ದೇವನಹಳ್ಳಿ: ಬೆಂಗಳೂರಿಗೆ ಕೇಂದ್ರ ಸಚಿವ ಅಶ್ವಿನಿ ವೈಷ್ಣವ್ ಭೇಟಿ ನೀಡಿದ್ದು, ದೇವನಹಳ್ಳಿಯ (Devanahalli) ರೈಲ್ವೆ ನಿಲ್ದಾಣದಿಂದ ಕಂಟೋನ್ವೆಂಟ್ ರೈಲು ನಿಲ್ದಾಣದವರೆಗೆ ರೈಲ್ವೆ ಇಲಾಖೆಯಿಂದ ನಡೆಸಲಾಗುತ್ತಿರುವ ಕಾಮಗಾರಿಗಳ ಪರಿಶೀಲನೆ ನಡೆಸಿದರು.
ಪರಿಶೀಲನೆ ಬಳಿಕ ಮಾತನಾಡಿದ ಅವರು, Devanahalli ಕೆಂಪೇಗೌಡ ಅಂತಾರಾಷ್ಟ್ರೀಯ ವಿಮಾನ ನಿಲ್ದಾಣದಿಂದ ಯಲಹಂಕವರೆಗೆ ರೈಲ್ವೆ ಲೈನ್ ಮಾಡಲಾಗುವುದು. ಬೆಂಗಳೂರು ಕಂಟೊನ್ವೆಂಟ್ ಬಹಳ ಮಹತ್ವದ ನಿಲ್ದಾಣ. ಎಸ್ಎಂವಿ ಬಳಿಕ ಕಂಟೋನ್ಸೆಂಟ್, ಯಶವಂತಪುರ ರೈಲ್ವೆ ನಿಲ್ದಾಣ ಮರು ನಿರ್ಮಾಣ ಕಾಮಗಾರಿ ನಡೆಯುತ್ತಿದೆ.
18 ಸಾವಿರ ಸ್ಟೋರ್ ಮೀಟರ್ ಅಗಲೀಕರಣ ಮಾಡಲಾಗಿದೆ. ಅಂಡರ್ ಗ್ರಂಡ್ ಪಾರ್ಕಿಂಗ್ ವ್ಯವಸ್ಥೆ ಮಾಡಲಾಗುತ್ತಿದೆ. ಡಿಸೆಂಬರ್ ಕೊನೆಗೆ ಕಾಮಗಾರಿ ಸಂಪೂರ್ಣ ಆಗಲಿದೆ ಎಂದರು.
ಮೈಸೂರು ಟು ಬೆಂಗಳೂರು ನಡುವೆ ನಮೋ ರ್ಯಾಪಿಡ್ ರೈಲು ಓಡಾಟ ಮಾಡುತ್ತಿದೆ. ಇದೀಗ ತುಮಕೂರು ಟು ಬೆಂಗಳೂರು ನಮೋ ರ್ಯಾಪಿಡ್ ರೈಲು ಆರಂಭ ಮಾಡುತ್ತೇವೆ.
ಬೆಂಗಳೂರು ಸಿಟಿಗೆ 200ಕಿಮೀ ಇರುವ ಪ್ರಮುಖವಾದ ನಗರಗಳಿಗೆ ನಮೋ ಯಾಪಿಡ್ ರೈಲು ಸದ್ಯದಲ್ಲಿ ಆರಂಭ ಮಾಡುತ್ತೇವೆ ಎಂದು ಹೇಳಿದರು. ಕೇಂದ್ರ ರಾಜ್ಯ ಖಾತೆ ಸಚಿವ ವಿ ಸೋಮಣ್ಣ, ಸಂಸದ ಪಿಸಿ ಮೋಹನ್ ಮತ್ತು ರೈಲ್ವೆ ಅಧಿಕಾರಿಗಳು ಇದ್ದರು.