ಲಕ್ಕೋ: ಉತ್ತರಪ್ರದೇಶದ ಅಮೇಥಿ ಯಲ್ಲಿ ಪ್ರಾಥಮಿಕ ಶಾಲಾ ಶಿಕ್ಷಕ, ಅವರ ಪತ್ನಿ ಮತ್ತು ಅವರ ಇಬ್ಬರು ಮಕ್ಕಳು ಸೇರಿದಂತೆ ಒಂದೇ ಕುಟುಂಬದ ನಾಲ್ವರನ್ನು ದುಷ್ಕರ್ಮಿಯೋರ್ವ ಅವರ ಮನೆಗೆ ನುಗ್ಗಿ ಗುಂಡಿಕ್ಕಿ ಕೊಂದಿದ್ದಾರೆ (Murder)
ಅಮೇಥಿ ಜಿಲ್ಲೆಯ ಜನನಿಬಿಡ ವಸತಿ ಪ್ರದೇಶದಲ್ಲಿ ಈ ಭೀಕರ ಘಟನೆ ನಡೆದಿದ್ದು, ಇಬ್ಬರು ಗಂಭೀರವಾಗಿ ಗಾಯಗೊಂಡಿದ್ದಾರೆ.
ಭವಾನಿ ನಗರದಲ್ಲಿರುವ ಸಿಂಗ್ ಪುರ ಬ್ಲಾಕ್‌ನ ಪನ್ಹೋನಾ ಪ್ರಾಥಮಿಕ ಶಾಲೆ ಯಲ್ಲಿ ಶಿಕ್ಷಕನಾಗಿ ಕಾರ್ಯ ನಿರ್ವಹಿಸುತ್ತಿದ್ದ ಸುನಿಲ್ ಕುಮಾರ್ ಅವರ ಮನೆಗೆ ತಡರಾತ್ರಿ ನುಗ್ಗಿದ ದುಷ್ಕರ್ಮಿ ಏಕಾಏಕಿ ಅವರ ಮೇಲೆ ದಾಳಿ ನಡೆಸಿದ್ದಾನೆ. ಕುಮಾರ್ (35 ವರ್ಷ), ಅವರ ಪತ್ನಿ (33 ವರ್ಷ), ಆರು ಮತ್ತು ಒಂದು ವರ್ಷದ ಇಬ್ಬರು ಹೆಣ್ಣುಮಕ್ಕಳು ಶೂಟೌಟ್ ನಲ್ಲಿ ದಾರುಣವಾಗಿ ಸಾವನ್ನಪ್ಪಿದ್ದಾರೆ.
ಇದನ್ನೂ ಓದಿ; ಮನೆ ಬೀಗ ಮುರಿದು ಕಳ್ಳತನ| house theft Video
ಮಕ್ಕಳಿಬ್ಬರ ಶವ ಬೆಡ್ ರೂಂನಲ್ಲಿ ಪತ್ತೆಯಾಗಿದ್ದು, ದಂಪತಿ ಶವ ನೀರಿನ ಟ್ಯಾಪ್ బళి ಪತ್ತೆಯಾಗಿವೆ. ದುರ್ಷ್ಕಮಿಗಳನ್ನು ಕಂಡೊಡನೆ ದಂಪತಿ ತಮ್ಮನ್ನು ತಾವು ರಕ್ಷಿಸಿಕೊಳ್ಳಲು ಓಡಿರುವಂತೆ ಕಂಡು ಬಂದಿದೆ.
ಸುನೀಲ್ ಕುಮಾರ್ ಅವರನ್ನು ಇತ್ತೀಚೆಗೆ ರಾಯ್ ಬರೇಲಿಯಿಂದ ಅಮೇಥಿಯ ಸಿಂಗ್ ಪುರ ಬ್ಲಾಕ್‌ಗೆ ವರ್ಗಾವಣೆ ಗೊಂಡಿದ್ದರು ಎನ್ನಲಾಗಿದೆ.
ಆರೋಪಿ ಚಂದನ್ ವರ್ಮಾ ಅವರನ್ನು ಪೊಲೀಸರು ಬಂಧಿಸಿದ್ದು, ವೈಯಕ್ತಿಕ ದ್ವೇಷವೇ ಅಪರಾಧಕ್ಕೆ (Murder news) ಕಾರಣ ಎಂದು ಪೊಲೀಸರ ಪ್ರಾಥಮಿಕ ತನಿಖೆಯಿಂದ ತಿಳಿದುಬಂದಿದೆ.
ವಾಟ್ಸಪ್ ಚಾನಲ್ ಸೇರಲು ಈ ಲಿಂಕ್ ಬಳಸಿ; https://whatsapp.com/channel/0029Va5azA9GufIxBBdKdG0A