akka cafe: ದೇವನಹಳ್ಳಿಯಲ್ಲಿ ಅಕ್ಕ ಬೇಕರಿ/ಕೆಫೆಗೆ ಚಾಲನೆ: ರಾಜ್ಯಾದ್ಯಂತ 50 ಅಕ್ಕ ಬೇಕರಿ/ಕೆಫೆ ಸ್ಥಾಪನೆ

ಬೆಂಗಳೂರು ಗ್ರಾಮಾಂತರ ಜಿಲ್ಲೆ; ಮಹಿಳಾ ಸಬಲೀಕರಣವನ್ನು ಉತ್ತೇಜಿಸಲು ಹಾಗೂ ಮಹಿಳೆಯರ ಸ್ವಾವಲಂಬಿ ಬದುಕಿಗೆ ಉತ್ತೇಜನ ನೀಡಲು ʼಅಕ್ಕ ಕೆಫೆʼ (akka cafe) ಸಹಕಾರಿಯಲಾಗಿದೆ ಎಂದು ವೈದ್ಯಕೀಯ ಶಿಕ್ಷಣ ಮತ್ತು ಕೌಶಲ್ಯಾಭಿವೃದ್ಧಿ ಮತ್ತು ಜೀವನೋಪಾಯ ಇಲಾಖೆಯ ಸಚಿವರಾದ ಶರಣ ಪ್ರಕಾಶ್ ರುದ್ರಪ್ಪ ಪಾಟೀಲ್ ಅವರು ಹೇಳಿದರು.

ಜಿಲ್ಲಾಡಳಿತ, ಜಿಲ್ಲಾ ಪಂಚಾಯತ್ ಇವರ ವತಿಯಿಂದ ಸಂಜೀವಿನಿ ಕರ್ನಾಟಕ ರಾಜ್ಯ ಗ್ರಾಮೀಣ ಜೀವನೋಪಾಯ ಅಭಿಯಾನದಡಿ ದೇವನಹಳ್ಳಿ ತಾಲ್ಲೂಕು ಪಂಚಾಯಿತಿ ಆವರಣದಲ್ಲಿ ನಿರ್ಮಿತಗೊಂಡಿರುವ ಅಕ್ಕ – ಬೇಕರಿ/ ಕೆಫೆ ಉದ್ಘಾಟಿಸಿ ಅವರು ಮಾತನಾಡಿದರು.

ಮಹಿಳಾ ಸಬಲೀಕರಣವನ್ನು ಉತ್ತೇಜಿಸಲು ಹಾಗೂ ಮಹಿಳೆಯರ ಸ್ವಾವಲಂಬಿ ಬದುಕಿಗೆ ಉತ್ತೇಜನ ನೀಡುವ ನಿಟ್ಟಿನಲ್ಲಿ ರಾಜ್ಯ ಸರ್ಕಾರದ ಉಪಕ್ರಮದ ಅಡಿಯಲ್ಲಿ ʼಅಕ್ಕ ಕೆಫೆʼಯನ್ನು (akka cafe) ಪ್ರಾರಂಭಿಸಲಾಯಿತು.

ಮಹಿಳಾ ಸಬಲೀಕರಣದತ್ತ ಮಹತ್ವದ ಹೆಜ್ಜೆಯನ್ನಿಟ್ಟು ರಾಷ್ಟ್ರೀಯ ಗ್ರಾಮೀಣ ಜೀವನೋಪಾಯ ಮಿಷನ್(NRLM), ಕರ್ನಾಟಕ ಕೌಶಲ್ಯಾಭಿವೃದ್ಧಿ, ಉದ್ಯಮಶೀಲತೆ ಮತ್ತು ಜೀವನೋಪಾಯ ಇಲಾಖೆಯಡಿಯಲ್ಲಿ ಮೊದಲ ಅಕ್ಕ ಕೆಫೆಯನ್ನು ಬೆಂಗಳೂರಿನಲ್ಲಿ ಪ್ರಾರಂಭಿಸಲಾಗಿದ್ದು, ದೇವನಹಳ್ಳಿಯಲ್ಲಿ 2ನೇ ಅಕ್ಕ ಕೆಫೆ/ ಬೇಕರಿ ಪ್ರಾರಂಭಿಸಲಾಗಿದೆ.

