ಹರಿತಲೇಖನಿ ದಿನಕ್ಕೊಂದು ಕಥೆ: 5ನೇ ತರಗತಿ ಮ್ಯಾಥ್ಸ್ ಪುಸ್ತಕದಲ್ಲಿನ ಈ ಪ್ರಾಬ್ಲಂ ಸಾಲ್ವ್ ಮಾಡಲಾಗುತ್ತಿಲ್ಲ..! ಟ್ರೈ ಮಾಡಿ!

ಮ್ಯಾಥಮೆಟಿಕ್ಸ್… ಗಣಿತ… ( maths )ಯಾವ ಭಾಷೆಯಲ್ಲಿ ಹೇಗೇ ಕರೆದರೂ ಈ ಸಬ್ಜೆಕ್ಟ್ ಎಂದರೆ ಚಿಕ್ಕಮಕ್ಕಳಿಗೆ ಭಯ. ಮ್ಯಾಥ್ಸ್ ಸಬ್ಜೆಕ್ಟನ್ನು, ಅದನ್ನು ಹೇಳುವ ಟೀಚರನ್ನು ನೆನಪಿಸಿಕೊಂಡರೆ ಮಕ್ಕಳಲ್ಲಿ ಭಯ ಉಂಟಾಗುತ್ತದೆ.

ಇನ್ನು ಲೆಕ್ಕಗಳನ್ನು ಮಾಡುವುದೆಂದರೆ…ಅದಕ್ಕಿಂತಲೂ ಹೆಚ್ಚಿಗೆ ಭಯ ಬೀಳುತ್ತಾರೆ. ಇದೇ ಅನುಭವವನ್ನು ಬಹಳಷ್ಟು ಮಂದಿ ತಮ್ಮ ಚಿಕ್ಕಂದಿನಲ್ಲಿ ಎದುರಿಸಿರುತ್ತಾರೆ. ಆದರೆ ನಾವೀಗ ಹೇಳಲಿರುವುದು ಸಹ ಅಂತಹದ್ದೇ ಭಯಬೀಳಿಸುವ ಗಣಿತ (maths)ಸಮಸ್ಯೆ ಬಗ್ಗೆ. ಅದು 5 ನೇ ತರಗತಿಯ ಸಮಸ್ಯೆ.

ಇದೇನಿದು 5ನೇ ತರಗತಿಯ maths ಸಮಸ್ಯೆ ಅಷ್ಟು ಕ್ಲಿಷ್ಟವಾಗಿದೆಯೇ..? ತುಂಬಾ ಸರಳವಾಗಿ ಬಗೆಹರಿಸಬಹುದಲ್ಲವೇ..! ಎಂದು ನೀವು ಭಾವಿಸಬಹುದು. ಆದರೆ ಆ ಲೆಕ್ಕವನ್ನು ನೋಡಿದರೆ ನೀವು ಆ ರೀತಿ ಅಂದುಕೊಳ್ಳಲ್ಲ. ತುಂಬಾ ಕ್ಲಿಷ್ಟಕರವಾಗಿರುತ್ತದೆ. ಅರ್ಥವೂ ಆಗಲ್ಲ. ಇನ್ನು ಅದರ ಉತ್ತರ ಕಂಡುಹಿಡಿಯುವುದು ದೂರದ ಮಾತಾಯಿತು. ಆ ಲೆಕ್ಕವನ್ನು ಒಮ್ಮೆ ನೋಡೋಣ ಬನ್ನಿ.

ಏನಿದು ಅರ್ಥವಾಗುತ್ತಿಲ್ಲವೇ. ಅದು ಚೀನಾ ಭಾಷೆಯಲ್ಲಿದೆ ಬಿಡಿ. ಇದರ ಅರ್ಥ ಏನೆಂದರೆ… ಒಂದು ಹಡಗಿನಲ್ಲಿ 26 ಕುರಿಗಳು, 10 ಮೇಕೆಗಳು ಇವೆ. ಆಗ ಆ ಹಡಗು ನಡೆಸುವ ವ್ಯಕ್ತಿ (ಕ್ಯಾಪ್ಟನ್) ವಯಸ್ಸು ಎಷ್ಟು? ಎಂಬುದು ಪ್ರಶ್ನೆ. ಇನ್ನೇಕೆ ತಡ.. ಈ ಲೆಕ್ಕವನ್ನು ಬಗೆಹರಿಸಿ. ಅರ್ಥವಾಗುತ್ತಿಲ್ಲವೇ.

