ಬಾಗಲಕೋಟೆ: ಜನಪದ ಕಲಾವಿದ, ಚಿತ್ರನಟ ಗುರುರಾಜ ಹೊಸಕೋಟೆ ಅವರ ಕಾರು ಅಪಘಾತಕ್ಕೀಡಾಗಿರುವ (Accident) ಘಟನೆ ಮುಧೋಳ ತಾಲೂಕಿನ ಸೋರಗಾವಿ ಬಳಿ ನಡೆದಿದೆ.
ಎದುರಿಗೆ ಬರುತ್ತಿದ್ದ ವಾಹನವನ್ನು ತಪ್ಪಿಸಲು ಹೋದ ಪರಿಣಾಮ ಕಾರು ರಸ್ತೆ ಬದಿಯಲ್ಲಿದ್ದ ಕಲ್ಲಿಗೆ ಡಿಕ್ಕಿ ಹೊಡೆದಿದೆ ಎನ್ನಲಾಗಿದೆ. ಘಟನೆಯಿಂದಾಗಿ ಕಾರಿನ ಮುಂಭಾಗ ನಜ್ಜುಗುಜ್ಜಾಗಿದೆ.
ಕಾರಿನಲ್ಲಿದ್ದ ಗುರುರಾಜ ಹೊಸಕೋಟೆ ಅವರಿಗೆ ಯಾವುದೇ ಗಾಯಗಳಾಗಿಲ್ಲ, ಯಾರಿಗೂ ಪ್ರಾಣಾಪಾಯವಾಗಿಲ್ಲ.
ಸಿಂಧನೂರಿನಿಂದ ಮಹಾಲಿಂಗಪುರಕ್ಕೆ ಹೊರಟಿದ್ದ ಸಂದರ್ಭ ಅಪಘಾತ ಸಂಭವಿಸಿದೆ.