ಚಿಕ್ಕಬಳ್ಳಾಪುರ: ಕೆಟ್ಟ ಮನಸ್ಥಿತಿ ಇರುವ ಜಿಲ್ಲಾ ಉಸ್ತುವಾರಿ ಸಚಿವರ ಜೊತೆ ಅಧಿಕೃತವಾಗಿ ವೇದಿಕೆ ಹಂಚಿಕೊಳ್ಳುವುದಿಲ್ಲಾ ಎಂದು ಸಂಸದ ಡಾ.ಕೆ.ಸುಧಾಕರ್ (Dr.K.Sudhakar) ಹೇಳಿದರು.
ನಗರ ಹೊರವಲಯದಲ್ಲಿ ನಡೆದ ಖಾಸಗಿ ಕಾರ್ಯಕ್ರಮದಲ್ಲಿ ಪಾಲ್ಗೊಂಡ ನಂತರ ಸುದ್ದಿಗಾರರು ನಿನ್ನೆಯ ಆರೋಗ್ಯ ಸಚಿವರ ಕಾರ್ಯಕ್ರಮಕ್ಕೆ ಗೈರಾದ ಬಗ್ಗೆ ಕೇಳಿದ ಪ್ರಶ್ನೆಗೆ ಉತ್ತರಿಸಿ ಮಾತನಾಡಿ, ನನ್ನ ಅವಧಿಯಲ್ಲಿ ಆರೋಗ್ಯ ಕ್ಷೇತ್ರ ಮಾಡಿರುವ ಅಭಿವೃದ್ದಿ ಕಾರ್ಯಗಳಿಗೆ ನಿನ್ನೆ ಚಾಲನೆ ನೀಡಲಾಗಿದೆ.
ಜಿಲ್ಲೆಯಲ್ಲಿ ಆಸ್ಪತ್ರೆಗಳ ಉಧ್ಘಾಟನೆ ಸೇರಿದಂತೆ ಹಲವು ಕಾಮಗಾರಿಗಳ ಕಾರ್ಯಕ್ರಮಗಳಿಗೆ ಚಾಲನೆ ನೀಡಿದ ಆರೋಗ್ಯ ಸಚಿವ ದಿನೇಶ್ ಗುಂಡೂರಾವ್ (Dinesh Gundu Rao) ಹಾಗು ಉಸ್ತುವಾರಿ ಸಚಿವ ಡಾ.ಎಂ.ಸಿ.ಸುಧಾಕರ್ (Dr.M.C.Sudhakar) ಸೌಜನ್ಯಕ್ಕಾದ್ರು ನನ್ನ ಆಹ್ವಾನಿಸಿಲ್ಲ ಎಂದು ಬೇಸರ ವ್ಯಕ್ತಪಡಿಸಿದರು.
ಎಂಟು ಕ್ಷೇತ್ತಗಳನ್ನು ಪ್ರತಿನಿಧಿಸುವ ಸಂಸದರನ್ನ ಕರೆಯುವ ಸೌಜನ್ಯ ಬೇಡವೇ ಎಂದು ಕಿಡಿಕಾರಿದ ಸಂಸದ ಸುಧಾಕರ್ ( Dr.K.Sudhakar) , ಅಂತಹ ಕೆಟ್ಟ ಮನಸ್ತಿತಿಯುಳ್ಳ ಉಸ್ತುವಾರಿ ಸಚಿವ ಡಾ.ಎಂ.ಸಿ.ಸುಧಾಕರ್ ( Dr.M.C.Sudhakar) ಜತೆ ಇನ್ನೆದಿಗೂ ಅಧಿಕೃತವಾಗಿ ವೇದಿಕೆ ಹಂಚಿಕೊಳ್ಳುವ ಕೆಲಸ ಮಾಡೊಲ್ಲ ಇದು ನನ್ನ ಅಚಲ ನಿರ್ಧಾರ ಎಂದು ಘೋಷಿಸಿದರು.
ಇದೆ ವೇಳೆ ನಾನು ಕೈಗೊಂಡ ಅಬಿವೃದ್ದಿ ಕೆಲಸಗಳನ್ನೊಮ್ಮೆ ಆರೋಗ್ಯ ಸಚಿವರು ವೀಕ್ಷಿಸಲಿ ಆಗ ನಮ್ಮ ಅಭಿವೃದ್ದಿ ಏನೆಂದು ಗೊತ್ತಾಗುತ್ತೆ ಎಂದು ಲೇವಡಿ ಮಾಡಿದರು.
ಅವರು ಕಾರ್ಯಕ್ರಮಗಳಿಗೆ ಕರೆಯಲಿ ಬಿಡಲೀ, ಜನರಿಗೆ ಒಳ್ಳೆಯದಾದ್ರೆ ಸಾಕು. ಆದರೆ ಮುಂದಿನ ದಿನಗಳಲ್ಲಿ ಎಲ್ಲಾ ಆಸ್ಪತ್ರೆಗಳಿಗೆ ಭೇಟಿ ನೀಡಿ ಪರಿಶೀಲನೆ ನಡೆಸುತ್ತೇನೆಂದು ಉತ್ತರಿಸಿ, ಜಿಲ್ಲೆಯ ಉಸ್ತುವಾರಿ ಸಚಿವರು ಒಂದು ಕೆಟ್ಟ ಮನಸ್ಥಿತಿ ಇರುವವರು ಅವರು ಭಾಗಿಯಾಗುವ ಯಾವುದೇ ಕಾರ್ಯಕ್ರಮಗಳಲ್ಲಿ ನಾನು ವೇದಿಕೆ ಹಂಚಿಕೊಳ್ಳುವುದಿಲ್ಲಾ ಎಂದು ತೀರ್ಮಾನ ಮಾಡಿದ್ದೇನೆ ಎಂದು ಸ್ಪಷ್ಟಪಡಿಸಿದರು. (ಸಂಗ್ರಹ ಚಿತ್ರ ಬಳಸಲಾಗಿದೆ)