ಇಷ್ಟಕ್ಕೂ ಇದೂ ಒಂದು ಪ್ರಶ್ನೆನಾ? ಅಥವಾ ತಮಾಷೆ ಮಾಡಲು ಬೇಕೆಂದೇ ಇಂತಹ ಲೆಕ್ಕ ಕೇಳುತ್ತಿದ್ದಾರಾ? ಎಂದು ಅಂದುಕೊಳ್ಳುತ್ತಿದ್ದೀರಾ… ಆದರೆ ಇದು ನಿಜವಾಗಿ ಪ್ರಶ್ನೆಯೇ.. ಮೊದಲೇ ತಿಳಿಸಿದೆವಲ್ಲವೇ. ನೀವು ಸಾಲ್ವ್ ಮಾಡಲ್ಲ ಎಂದು. ಈ ಪ್ರಶ್ನೆ 5ನೇ ತರಗತಿ ಗಣಿತ ಪುಸ್ತಕದಲ್ಲಿದೆ ಅಂತಿದ್ದೀರಿ ಅಲ್ಲವೆ..ಅದೆಲ್ಲಿ, ಇಷ್ಟಕ್ಕೂ ಇದನ್ನು ಯಾರು ಹಾಕಿದ್ದಾರೆ ಗೊತ್ತಾ..?

ಚೀನಾದಲ್ಲಿನ ಷಂಗಿಂಗ್ ಎಂಬ ಜಿಲ್ಲೆಯಲ್ಲಿನ ಒಂದು ಶಾಲೆಯಲ್ಲಿ ಇತ್ತೀಚೆಗೆ ಪರೀಕ್ಷೆಗಳನ್ನು ನಡೆಸಿದರು. ಅದರಲ್ಲಿ 5ನೇ ತರಗತಿ ಓದುತ್ತಿರುವ ಮಕ್ಕಳಿಗೆ ಈ ಪ್ರಶ್ನೆ ಕೇಳಲಾಗಿದೆ. ಇದರಿಂದ ವಿದ್ಯಾರ್ಥಿಗಳು ಯಾರೂ ಈ ಪ್ರಶ್ನೆಗೆ ಉತ್ತರ ಬರೆದಿಲ್ಲ. ಕೊನೆಗೆ ಈ ಪ್ರಶ್ನೆಯನ್ನು ಅವರು ತಮ್ಮ ಪೋಷಕರಿಗೆ ಕೇಳಿದರು.

ಅವರು ಸಹ ಕೈಚೆಲ್ಲಿದರು. ಕೊನೆಗೆ ಇಂತಹ ಪ್ರಶ್ನೆ ಕೊಟ್ಟಿದ್ದೀರೇನು, ಇಷ್ಟಕ್ಕೂ ಇದು ಪ್ರಶ್ನೆನಾ, ಹುಚ್ಚುಚ್ಚಾಗಿ ಕೇಳಿ ಮಕ್ಕಳನ್ನು ಕನ್‌ಫ್ಯೂಸ್ ಮಾಡುತ್ತಿದ್ದೀರಿ ಎಂದು ಪೋಷಕರು ಶಾಲಾ ಶಿಕ್ಷಕರನ್ನು ತರಾಟೆಗೆ ತೆಗೆದುಕೊಂಡಿದ್ದಾರೆ.

ಇದಕ್ಕೆ ಅವರು ಪ್ರತಿಕ್ರಿಯಿಸುತ್ತಾ ಪ್ರಶ್ನೆ ಸರಿಯಾಗಿಯೇ ಇದೆ. ಮಕ್ಕಳ ಕ್ರಿಟಿಕಲ್ ಅವೇರ್‌ನೆಸ್, ಇಂಡಿಪೆಂಡೆಂಟ್ ಥಿಂಕಿಂಗ್ ಎಂಬ ಸ್ವಭಾವಗಳನ್ನು ಹೆಚ್ಚಿಸುವುದಕ್ಕಾಗಿ ಇಂತಹ ಪ್ರಶ್ನೆ ಕೊಟ್ಟಿದ್ದೇವೆ ಎಂದಿದ್ದಾರೆ.