ರಾಜ್ಯಾದ್ಯಂತ 50 ಅಕ್ಕ ಕೆಫೆ (akka cafe) ತೆರೆಯಲಾಗುವುದು ಎಂದರು. ಹಾಗೇಯೇ ಮಹಿಳೆಯರ ಸಬಲೀಕರಣಕ್ಕೆ ರಾಜ್ಯಾದ್ಯಂತ 2500 ಕಾಫಿ ಕೆಫೆ ಸ್ಥಾಪನೆ ಮಾಡುವ ಉದ್ದೇಶವಿದೆ. 3500 ಮಹಿಳೆಯರು ತರಬೇತಿ ಪಡೆದುಕೊಂಡು ತ್ಯಾಜ್ಯ ನಿರ್ವಹಣಾ ಘಟಕದಲ್ಲಿ ಕೆಲಸ ಮಾಡುತ್ತಿದ್ದಾರೆ. ಮಹಿಳೆಯರ ಸಬಲೀಕರಣ ದೃಷ್ಟಿಯಿಂದ ಗ್ಯಾರಂಟಿ ಯೋಜನೆಗಳ ಜೊತೆಯಲ್ಲಿ ವಿವಿಧ ಅಭಿವೃದ್ಧಿ ಕಾರ್ಯಕ್ರಮಗಳು ಜಾರಿಗೆ ತಂದಿದ್ದೇವೆ ಎಂದರು.

ಸ್ವಸಹಾಯ ಗುಂಪಿಗೆ ಸೇರಿದ 12 ಮಹಿಳೆಯರ ತಂಡವು ಈ ಕೆಫೆಯನ್ನು ನಡೆಸುತ್ತದೆ. ಅಕ್ಕ ಕೆಫೆ ಬೆಳಗ್ಗೆ 09 ರಿಂದ ರಾತ್ರಿ 09 ರ ವರೆಗೆ ವಾರವಿಡಿ ಕಾರ್ಯನಿರ್ಹಿಸಲಿದೆ. ಮತ್ತು ಇಲ್ಲಿ ಆರೋಗ್ಯಕರ, ಸ್ವಾದಿಷ್ಟಕರವಾದ ಆಹಾರ ಲಭ್ಯವಿದ್ದು, ಶುಚಿ-ರುಚಿಯ ಜೊತೆಗೆ ಕೈಗೆಟಕುವ ದರದಲ್ಲಿ ಗ್ರಾಹಕರಿಗೆ ಆಹಾರವನ್ನು ಪೂರೈಸಲಾಗುತ್ತದೆ.
ಸರ್ಕಾರ ಬಜೆಟ್​​ನಲ್ಲಿ ಘೋಷಣೆ ಮಾಡಿದಂತೆ ಅಕ್ಕ ಕೆಫೆಯು ಕಾರ್ಯರೂಪಕ್ಕೆ ಬಂದಿದೆ.

ಆಹಾರ ನಾಗರಿಕ ಸರಬರಾಜು ಮತ್ತು ಗ್ರಾಹಕ ವ್ಯವಹಾರಗಳ ಇಲಾಖೆ ಸಚಿವರು ಮತ್ತು ಜಿಲ್ಲಾ ಉಸ್ತುವಾರಿ ಸಚಿವರಾದ ಕೆ.ಹೆಚ್ ಮುನಿಯಪ್ಪ ಅವರು ಕಾರ್ಯಕ್ರಮದ ಅಧ್ಯಕ್ಷತೆ ವಹಿಸಿ ಮಾತನಾಡಿ ಸ್ವಸಹಾಯ ಗುಂಪುಗಳ ಮೂಲಕ ಮಹಿಳೆಯರನ್ನು ಬಲಗೊಳಿಸಲು ಹಲವು ಕಾರ್ಯಕ್ರಮಗಳನ್ನು ಹಮ್ಮಿಕೊಳ್ಳಲಾಗಿದೆ.

ಸರ್ಕಾರದ ಜನಪರ ಕಾರ್ಯಕ್ರಮಗಳನ್ನು ಮಹಿಳೆಯರು ಸದುಪಯೋಗ ಪಡಿಸಿಕೊಂಡು ಜೀವನ ರೂಪಿಸಿಕೊಳ್ಳಬೇಕು. ಅಕ್ಕ ಕೆಫೆಯು ಒಂದು ಉತ್ತಮ ವೇದಿಕೆಯಾಗಿದ್ದು ಮಹಿಳೆಯರ ಸ್ವಾವಲಂಬಿ ಬದುಕಿಗೆ ಸಹಕಾರಿಯಾಗಲಿದೆ ಎಂದರು.

