂತರವಾಗಿ ಉರುಳಿ ಬಿದ್ದ ಕಾರು..!| Video

ಕಾರು ಹೆದ್ದಾರಿ ವಿಭಜಕಕ್ಕೆ ಡಿಕ್ಕಿ ಹೊಡೆದು 15 ಬಾರಿ ನಿರಂತರವಾಗಿ ಉರುಳಿ ಬಿದ್ದಿರುವುದು ಸಿಸಿಟಿವಿ ದೃಶ್ಯಗಳಲ್ಲಿ ಕಂಡುಬಂದಿದೆ. Video

[ccc_my_favorite_select_button post_id="104851"]

ಆರೋಗ್ಯ

ಸಿನಿಮಾ

ಕಲಾವಿದರು ಮಾಸಾಶನ ಪಡೆಯಲು ಜೀವಿತಾವಧಿ ಪ್ರಮಾಣ ಪತ್ರ ಸಲ್ಲಿಸಿ

ಕಲಾವಿದರು ಮಾಸಾಶನ ಪಡೆಯಲು ಜೀವಿತಾವಧಿ ಪ್ರಮಾಣ ಪತ್ರ ಸಲ್ಲಿಸಿ

ನಿಗದಿತ ಅರ್ಜಿ ನಮೂನೆಯನ್ನು ಸಹಾಯಕ ನಿರ್ದೇಶಕರ ಕಛೇರಿ, ಕನ್ನಡ ಮತ್ತು ಸಂಸ್ಕೃತಿ ಇಲಾಖೆ ಜಿಲ್ಲಾಡಳಿತ ಭವನ, ಕೊಠಡಿ ಸಂಖ್ಯೆ:118 Affidavit

[ccc_my_favorite_select_button post_id="104955"]
error: Content is protected !!