ಆದರೆ ಈ ಪ್ರಶ್ನೆ ಇಷ್ಟಕ್ಕೇ ನಿಲ್ಲಲಿಲ್ಲ. ಅಂತರ್ಜಾಲದಲ್ಲಿ‌‌.. ಮುಖ್ಯವಾಗಿ ಸಾಮಾಜಿಕ ಮಾಧ್ಯಮದಲ್ಲಿ ವೈರಲ್ ಆಗಿದೆ. ಇದರಿಂದ ನೆಟ್ಟಿಗರು ಈ ಪ್ರಶ್ನೆಗೆ ಉತ್ತರಿಸಲಾಗದೆ ಹೈರಾಣಾಗಿದ್ದಾರೆ. ಈ ಪ್ರಶ್ನೆ ಮೇಲೆ ಜೋಕ್‌ಗಳು ಸಹ ಹರಿದಾಡುತ್ತಿವೆ.

ಆಧಾರ: ಕನ್ನಡ ಎಪಿ2ಟಿಜಿ

ರಾಜಕೀಯ

ಬೆಂಗಳೂರಿನಲ್ಲಿ ಶಾಶ್ವತ ಹೆಜ್ಜೆಗುರುತು ಬಿಟ್ಟು ಹೋಗುವ ಆಸೆ ನನ್ನದು : ಡಿಸಿಎಂ ಡಿ.ಕೆ. ಶಿವಕುಮಾರ್

ಬೆಂಗಳೂರಿನಲ್ಲಿ ಶಾಶ್ವತ ಹೆಜ್ಜೆಗುರುತು ಬಿಟ್ಟು ಹೋಗುವ ಆಸೆ ನನ್ನದು : ಡಿಸಿಎಂ ಡಿ.ಕೆ.

ಬೆಂಗಳೂರಿನಲ್ಲಿ ಬದಲಾವಣೆ ತರಬೇಕು, ನನ್ನ ಕೆಲಸಗಳ ಮೂಲಕ ನನ್ನ ಹೆಸರು ಶಾಶ್ವತವಾಗಿ ಉಳಿಯಬೇಕು, ಶಾಶ್ವತ ಹೆಜ್ಜೆ ಗುರುತು ಬಿಟ್ಟು ಹೋಗುವ ಆಸೆ ನನಗೆ ಇದೆ: D.K. Shivakumar

[ccc_my_favorite_select_button post_id="117318"]
ರಾಜ್ಯದಲ್ಲಿ 2,84,881 ಹುದ್ದೆಗಳು ಖಾಲಿ: ನಿರುದ್ಯೋಗಿಗಳ ಅಳಲು ಕೇಳುವವರು ಯಾರು..?

ರಾಜ್ಯದಲ್ಲಿ 2,84,881 ಹುದ್ದೆಗಳು ಖಾಲಿ: ನಿರುದ್ಯೋಗಿಗಳ ಅಳಲು ಕೇಳುವವರು ಯಾರು..?

ರಾಜ್ಯದಲ್ಲಿ ಸರ್ಕಾರದಲ್ಲಿ ವಿವಿಧ ಇಲಾಖೆಗಳೂ ಸೇರಿದಂತೆ ರಾಜ್ಯದಲ್ಲಿ ಬರೋಬ್ಬರಿ 2,84,881 ಹುದ್ದೆಗಳು ಖಾಲಿಯಿರುವ (Bacant Posts) ಮಾಹಿತಿ ಬಯಲಾಗಿದೆ.

