ವೇದ ಜ್ಯೋತಿಷ್ಯದ ಆಧಾರದ ಮೇಲೆ ಕನ್ಯಾ (Kanya) ರಾಶಿಯ ಜಾತಕದಲ್ಲಿ ಆರೋಗ್ಯ, ಶಿಕ್ಷಣ, ಉದ್ಯೋಗ, ಆರ್ಥಿಕ ಸ್ಥಿತಿ, ಕುಟುಂಬ ಮತ್ತು ವ್ಯವಹಾರಕ್ಕೆ ಸಂಬಂಧಿಸಿದ ಫಲಿತಾಂಶಗಳು ಹೀಗಿದೆ.
ರಾಶಿ ಚಕ್ರದಲ್ಲಿ ಆರನೇ ಜ್ಯೋತಿಷ್ಯ ರಾಶಿಯಾಗಿದ್ದು, ಆಕಾಶ ರೇಖಾಂಶದ 150-180 ಡಿಗ್ರಿಗಳನ್ನು ವ್ಯಾಪಿಸಿದೆ.
ಈ ತಿಂಗಳಲ್ಲಿ ಮಿಶ್ರ ಫಲಿತಾಂಶಗಳಿರು ತ್ತವೆ. ವೃತ್ತಿ ಮತ್ತು ಆರೋಗ್ಯದ ವಿಷಯ ದಲ್ಲಿ ಸರಾಸರಿ ಸಮಯ, ಕುಟುಂಬದ ವಿಷಯದಲ್ಲಿ ಒಳ್ಳೆಯ ಸಮಯ. ವೃತ್ತಿಪರವಾಗಿ ನಿಮಗೆ ಸ್ವಲ್ಪ ಕಷ್ಟದ ಸಮಯ, ಏಕೆಂದರೆ ಹೆಚ್ಚು ಕೆಲಸದ ಭಾರ ಮತ್ತು ಹೆಚ್ಚುವರಿ ಜವಾಬ್ದಾರಿಗಳು ಇರುತ್ತವೆ.
ಈ ಕೆಲಸದ ಒತ್ತಡದಿಂದ ಕೆಲವೊಮ್ಮೆ ನೀವು ವಿಶ್ರಾಂತಿ ಇಲ್ಲದೆ ಮತ್ತು ದಣಿದಂತೆ ಭಾವಿಸಬಹುದು. ಯಾರೂ ನಿಮ್ಮನ್ನು ಅರ್ಥಮಾಡಿಕೊಳ್ಳುವುದಿಲ್ಲ ಮತ್ತು ಯಾರೂ ನಿಮ್ಮ ಮಾತು ಕೇಳುವುದಿಲ್ಲ ಎಂಬ ಭಾವನೆ ಇರುತ್ತದೆ.
ಮೊದಲ ಎರಡು ವಾರಗಳಲ್ಲಿ ಇಂತಹ ಪರಿಸ್ಥಿತಿ ಇರುತ್ತದೆ ಮತ್ತು ಕೊನೆಯ ಎರಡು ವಾರಗಳು ಸ್ವಲ್ಪ ಸಕಾರಾತ್ಮಕವಾಗಿರುತ್ತವೆ. ಉದ್ಯೋಗ ಬದಲಾವಣೆಗೆ ಪ್ರಯತ್ನಿಸುವವರು ಶ್ರಮಿಸಬೇಕು, ಆದರೆ ಆತುರದ ನಿರ್ಧಾರಗಳನ್ನು ತೆಗೆದುಕೊಳ್ಳುವುದು ಒಳ್ಳೆಯದಲ್ಲ.
