ದೊಡ್ಡಬಳ್ಳಾಪುರ: ವಿಶ್ವ ವಿಖ್ಯಾತ ಉದ್ಯಮಿ ಪದ್ಮವಿಭೂಷಣ ಡಾ.ರತನ್ ಟಾಟಾ (Ratan tata) ಅವರ ನಿಧನಕ್ಕೆ ಕರವೇ ಪ್ರವೀಣ್ ಕುಮಾರ್ ಶೆಟ್ಟಿ ಬಣದಿಂದ ರತನ್ ಟಾಟಾ ಅವರ ಭಾವಚಿತ್ರಕ್ಕೆ ಪುಷ್ಪ ನಮನ ಸಲ್ಲಿಸುವ ಮೂಲಕ ಶ್ರದ್ಧಾಂಜಲಿ ಸಲ್ಲಿಸಿದರು.
ನಗರದ ಡಿ ಕ್ರಾಸ್ ವೃತ್ತದಲ್ಲಿ ರತನ್ ಟಾಟಾ (Ratan tata) ಅವರ ಭಾವಚಿತ್ರಕ್ಕೆ ನಮನ ಸಲ್ಲಿಸಿದ ಅಭಿಮಾನಿಗಳು ಭಾರತ ಮಾತೆಯ ಹೆಮ್ಮೆಯ ಪುತ್ರ ಘೋಷಣೆ ಕೂಗಿದರು. ಎರಡು ನಿಮಿಷಗಳ ಕಾಲ ಮೌನ ಆಚರಿಸಿ ಟಾಟಾ ಅವರ ಸಾಧನೆ ಕುರಿತು ಗಣ್ಯರು ನುಡಿ ನಮನ ಸಲ್ಲಿಸಿದರು.
ಈ ವೇಳೆ ಕರವೇ ಪ್ರವೀಣ್ ಕುಮಾರ್ ಶೆಟ್ಟಿ ಬಣದ ದೊಡ್ಡಬಳ್ಳಾಪುರ ತಾಲೂಕು ಅಧ್ಯಕ್ಷ ಹಮಾಮ್ ವೆಂಕಟೇಶ್, ಗೌರವ ಅಧ್ಯಕ್ಷ ಪು.ಮಹೇಶ್, ಪ್ರಧಾನ ಕಾರ್ಯದರ್ಶಿ ಎಸ್ಎಲ್‌ಎನ್ ವೇಣು, ಉಪಾಧ್ಯಕ್ಷ ಜೋಗಳ್ಳಿ ಅಮ್ಮು, ಕಾನೂನು ಸಲಹೆಗಾರರು ಮಲತಹಳ್ಳಿ ಆನಂದ್, ನಗರ ಅಧ್ಯಕ್ಷ ಶ್ರೀನಗರ ಬಶೀರ್, ಕಾರ್ಯದರ್ಶಿ ಮಂಜು ಮುಕ್ಕೇನಳ್ಳಿ, ರವಿ, ಸೂರಿ ಮತ್ತಿತರರಿದ್ದರು.