akka cafe: ದೇವನಹಳ್ಳಿಯಲ್ಲಿ ಅಕ್ಕ ಬೇಕರಿ/ಕೆಫೆಗೆ ಚಾಲನೆ: ರಾಜ್ಯಾದ್ಯಂತ 50 ಅಕ್ಕ ಬೇಕರಿ/ಕೆಫೆ ಸ್ಥಾಪನೆ

ಕೌಶಲ್ಯಾಭಿವೃದ್ಧಿ ತರಬೇತಿ ಕೇಂದ್ರ ಸ್ಥಾಪನೆಗೆ ಮನವಿ

ಜಿಲ್ಲೆಯಲ್ಲಿ ನಿರುದ್ಯೋಗಿಗಳಿಗೆ ಕೌಶಲ್ಯ ಆಧಾರಿತ ತರಬೇತಿ ಅವಶ್ಯಕತೆ ಇದ್ದು ಕೌಶಲ್ಯಾಭಿವೃದ್ಧಿ ತರಬೇತಿ ಕೇಂದ್ರ ಸ್ಥಾಪಿಸಬೇಕು ಎಂದು ಸಚಿವರಾದ ಮುನಿಯಪ್ಪ ಅವರು ಮನವಿ ಮಾಡಿದರು. ಇದಕ್ಕೆ ಸಚಿವರಾದ ಶರಣ ಪ್ರಕಾಶ್ ಪಾಟೀಲ್ ಅವರು ಸಕಾರಾತ್ಮಕವಾಗಿ ಸ್ಪಂದಿಸಿ ಐಟಿಐ, ಜಿಟಿಟಿಸಿ ಕೇಂದ್ರಗಳನ್ನು ಮೇಲ್ದರ್ಜೆ ಏರಿಸಿ, ಮುಂದಿನ ದಿನಗಳಲ್ಲಿ ಕೌಶಲ್ಯಾಭಿವೃದ್ಧಿ ಕೇಂದ್ರ ಸ್ಥಾಪನೆಗೆ ಎಲ್ಲಾ ರೀತಿಯ ಸಹಕಾರ ನೀಡಲಾಗುವುದು ಎಂದರು.

ಕಾರ್ಯಕ್ರಮದಲ್ಲಿ ಅಂತರಾಷ್ಟ್ರೀಯ ವಿಮಾನ ನಿಲ್ದಾಣ ಯೋಜನಾ ಪ್ರಾಧಿಕಾರ ಅದು ಶಾಂತಕುಮಾರ್, ಜಿಲ್ಲಾ ಗ್ಯಾರಂಟಿ ಯೋಜನೆಗಳ ಅನುಷ್ಠಾನ ಸಮಿತಿಯ ಜಿಲ್ಲಾ ಉಪಾಧ್ಯಕ್ಷ ನಾರಾಯಣಸ್ವಾಮಿ, ತಾಲ್ಲೂಕು ಅಧ್ಯಕ್ಷ ಜಗನ್ನಾಥ, ಕೌಶಲ್ಯಾಭಿವೃದ್ಧಿ ಇಲಾಖೆಯ ಅಭಿವೃದ್ಧಿ ಆಯುಕ್ತರಾದ ಉಮಾ ಮಹದೇವನ್, ರಾಷ್ಟ್ರೀಯ ಜೀವನೋಪಾಯ ಅಭಿಯಾನ ನಿರ್ದೇಶಕರಾದ ಪಿ.ಶ್ರೀವಿದ್ಯಾ, ಜಿಲ್ಲಾಧಿಕಾರಿ ಡಾ.ಎನ್ ಶಿವಶಂಕರ್, ಜಿ.ಪಂ ಸಿ.ಇ.ಒ ಅನುರಾಧ, ತಾಪಂ ಇಒ ಶ್ರೀನಾಥ್ ಗೌಡ, ಸೇರಿದಂತೆ ಜಿಲ್ಲಾ ಮಟ್ಟದ ಅಧಿಕಾರಿಗಳು, ತಾಲ್ಲೂಕು ಅಧಿಕಾರಿಗಳು ಸ್ವಸಹಾಯ ಗುಂಪುಗಳ ಸದಸ್ಯರು, ಸಾರ್ವಜನಿಕರು ಉಪಸ್ಥಿತರಿದ್ದರು.