ಆರ್ಥಿಕವಾಗಿ ನಿಮಗೆ ಸರಾಸರಿ ಸಮಯ, ಏಕೆಂದರೆ ಖರ್ಚು ಹೆಚ್ಚಿರುತ್ತದೆ ಮತ್ತು ನೀವು ಅದನ್ನು ನಿಯಂತ್ರಿಸಲು ಸಾಧ್ಯವಾಗುವುದಿಲ್ಲ. ಆರೋಗ್ಯ, ಕುಟುಂಬಕ್ಕೆ ಹಣ ಖರ್ಚು ಮಾಡಬೇಕಾಗಬಹುದು. ಐಷಾರಾಮಿ ವಸ್ತುಗಳಿಗಾಗಿ ಸ್ವಲ್ಪ ಹಣ ಖರ್ಚು ಮಾಡಬಹುದು.
ಹೂಡಿಕೆಗಳಿಗೆ ಇದು ಒಳ್ಳೆಯ ತಿಂಗಳು ಅಲ್ಲ. ಈ ತಿಂಗಳಲ್ಲಿ ಮೂರನೇ ವಾರದಿಂದ ಶುಕ್ರ ಮತ್ತು ಕುಜನ ಸಂಚಾರ ಅನುಕೂಲಕರವಾ ಗಿರುವುದರಿಂದ ಆರ್ಥಿಕವಾಗಿ ಉತ್ತಮವಾಗಿರುತ್ತದೆ. ಆದಾಯ ಹೆಚ್ಚಾಗುತ್ತದೆ.
ಕೌಟುಂಬಿಕ ಜೀವನ ಉತ್ತಮವಾಗಿರುತ್ತದೆ. ನಿಮ್ಮ ಜೀವನ ಸಂಗಾತಿ ಮತ್ತು ಇತರ ಕುಟುಂಬ ಸದಸ್ಯರಿಂದ ಬೆಂಬಲ ದೊರೆಯುತ್ತದೆ, ಇದು ಸಮಸ್ಯೆಗಳನ್ನು ಎದುರಿಸಲು ಧೈರ್ಯವನ್ನು ನೀಡುತ್ತದೆ.
ನೀವು ಕುಟುಂಬದಲ್ಲಿ ನಡೆಯುವ ಒಂದು ಕಾರ್ಯಕ್ರಮದಲ್ಲಿ ಭಾಗವಹಿಸಬಹುದು. ಆದರೆ ಸೂರ್ಯನ ಸಂಚಾರ ಅನುಕೂಲ ಕರವಾಗಿಲ್ಲದ ಕಾರಣ ಕೆಲವೊಮ್ಮೆ ನೀವು ಕೋಪಗೊಳ್ಳುವುದ ರಿಂದ ಕುಟುಂಬ ಸದಸ್ಯರು ತೊಂದರೆ ಅನುಭವಿಸುವ ಸಾಧ್ಯತೆ ಇದೆ. ಸಾಧ್ಯವಾದಷ್ಟು ಶಾಂತವಾಗಿರುವುದು ಒಳ್ಳೆಯದು.
ಆರೋಗ್ಯದ ವಿಷಯದಲ್ಲಿ ಈ ತಿಂಗಳು ಸಾಮಾನ್ಯವಾಗಿರುತ್ತದೆ. ಕಣ್ಣು, ಚರ್ಮ ಮತ್ತು ಉಷ್ಣ ಸಂಬಂಧಿತ ಆರೋಗ್ಯ ಸಮಸ್ಯೆಗಳಿಂದ ಬಳಲಬಹುದು. ಕಣ್ಣುಗಳಿಗೆ ವಿಶ್ರಾಂತಿ ನೀಡಿ, ಸರಿಯಾದ ಆಹಾರ ಸೇವಿಸುವುದು ಮುಖ್ಯ.
ಮೊದಲ ಎರಡು ವಾರಗಳಲ್ಲಿ ಬೆನ್ನು ನೋವು ಮತ್ತು ತಲೆನೋವು ಕಾಡುವ ಸಾಧ್ಯತೆ ಇದೆ, ಆದ್ದರಿಂದ ಮುಂಜಾಗ್ರತಾ ಕ್ರಮಗಳನ್ನು ತೆಗೆದುಕೊಳ್ಳುವುದು ಒಳ್ಳೆಯದು.
