ಬೆಂಗಳೂರು: ರಾಜ್ಯದಲ್ಲಿ ಸುಳ್ಳು ಸುದ್ದಿಗಳನ್ನು (FAKE NEWS) ಹರಡುವ, ಪ್ರಕಟಿಸುವ, ಪ್ರಸಾರ ಮಾಡುವವರ ಮಟ್ಟ ಹಾಕಲು ರಾಜ್ಯ ಸರ್ಕಾರ ಉನ್ನತ ಮಟ್ಟದ ಫ್ಯಾಕ್ಟ್ ಚೆಕ್ ಸಮಿತಿಯೊಂದನ್ನು ರಚಿಸಿದೆ.
ಈ ಸಮಿತಿಗೆ ಅಧ್ಯಕ್ಷರಾಗಿ ಗೃಹ ಸಚಿವ ಜಿ.ಪರಮೇಶ್ವರ ಅವರನ್ನು ನೇಮಿಸಲಾಗಿರಲಿದ್ದು, ಐಟಿ/ಬಿಟಿ ಸಚಿವ ಪ್ರಿಯಾಂಕ್ ಖರ್ಗೆ ಉಪಾಧ್ಯಕ್ಷರಾಗಿದ್ದಾರೆ ಎಂದು ಸರ್ಕಾರದ ಮೂಲಗಳು ಮಾಧ್ಯಮಗಳಿಗೆ ತಿಳಿಸಿವೆ.
ರಾಜ್ಯ ಸರ್ಕಾರದ ಫ್ಯಾಕ್ಟ್ ಚೆಕ್ ಸಮಿತಿಯಲ್ಲಿ ಕಾನೂನು ಮತ್ತು ಗೃಹ ಇಲಾಖೆಯ ಪ್ರತಿನಿಧಿಗಳೂ ಇದ್ದಾರೆ. ಈ ಸಮಿತಿಯು ಸುಳ್ಳು ಸುದ್ದಿಗಳನ್ನು (FAKE NEWS) ಯಾವ ರೀತಿ ತಡೆಯಬೇಕು ಎಂಬ ಕಾರ್ಯವಿಧಾನವನ್ನು ಅಭಿವೃದ್ಧಿಪಡಿಸಲಿದೆ ಎಂದು ವರದಿಯಾಗಿದೆ.
ಲೋಕಸಭಾ ಚುನಾವಣೆ ವೇಳೆ ಸುಳ್ಳು ಸುದ್ದಿಯನ್ನು ತಡೆಯಲೆಂದು ಸಿದ್ದರಾಮಯ್ಯ ಸರ್ಕಾರವು ಸುಳ್ಳು ಮಾಹಿತಿ ತಡೆ ಘಟಕವನ್ನು ಸ್ಥಾಪಿಸಿದೆ.
satya.karnataka.gov.in ವೆಬ್‌ಸೈಟ್ ಮೂಲಕ 90 ದಿನಗಳವರೆಗೆ ಕಾರ್ಯನಿರ್ವಹಿಸಿತ್ತು. ಈ ಅವಧಿಯಲ್ಲಿ ಅಂತರ್ಜಾಲದಲ್ಲಿ ಪ್ರತಿ ದಿನ 64 ಸಾವಿರ ಲೇಖನಗಳನ್ನು ಪರಿಶೀಲಿಸುತ್ತಿತ್ತು. ಅದನ್ನು ಆಧರಿಸಿ 18 ಎಫ್‌ಐಆರ್ ದಾಖಲಿಸಲಾಗಿತ್ತು.
537 ಫ್ಯಾಕ್ಸ್‌ಚೆಕ್ ಮಾಡಿತ್ತು. 500 ಲೇಖನಗಳನ್ನು ಬೆದರಿಕೆ ಎಂದು ಪರಿಗಣಿಸಲಾಗಿತ್ತು. ಚುನಾವಣೆ ವೇಳೆ ಆಗಿದ್ದರಿಂದ ಅದು ಪೂರ್ಣ ಪ್ರಮಾಣದಲ್ಲಿ ಕಾರ್ಯವಿಧಾನ ರೂಪುಗೊಂಡಿರಲಿಲ್ಲ ಎಂದು ಮೂಲಗಳು ತಿಳಿಸಿವೆ.