ಹೊಸಕೋಟೆ: ನಗರದ ತಾಲೂಕು ಕಚೇರಿ ಮುಂಭಾಗದಲ್ಲಿ ತಾಲೂಕಿನ ಸೂಲಿಬೆಲೆ ಹೋಬಳಿಯ ಕಂಬಳಿಪುರ ಗ್ರಾಮದಲ್ಲಿರುವ ಶ್ರೀ ಅಮ್ಮ ಶಕ್ತಿ ಪೀಠ ಕಾಟೇರಮ್ಮ ದೇವಿ ದೇವಾಲಯಕ್ಕೆ BMTC ಬಸ್ ಸೇವೆಗೆ ಶಾಸಕ ಶರತ್ ಬಚ್ಚೇಗೌಡ ಹಸಿರು ನಿಶಾನೆ ತೋರಿಸಿದರು.
ಈ ವೇಳೆ ಮಾತನಾಡಿದ ಅವರು, ತಾಲೂಕಿನ ಕಂಬಳಿಪುರ ಗ್ರಾಮದಲ್ಲಿರುವ ಶ್ರೀ ಅಮ್ಮ ಶಕ್ತಿ ಪೀಠದ ಕಾಟೇರಮ್ಮ ದೇವಿ ಭಕ್ತರ ಕಷ್ಟಗಳನ್ನು ನಿವಾರಣೆ ಮಾಡುವ ಆಧ್ಯಾತ್ಮಿಕ ಕೇಂದ್ರವಾಗಿ ರೂಪುಗೊಂಡಿದೆ.
ಇದನ್ನೂ ಓದಿ: Dasara: ಖ್ಯಾತ ನಟ ಶಿವರಾಜ್ ಕುಮಾರ್ ಅವರಿಂದ ಶ್ರೀರಂಗಪಟ್ಟಣ ದಸರಾಗೆ ಚಾಲನೆ
ಸಾಮಾಜಿಕ ಜಾಲತಾಣಗಳಲ್ಲಿ ದೇವಾಲಯದ ಪವಾಡ ವೀಕ್ಷಿಸಿ ರಾಜ್ಯದ ಮೂಲೆ ಮೂಲೆಗಳಿಂದ ಭಕ್ತಾದಿಗಳು ಪ್ರತಿದಿನ ಸಾವಿರಾರು ಸಂಖ್ಯೆಯಲ್ಲಿ ಬರುತ್ತಾರೆ. ಆದರೆ ಹೊಸಕೋಟೆಯಿಂದ ದೇವಾಲಯಕ್ಕೆ ತೆರಳಲು ಯಾವುದೇ ರೀತಿಯ ಬಸ್ ಸೇವೆ ಇಲ್ಲದೆ ಭಕ್ತರು ಆಟೋಗಳಲ್ಲಿ ಹೆಚ್ಚಿನ ಹಣವನ್ನ ಕೊಟ್ಟು ಸಂಚಾರ ಮಾಡಬೇಕಿತ್ತು.
ಆದ್ದರಿಂದ ಭಕ್ತಾದಿಗಳ ಸಮಸ್ಯೆಯನ್ನ ಅರಿತು ಎರಡು BMTC ಬಸ್‌ಗಳಿಗೆ ಚಾಲನೆ ನೀಡಲಾಗಿದೆ. ಶಕ್ತಿ ಯೋಜನೆಯನ್ನು ಬಳಸಿಕೊಂಡು ಮಹಿಳೆ ಯರು ಉಚಿತವಾಗಿ ದೇವಾಲಯಕ್ಕೆ ಸಂಚರಿಸಬಹುದು ಎಂದರು.
ಬಸ್‌ಗಳು ಬೆಳಿಗ್ಗೆ 7 ಗಂಟೆಯಿಂದ ಸಂಜೆ 5 ಗಂಟೆವರೆಗೆ ಪ್ರತಿ ಅರ್ಧ ಗಂಟೆಗೊಮ್ಮೆ ಸಂಚಾರ ಮಾಡಲಿದೆ. ರಾಷ್ಟ್ರೀಯ ಹೆದ್ದಾರಿ 207ರ ಹಸಿಗಾಳ ಮೂಲಕ ಕಂಬಳೀಪುರಕ್ಕೆ ತಲುಪಲಿದೆ ಎಂದರು.
ವಾಟ್ಸಪ್ ಚಾನಲ್ ಸೇರಲು ಈ ಲಿಂಕ್ ಬಳಸಿ; https://whatsapp.com/channel/0029Va5azA9GufIxBBdKdG0A
ತಹಶೀಲ್ದಾರ್ ಸೋಮಶೇಖರ್, ಡಾ.ಎಚ್.ಎಂಸುಬ್ಬ ರಾಜ್, ವಿಜಯ್ ಕುಮಾರ್, ನಿಸಾರ್ ಹಾಜರಿದ್ದರು.