[ccc_my_favorite_select_button post_id="117270"]
ಕಾಮನ್‌ವೆಲ್ತ್‌ ಸಂಸದೀಯ ಸಂಘದ ಭಾರತೀಯ ವಿಭಾಗದ 11ನೇ ಸಮ್ಮೇಳನದಲ್ಲಿ ಸಂಸದ ಡಾ.ಕೆ.ಸುಧಾಕರ್‌ ಭಾಗಿ

ಕಾಮನ್‌ವೆಲ್ತ್‌ ಸಂಸದೀಯ ಸಂಘದ ಭಾರತೀಯ ವಿಭಾಗದ 11ನೇ ಸಮ್ಮೇಳನದಲ್ಲಿ ಸಂಸದ ಡಾ.ಕೆ.ಸುಧಾಕರ್‌ ಭಾಗಿ

ಕಾಮನ್‌ವೆಲ್ತ್‌ ಸಂಸದೀಯ ಸಂಘದ ಭಾರತೀಯ ವಿಭಾಗದ 11ನೇ ಸಮ್ಮೇಳನದಲ್ಲಿ ಲೋಕಸಭೆ ಸ್ಪೀಕರ್‌ ಓಂ ಬಿರ್ಲಾ ಅವರೊಂದಿಗೆ, ಸಂಘಟನೆಯ ಟ್ರಸ್ಟಿಯೂ ಆಗಿರುವ ಸಂಸದ ಡಾ.ಕೆ.ಸುಧಾಕರ್‌ (Dr.K.Sudhakar)

[ccc_my_favorite_select_button post_id="113863"]
ಗುಡ್ಮಾರ್ನಿಂಗ್ ನ್ಯೂಸ್: ಪ್ರಧಾನಿ ಮೋದಿ ಚೀನಾ ಭೇಟಿ.. 7 ವರ್ಷಗಳ ಬಳಿಕ ಹಿಂದಿ -ಚೀನಿ ಬಾಯಿ ಬಾಯಿ

ಗುಡ್ಮಾರ್ನಿಂಗ್ ನ್ಯೂಸ್: ಪ್ರಧಾನಿ ಮೋದಿ ಚೀನಾ ಭೇಟಿ.. 7 ವರ್ಷಗಳ ಬಳಿಕ ಹಿಂದಿ

ಅಮೇರಿಕಾದ ಅಧ್ಯಕ್ಷ ಡೋನಾಲ್ಡ್ ಟ್ರಂಪ್ (Donald Trump) ಶೇ.50 ರಷ್ಟು ತೆರಿಗೆ ಬರೆ ಬೆನ್ನಲ್ಲೇ, ಪ್ರಧಾನಿ ನರೇಂದ್ರ ಮೋದಿ (Narendra Modi) ಅವರು 7 ವರ್ಷಗಳ ಬಳಿಕ ಚೀನಾಗೇ ಭೇಟಿ ನೀಡಿದ್ದಾರೆ.

[ccc_my_favorite_select_button post_id="113347"]

ಕ್ರೀಡೆ

ಚಿನ್ನಸ್ವಾಮಿ ಕ್ರೀಡಾಂಗಣದಲ್ಲಿ ಕ್ರಿಕೆಟ್ ಪಂದ್ಯಾವಳಿಗೆ ಅನುಮತಿ; ಸಚಿವ ಸಂಪುಟ ಸಭೆಯಲ್ಲಿ  ತೀರ್ಮಾನ: ಡಿಸಿಎಂ ಡಿ.ಕೆ.ಶಿವಕುಮಾರ್

ಚಿನ್ನಸ್ವಾಮಿ ಕ್ರೀಡಾಂಗಣದಲ್ಲಿ ಕ್ರಿಕೆಟ್ ಪಂದ್ಯಾವಳಿಗೆ ಅನುಮತಿ; ಸಚಿವ ಸಂಪುಟ ಸಭೆಯಲ್ಲಿ ತೀರ್ಮಾನ: ಡಿಸಿಎಂ

"ಚಿನ್ನಸ್ವಾಮಿ ಕ್ರೀಡಾಂಗಣದಲ್ಲಿ ಕ್ರಿಕೆಟ್ ಪಂದ್ಯಗಳಿಗೆ ಅನುಮತಿ ನೀಡುವ ಬಗ್ಗೆ ಗುರುವಾರ ನಡೆಯಲಿರುವ ಸಚಿವ ಸಂಪುಟ ಸಭೆಯಲ್ಲಿ ಚರ್ಚೆ ನಡೆಸಿ ತೀರ್ಮಾನ ಮಾಡಲಾಗುವುದು ಎಂದು ಡಿಸಿಎಂ ಡಿ.ಕೆ.ಶಿವಕುಮಾರ್ (D.K. Shivakumar) ತಿಳಿಸಿದರು.

