ದೇವನಹಳ್ಳಿ, (ಬೆಂಗಳೂರು): ಕೆಂಪೇಗೌಡ ಅಂತರರಾಷ್ಟ್ರೀಯ ವಿಮಾನ ನಿಲ್ದಾ, ಹಾಗೂ ಕನ್ನಡ ಮತ್ತು ಸಂಸ್ಕೃತಿ ಇಲಾಖೆ ವತಿಯಿಂದ ಸಾಂಸ್ಕೃತಿಕ ದಸರಾ (Dasara) ಹಬ್ಬವನ್ನು ಟರ್ಮಿನಲ್ 1 ಮತ್ತು 2 ನಲ್ಲಿ ಅ.11 ರವರೆಗೆ ಅದ್ದೂರಿಯಿಂದ ಆಚರಿಸಲಾಗುತ್ತಿದೆ.
ವಿಮಾನ ನಿಲ್ದಾಣಕ್ಕೆ ಆಗಮಿಸುವ ಪ್ರಯಾಣಿಕರಿಗೆ ನಮ್ಮ ಹೆಮ್ಮೆಯ ಸಂಸ್ಕೃತಿಯನ್ನು ಕಣ್ಣುಂಬಿಸಿಕೊಳ್ಳಲು ವಿವಿಧ ಸಾಂಸ್ಕೃತಿಕ ಕಾರ್ಯಕ್ರಮಗಳನ್ನು ನಡೆಸಲಾಗುತ್ತಿದ್ದು, ನಮ್ಮ ಸಾಂಸ್ಕೃತಿಕ ಕಲೆಗಳಾದ ಯಕ್ಷಗಾನ, ಕೂಚಿಪುಡಿ, ಡೊಳ್ಳು ಕುಣಿತ, ತಮಟೆ ವಾದ್ಯ, ನಾಟ್ಯ, ಸಂಗೀತ ಕಛೇರಿ ಸೇರಿದಂತೆ ಅನೇಕ ಕಾರ್ಯಕ್ರಮಗಳನ್ನು ಟರ್ಮಿನಲ್ 1 ಮತ್ತು 2ನಲ್ಲಿ ನಡೆಸಲಾಗುತ್ತಿದೆ.
ಈ ಎಲ್ಲಾ ಸಂಭ್ರಮಾಚರಣೆಯ ಭಾಗವಾಗಿ ಬೆಂಗಳೂರು ವಿಮಾನ ನಿಲ್ದಾಣ ಅಲಂಕೃತಗೊಂಡಿದೆ.
The festive fervour takes centre stage as celebrations commence at BLR Airport! Relive Day 1 of the Naada Habba Dasara at BLR Airport in this video. Here’s a recap of yesterday’s Dollu Kunitha, Gaarudi Gombe, Suguma Sangeetha, Nrutya Vaividya and the dance programme curated by… pic.twitter.com/dNOBy6pBYC
— BLR Airport (@BLRAirport) October 8, 2024
ಅ.8ರಂದು ಯಕ್ಷಗಾನ, ತಮಟೆವಾದ್ಯ ಜತೆಗೆ ಜಾನಪದ ಗಾಯನ ಮತ್ತು ನೃತ್ಯ ರೂಪಕ, ವಿದ್ವಾನ್ ರೂಪಶ್ರೀ ಮಧುಸೂದನ್ ಅವರಿಂದ ನೃತ್ಯ ಮತ್ತು ಸಂಗೀತ ಕಲಾ ಪ್ರದರ್ಶನ ಜರುಗಿತು.