ವ್ಯಾಪಾರಿಗಳಿಗೆ, ಸ್ವ ಉದ್ಯೋಗಿಗಳಿಗೆ ಈ ತಿಂಗಳು ಸಾಮಾನ್ಯವಾಗಿರುತ್ತದೆ. ನಿಮ್ಮ ವ್ಯಾಪಾರದಲ್ಲಿ ದೀರ್ಘಕಾಲೀನ ಪ್ರಗತಿ ಮತ್ತು ಸಾಧಾರಣ ಆದಾಯ ಇರುತ್ತದೆ. ಮೂರನೇ ವಾರದಿಂದ ವ್ಯಾಪಾರದಲ್ಲಿ ಬದಲಾವಣೆ, ಆದಾಯ ಹೆಚ್ಚಾಗುತ್ತದೆ. ಹೊಸ ವ್ಯಾಪಾರ ಆರಂಭಿಸಲು ಇದು ಒಳ್ಳೆಯ ತಿಂಗಳು ಅಲ್ಲ. ರಿಯಲ್ ಎಸ್ಟೇಟ್ ವ್ಯವಹಾರ ಗಳು ಪರಿಹಾರವಾಗುವುದರಿಂದ ವ್ಯಾಪಾರದಲ್ಲಿ ಹೆಚ್ಚಿನ ಪ್ರಗತಿ ಸಾಧ್ಯವಾಗುತ್ತದೆ.
ವಿದ್ಯಾರ್ಥಿಗಳಿಗೆ ಓದಿನಲ್ಲಿ ಏಕಾಗ್ರತೆ, ಆಸಕ್ತಿ ಕಡಿಮೆ ಇರುತ್ತದೆ. 1ನೇ ಮನೆಯ ಮೇಲೆ ಸೂರ್ಯನ ಸಂಚಾರದಿಂದ, ಇವರಿಗೆ ಕೋಪ ಮತ್ತು ಒತ್ತಡ ಇರುತ್ತದೆ. ಮೂರನೇ ವಾರದಿಂದ ಶುಕ್ರನ ಸಂಚಾರ ಅನುಕೂಲಕರ ವಾಗಿರುವುದರಿಂದ ಓದಿನ ಕಡೆಗೆ ಏಕಾಗ್ರತೆ ಹೆಚ್ಚಾಗುವ ಸಾಧ್ಯತೆ ಇರುತ್ತದೆ.
ಕನ್ಯಾ ರಾಶಿ: ಉತ್ತರ (2, 3, 4 ಪಾದ), ಹಸ್ತಾ (4 ಪಾದ), ಚಿತ್ತ (1, 2 ಪಾದ) ಕನ್ಯಾ ರಾಶಿಯ ಅಡಿಯಲ್ಲಿ ಬರುತ್ತಾರೆ. ಈ ರಾಶಿ ಅಧಿಪತಿ ಬುಧ.
ಕನ್ಯಾ ರಾಶಿಗೆ ಸೂಚಿಸಲಾದ ಅಕ್ಷರಗಳು: ಪ, ಪಿ, ಪು, ಪೆ, ಪೊ.
ಹೆಚ್ಚಿನ ಮಾಹಿತಿಗೆ: ವಿದ್ವಾನ್ ಎಸ್.ನವೀನ್ M.A., ಅಧ್ಯಕ್ಷರು, ಅಖಿಲ ಕರ್ನಾಟಕ ಬ್ರಾಹ್ಮಣ ಅರ್ಚಕರ ಮತ್ತು ಪುರೋಹಿತರ ಪರಿಷತ್ (ರಿ ), ದೊಡ್ಡಬಳ್ಳಾಪುರ ತಾಲ್ಲೂಕು ಮತ್ತು ಧಾರ್ಮಿಕ ಚಿಂತಕರು ಹಾಗೂ ಸುವರ್ಣ ಕನ್ನಡಿಗ ರಾಜ್ಯ ಪ್ರಶಸ್ತಿ ಪುರಸ್ಕೃತರು. ಮೊ:9620445122.