ರಾಜಕೀಯ

ಸಚಿವೆ ಲಕ್ಷ್ಮೀ ಹೆಬ್ಬಾಳಕರ್ ಕುರಿತು ಸಿಟಿ ರವಿ ಅಶ್ಲೀಲ ಹೇಳಿಕೆ: ಮಹಿಳಾ ಕಾಂಗ್ರೆಸ್ ಪ್ರತಿಭಟನೆ| CT Ravi

ಸಚಿವೆ ಲಕ್ಷ್ಮೀ ಹೆಬ್ಬಾಳಕರ್ ಕುರಿತು ಸಿಟಿ ರವಿ ಅಶ್ಲೀಲ ಹೇಳಿಕೆ: ಮಹಿಳಾ ಕಾಂಗ್ರೆಸ್

ಬಿಜೆಪಿ ನಾಯಕರು ಬಾಯಿ ಬಿಟ್ಟರೆ ಸಾಕು, ಅವರ ಸಂಸ್ಕೃತಿ ತಿಳಿಯುತ್ತದೆ. CT Ravi

[ccc_my_favorite_select_button post_id="99100"]
ಶ್ರೀ ಕ್ಷೇತ್ರ ಧರ್ಮಸ್ಥಳ ಗ್ರಾಮಾಭಿವೃದ್ಧಿ ಯೋಜನೆಯಡಿ ಮನೆ ನಿರ್ಮಾಣ..!| House construction

ಶ್ರೀ ಕ್ಷೇತ್ರ ಧರ್ಮಸ್ಥಳ ಗ್ರಾಮಾಭಿವೃದ್ಧಿ ಯೋಜನೆಯಡಿ ಮನೆ ನಿರ್ಮಾಣ..!| House construction

ವಾಸಿಸಲು ಮನೆ ಇಲ್ಲದ ಕಾರಣ ಧರ್ಮಸ್ಥಳದಿಂದ ಮನೆ ನಿರ್ಮಿಸಿಕೊಡಲಾಗುತ್ತಿದೆ House construction

[ccc_my_favorite_select_button post_id="99191"]
ಅಂಬಾನಿ ಆದ್ರೆ ಅವರ ಮನೆಗೆ.. ರಸ್ತೆ ಬಂದ್ ಮಾಡಿದಕ್ಕೆ ಬೆಂಗಳೂರಿನ ಮಹಿಳೆ ಕ್ಲಾಸ್ – VIDEO ನೋಡಿ

ಅಂಬಾನಿ ಆದ್ರೆ ಅವರ ಮನೆಗೆ.. ರಸ್ತೆ ಬಂದ್ ಮಾಡಿದಕ್ಕೆ ಬೆಂಗಳೂರಿನ ಮಹಿಳೆ ಕ್ಲಾಸ್

ಇತ್ತೀಚೆಗೆ ನೀತಾ ಅಂಬಾನಿ ಅವರು ತಮ್ಮ ಮರ್ಸಿಡೀಸ್ ಬೆಂಜ್ ಬುಲೆಟ್ ಪ್ರೊಫ್ ಕಾರ್‌ನಲ್ಲಿ ಹೈ ಸೆಕ್ಯೂರಿಯಲ್ಲಿ ಆಗಮಿಸಿದ್ದರು. Video

[ccc_my_favorite_select_button post_id="99152"]
ಗುಂಡಿನ ದಾಳಿ: ಭಾರತೀಯ ಮೂಲದ ವಿದ್ಯಾರ್ಥಿ ಶಿಕಾಗೊದಲ್ಲಿ ಹತ್ಯೆ.‌!| murder

ಗುಂಡಿನ ದಾಳಿ: ಭಾರತೀಯ ಮೂಲದ ವಿದ್ಯಾರ್ಥಿ ಶಿಕಾಗೊದಲ್ಲಿ ಹತ್ಯೆ.‌!| murder

2023-24ರಲ್ಲಿ ಚೀನಾಗಿಂತಲೂ ಭಾರತೀಯ ವಿದ್ಯಾರ್ಥಿಗಳೇ ಅಮೆರಿಕಕ್ಕೆ ಉನ್ನತ ವ್ಯಾಸಂಗಕ್ಕಾಗಿ ಹೆಚ್ಚಿನ (3.30 ಲಕ್ಷ) ಸಂಖ್ಯೆಯಲ್ಲಿ ತೆರಳಿದ್ದಾರೆ. Murder

[ccc_my_favorite_select_button post_id="97531"]