[ccc_my_favorite_select_button post_id="117214"]
ದೊಡ್ಡಬಳ್ಳಾಪುರ: ತಂದೆ-ಮಗನ ಮೇಲೆ ಮಾರಣಾಂತಿಕ ಹಲ್ಲೆ..!

ದೊಡ್ಡಬಳ್ಳಾಪುರ: ತಂದೆ-ಮಗನ ಮೇಲೆ ಮಾರಣಾಂತಿಕ ಹಲ್ಲೆ..!

ಮಹಿಳೆಯೊಂದಿಗೆ ಬಂದ ಯುವಕರ ಗುಂಪೊಂದು, ಅಂಗಡಿಯಲ್ಲಿ ವ್ಯಾಪಾರ ಮಾಡುತ್ತಿದ್ದ ತಂದೆ ಮತ್ತು ಮಗನ ಮೇಲೆ ಮಾರಣಾಂತಿಕ ಹಲ್ಲೆ (Assault) ನಡೆಸಿ ಪರಾರಿಯಾಗಿರುವ ಘಟನೆ ತಾಲೂಕಿನ ಪುಟ್ಟಯ್ಯನ ಅಗ್ರಹಾರ ಗ್ರಾಮದಲ್ಲಿ ನಡೆದಿದೆ.

[ccc_my_favorite_select_button post_id="117333"]
ರಾಷ್ಟ್ರೀಯ ಹೆದ್ದಾರಿಯಲ್ಲಿ ಭೀಕರ ಅಪಘಾತ.. 3 ಮಂದಿ ದುರ್ಮರಣ

ರಾಷ್ಟ್ರೀಯ ಹೆದ್ದಾರಿಯಲ್ಲಿ ಭೀಕರ ಅಪಘಾತ.. 3 ಮಂದಿ ದುರ್ಮರಣ

ಕಾರು ಮತ್ತು ಕೆಎಸ್ಆರ್ಟಿಸಿ ಬಸ್ ನಡುವೆ ಭವಿಸಿದ ಭೀಕರ ರಸ್ತೆ ಅಫಘಾತದಲ್ಲಿ (Accident) ಮೂವರು ಸಾವನಪ್ಪಿರುವ ಘಟನೆ *** ಹೊರವಲಯದ *** ಗೇಟ್ ಬಳಿ ಸಂಭವಿಸಿದೆ.

[ccc_my_favorite_select_button post_id="117239"]

ಆರೋಗ್ಯ

ಸಿನಿಮಾ

‘ದಿ ಡೆವಿಲ್’ ರಿಲೀಸ್; ದೊಡ್ಡಬಳ್ಳಾಪುರದಲ್ಲಿ ಮುಗಿಲು ಮುಟ್ಟಿದ ದರ್ಶನ್ ಅಭಿಮಾನಿಗಳ ಸಂಭ್ರಮ.!| Video ನೋಡಿ

‘ದಿ ಡೆವಿಲ್’ ರಿಲೀಸ್; ದೊಡ್ಡಬಳ್ಳಾಪುರದಲ್ಲಿ ಮುಗಿಲು ಮುಟ್ಟಿದ ದರ್ಶನ್ ಅಭಿಮಾನಿಗಳ ಸಂಭ್ರಮ.!| Video

ಅಭಿಮಾನಿಗಳ ದಾಸ, ಚಾಲೆಂಜಿಂಗ್ ಸ್ಟಾರ್ ದರ್ಶನ್ ತೂಗುದೀಪ (Darshan) ಅಭಿನಯದ ಬಹುನಿರೀಕ್ಷಿತ ಚಿತ್ರ 'ದಿ ಡೆವಿಲ್' ಇಂದು (ಡಿ.11) ರಾಜ್ಯಾದ್ಯಂತ ಅದ್ಧೂರಿಯಾಗಿ ರಿಲೀಸ್ ಆಗಿದ್ದು, ಯಶಸ್ವಿ ಪ್ರದರ್ಶನ ಕಾಣುತ್ತಿದೆ.

[ccc_my_favorite_select_button post_id="117242"]