ದೊಡ್ಡಬಳ್ಳಾಪುರ: ಮೈಸೂರಿನ ಅರಮನೆ ಮೈದಾನದಲ್ಲಿ ದಸರಾ (Dasara) ಉತ್ಸವ ಅಂಗವಾಗಿ ಅಕ್ಟೋಬರ್ 03 ರಿಂದ ಅಕ್ಟೋಬರ್ 06 ರ ವರೆಗೆ ಯುವ ಸಬಲೀಕರಣ ಮತ್ತು ಕ್ರೀಡಾ ಇಲಾಖೆ ವತಿಯಿಂದ ಆಯೋಜಿಸಿದ್ದ ‘ರಾಜ್ಯ ಮಟ್ಟದ ದಸರಾ ಕ್ರೀಡಾಕೂಟ’ದಲ್ಲಿ ದೊಡ್ಡಬಳ್ಳಾಪುರದ ಕ್ರೀಡಾಪಟುಗಳು ಭಾಗವಹಿಸಿ ಉತ್ತಮ ಸಾಧನೆ ಮಾಡಿದ್ದಾರೆ.
ಮಹಿಳಾ ವಿಭಾಗ
ಪ್ರಣತಿ: 1500ಮೀ ಪ್ರಥಮ, 3000 ಮೀ ಪ್ರಥಮ ಸ್ಥಾನ.
4×100 ಮೀ ರಿಲೆ; ದಿವ್ಯ, ಚೈತನ್ಯ, ಮಾನ್ಯ, ರಕ್ಷಿತ ದ್ವಿತೀಯ ಸ್ಥಾನ.
4×400 ಮೀ ರಿಲೆ; ದಿವ್ಯ, ಮಾನ್ಯ, ನಿಖಿತ, ಪ್ರಣತಿ ತೃತೀಯ ಸ್ಥಾನ ಪಡೆದಿದ್ದಾರೆ.
ಪುರುಷರ ವಿಭಾಗ
ನಿತಿನ್ ಗೌಡ: 400 ಮೀ ತೃತಿಯ ಸ್ಥಾನ.
4×400ಮೀ ರಿಲೆ: ಎಂ.ನಿತಿನ್ ಗೌಡ, ಪ್ರಜ್ವಲ್, ಎಂ.ಚಿರೇಶ್ ಗೌಡ, ಯಮನಪ್ಪ ತೃತೀಯ ಸ್ಥಾನ ಪಡೆದಿದ್ದಾರೆ.
ರಾಜ್ಯ ಮಟ್ಟದ ದಸರಾ (Dasara) ಕ್ರೀಡಾಕೂಟದಲ್ಲಿ ದೊಡ್ಡಬಳ್ಳಾಪುರ ಕ್ರೀಡಾಪಟುಗಳು ಉತ್ತಮ ಸಾಧನೆ ಮಾಡಿದ್ದು ತರಬೇತುದಾರ ಆನಂದ ಬೈರವ ಶುಭಕೋರಿದ್ದಾರೆ.