ಬಾಂಗ್ಲಾದಲ್ಲಿ ಹಿಂದೂ ಸಾಧು ಬಂಧನ; ನಾಳೆ ರಾಜ್ಯದಾದ್ಯಂತ

[ccc_my_favorite_select_button post_id="97359"]

miss universe; ವಿಶ್ವ ಸುಂದರಿ ಕಿರೀಟ ಮುಡಿಗೇರಿಸಿಕೊಂಡ

[ccc_my_favorite_select_button post_id="96599"]

mike tyson vs jake paul date,

[ccc_my_favorite_select_button post_id="96464"]

elon musk; ಟ್ರಂಪ್ ಪರ ವಕಾಲತ್ತು: ಎಕ್ಸ್

[ccc_my_favorite_select_button post_id="96366"]

ಕ್ರೀಡೆ

Video: ವಿಶ್ವ ಚದುರಂಗ ವೀರನಾದ ಭಾರತದ ಡಿ.ಗುಕೇಶ್.. ಚಾಂಪಿಯನ್‌ ಆಗ್ತಿದ್ದಂತೆ ಕಣ್ಣೀರು| World Chess Championship

Video: ವಿಶ್ವ ಚದುರಂಗ ವೀರನಾದ ಭಾರತದ ಡಿ.ಗುಕೇಶ್.. ಚಾಂಪಿಯನ್‌ ಆಗ್ತಿದ್ದಂತೆ ಕಣ್ಣೀರು| World

18 ವರ್ಷ ವಯಸ್ಸಿನ ಗ್ರಾ ಟ್ರ್ಯಂಡ್ ಮಾಸ್ಟರ್ ಗುಕೇಶ್ World Chess Championship

[ccc_my_favorite_select_button post_id="98503"]
ನಂದಿನಿ ಲೇಔಟ್ ನಿಂದ ಬಂದು ಮಧುರೆ ಕೆರೆಯಲ್ಲಿ ಆತ್ಮಹತ್ಯೆ..!| Suicide

ನಂದಿನಿ ಲೇಔಟ್ ನಿಂದ ಬಂದು ಮಧುರೆ ಕೆರೆಯಲ್ಲಿ ಆತ್ಮಹತ್ಯೆ..!| Suicide

ಭದ್ರಾಪುರ ಗ್ರಾಮದ ಸಂಬಂಧಿಕರ‌ ಮನೆಗೆ ಬರುತ್ತಿದ್ದ ಯುವಕನ ಮಧುರೆ ಕೆರೆ ಬಳಿ ಚೆಪ್ಪಲಿ, ಬನಿಯನ್ ಹಾಗೂ ಟೆತ್ ನೋಟ್ Suicide

[ccc_my_favorite_select_button post_id="99178"]
Accident| ಸರಣಿ ಅಪಘಾತ; ತಮ್ಮದಲ್ಲದ ತಪ್ಪಿಗೆ ಆರು ಮಂದಿ ದುರ್ಮರಣ..!| Video

Accident| ಸರಣಿ ಅಪಘಾತ; ತಮ್ಮದಲ್ಲದ ತಪ್ಪಿಗೆ ಆರು ಮಂದಿ ದುರ್ಮರಣ..!| Video

ಎರಡು ಕಾರು, ಎರಡು ಲಾರಿ, ಸ್ಕೂಲ್ ಬಸ್ ನಡುವೆ ಈ ಸರಣಿ ಅಪಘಾತ ನಡೆದಿದೆ. ವೇಗವಾಗಿ ಬಂದ ಲಾರಿಗಳ ನಡುವೆ ಅಪಘಾತವಾಗಿದೆ. Accident

[ccc_my_favorite_select_button post_id="99186"]

ಆರೋಗ್ಯ

ಸಿನಿಮಾ

ಅಲ್ಲು ಅರ್ಜುನ್ ಭೇಟಿಯಾದ ಉಪೇಂದ್ರ, ವೇಣು..!| Allu Arjun

ಅಲ್ಲು ಅರ್ಜುನ್ ಭೇಟಿಯಾದ ಉಪೇಂದ್ರ, ವೇಣು..!| Allu Arjun

ಬಂಧನಕ್ಕೊಳಗಾಗಿದ್ದ ಅಲ್ಲು ಅರ್ಜುನ್ ಅವರು ಇಂದು ಬೆಳಿಗ್ಗೆಯಷ್ಟೇ ಜೈಲಿನಿಂದ ಜಾಮೀನಿನ ಮೇಲೆ ಬಿಡುಗಡೆಯಾಗಿದ್ದಾರೆ. Allu arjun

[ccc_my_favorite_select_button post_id="98682"]