ದೊಡ್ಡಬಳ್ಳಾಪುರ: ತಾಲೂಕಿನ ಆರೂಢಿಯಲ್ಲಿ 35ನೇ ವರ್ಷದ ನಾಡಹಬ್ಬ ದಸರಾವನ್ನು ಸಡಗರ ಸಂಭ್ರಮದಿಂದ ಆಚರಿಸಲಾಯಿತು.
ದಸರಾ ಉತ್ಸವದಲ್ಲಿ ಗ್ರಾಮ ದೇವತೆ ಶ್ರೀ ವಡಸಲಮ್ಮ, ಶನೇಶ್ಚರ ಸ್ವಾಮಿ ಮೂರ್ತಿಗಳ ಭವ್ಯ ಉತ್ಸವದ ಮೆರವಣಿಗೆ ನಡೆಯಿತು.

ಆರೂಢಿ ಶ್ರೀ ವಡಸಲಮ್ಮನವರ ದಸರಾ ಉತ್ಸವ ಸೇವಾ ಸಮಿತಿ ನೇತೃತ್ವದಲ್ಲಿ ನಡೆದ ಉತ್ಸವದಲ್ಲಿ ತುಮಕೂರಿನ ಸಂಗೀತಾ ಮೆಲೋಡಿಸ್ ಇವರಿಂದ ಮನರಂಜನಾ ಕಾರ್ಯಕ್ರಮ ಆಯೋಜಿಸಲಾಗಿತ್ತು.
ಈ ಕುರಿತು ಮಾತನಾಡಿದ ಸಮಿತಿಯ ಮುಖಂಡರು, ಪ್ರತಿ ವರ್ಷ ತಾಲೂಕಿನಲ್ಲಿ ವಿಶೇಷ ಎಂಬಂತೆ ಗ್ರಾಮೀಣ ಭಾಗದಲ್ಲಿ ಅದ್ದೂರಿಯ ದಸರಾ ಆಚರಣೆಯನ್ನು ಆರೂಢಿ ಗ್ರಾಮದಲ್ಲಿ 35 ವರ್ಷಗಳಿಂದ ಆಚರಿಸಿಕೊಂಡು ಬರಲಾಗುತ್ತಿದೆ.
ಗ್ರಾಮದ ಜನರು ಒಗ್ಗೂಡಿ ಭಾಗವಹಿಸಲು ಉತ್ಸವ ಸಹಕಾರಿಯಾಗಿದೆ. ವಿವಿಧತೆಯಲ್ಲಿ ಏಕತೆಯ ಸಂಕೇತವಾಗಿ ಈ ಹಬ್ಬ ಆಚರಿಸಲ್ಪಡುತ್ತಿದೆ ಎಂದರು.
ಕಾರ್ಯಕ್ರಮದ ಅಂಗವಾಗಿ ಶ್ರಿ ವಡಸಲಮ್ಮ ದೇವಾಲಯದಲ್ಲಿ ವಿಶೇಷ ಪೂಜಾಲಂಕಾರಗಳನ್ನು ಏರ್ಪಡಿಸಲಾಗಿತ್ತು.