ನಿಜವಾಗುತ್ತಿದೆ ಅಭಿಮಾನಿಗಳ ನಂಬಿಕೆ.. Darshan ಪರ ವಕೀಲರ ವಾದಕ್ಕೆ ಕೆಲ ಖಾಸಗಿ ಸುದ್ದಿ ವಾಹಿನಿಗಳು ಕಕ್ಕಾಬಿಕ್ಕಿ

ಬೆಂಗಳೂರು: ಅಶ್ಲೀಲ ಸಂದೇಶ ಕಳಿಸಿದ ಕಾರಣ ವ್ಯಕ್ತಿಯೋರ್ವನ ಹತ್ಯೆ ಆರೋಪದಡಿಯಲ್ಲಿ ನ್ಯಾಯಾಂಗ ಬಂಧನದಲ್ಲಿರುವ ನಟ ದರ್ಶನ್ (Darshan ) ಜಾಮೀನು ಕೋರಿ ಸಲ್ಲಿಸಿದ್ದ ಅರ್ಜಿಯ ವಿಚಾರಣೆ ನಡೆಸಿರುವ ಕೋರ್ಟ್ ಅಕ್ಟೋಬರ್.8ಕ್ಕೆ ಮುಂದೂಡಿದೆ.

ಪ್ರಸಾರವಾದ ಕಲಾಪದ ವರದಿಯನ್ವಯ ದರ್ಶನ್ (Darshan) ಪರ ವಾದ ಮಂಡಿಸುತ್ತಿರುವ ಖ್ಯಾತ ವಕೀಲರಾದ ಸಿ.ವಿ.ನಾಗೇಶ್ ಅವರು ಪೊಲೀಸ್ ತನಿಖೆಯಲ್ಲಿ ಮಾಡಲಾಗಿರುವ ಲೋಪ, ವಸ್ತುಗಳ ರಿಕವರಿ, ಸಾಕ್ಷ್ಯಾ ಸಂಗ್ರಹ, ಆರೋಪಿಗಳ ಸ್ವಇಚ್ಚಾ ಹೇಳಿಕೆಗಳ ಗೊಂದಲ, ಮಹಜರು ಪ್ರಕ್ರಿಯೆ, ಪಂಚನಾಮೆ ಇತ್ಯಾದಿ ತನಿಖೆಯ ಹಂತದಲ್ಲಾದ ದಿನಾಂಕಗಳ ಗೊಂದಲ, ಚಾರ್ಜ್‌ ಶೀಟ್‌ನಲ್ಲಿ ಉಲ್ಲೇಖಿಸಿದಂತೆ ತಾಳೆಯಾಗದಿರುವ ಅಂಶಗಳ ಕುರಿತಾಗಿ ಪಟ್ಟಿ ಮಾಡಿ ಉದ್ದೇಶ ಪೂರ್ವಕವಾಗಿ ತಮ್ಮ ಕಕ್ಷಿದಾರ ದರ್ಶನ್ ವಿರುದ್ಧ ಸಾಕ್ಷಾಗಳನ್ನು ಸೃಷ್ಟಿಸಿಲಾಗಿದೆ ಎಂದು ನ್ಯಾಯಾಧೀಶರ ಗಮನಕ್ಕೆ ತಂದಿದ್ದರು.

ನಿನ್ನೆ ಸಮಯದ ಅಭಾವದಿಂದಾಗಿ ಇಂದಿಗೆ ಪ್ರಕರಣ ಮುಂದೂಡಲಾಗಿತ್ತು. ಇಂದು ವಾದ ಮುಂದುವರೆಸಿದ ಸಿವಿ ನಾಗೇಶ್ ಅವರು, ದರ್ಶನ್ (Darshan) ಕೊಲೆ ಮಾಡಿದ್ದಾರೆಂದು ತೀರ್ಪು ಬರೆದು ಪ್ರಸಾರ ಮಾಡಿದ್ದ ಕೆಲ ಮಾಧ್ಯಮಗಳು ಕಕ್ಕಾಬಿಕ್ಕಿಯಾಗಿ ವರದಿ ಮಾಡುವಂತೆ ಇಡೀ ಪ್ರಕರಣಕ್ಕೆ ಟ್ವಿಸ್ಟ್ ಮೇಲೆ ಟ್ವಿಸ್ಟ್ ಕೊಡುತ್ತಿದ್ದಾರೆ.

ರೇಣುಕಾಸ್ವಾಮಿ ಕೇಸ್‌ನಲ್ಲಿ ದರ್ಶನ್ ವಿರುದ್ಧದ ಸಾಕ್ಷಿಗಳೇ ಸೂಕ್ತವಾಗಿಲ್ಲ. ಇಲ್ಲಿ ರಕ್ತವನ್ನ ತೊಳೆಯಲಾಗಿಲ್ಲ. ಪಂಚನಾಮೆಯಲ್ಲಿ ರಕ್ತದ ಕಲೆ ಬರುತ್ತೆ. ಆದರೆ FSL ವರದಿಯಲ್ಲಿ ರಕ್ತದ ಕಲೆಯೇ ಇಲ್ಲ. ಹಾಗಿದ್ರೆ ಯಾರು ಇಲ್ಲಿ ಸಾಕ್ಷಿಗಳ ಪ್ಲಾಂಟ್ ಮಾಡಿದ್ದು? ಇಂತಹ ಸಾಕ್ಷಿಗಳ ಸೃಷ್ಟಿಗೂ ಮಿತಿ ಇರಬೇಕು. ಇಲ್ಲಿ ನ್ಯಾಯದ ಕಗ್ಗೊಲೆಯಾಗಿದೆ ಎಂದು ಸಿ.ವಿ.ನಾಗೇಶ್ ಅವರು ವಾದ ಮಂಡಿಸಿದ್ದಾರೆ.

ಪಟ್ಟಣಗೆರೆ ಶೆಡ್‌ನ ಸ್ಥಳದಲ್ಲಿ ಸಿಕ್ಕ ಮಣ್ಣನ್ನ ರಿಕವರಿ ಮಾಡಿರುತ್ತಾರೆ. ಅದರಲ್ಲಿ ಯಾವುದೇ ರಕ್ತದ ಕುರುಹುಗಳ ಬಗ್ಗೆ ಹೇಳಿಲ್ಲ. ಇಂದು ಪ್ಯಾಕೆಟ್ ಮಣ್ಣಿನ ಕವರ್ ನೀಡಿದ್ದರು. ಅದನ್ನ ಪರಿಶೀಲನೆ ಮಾಡಿದ್ದಾಗಿ ಹೇಳಿದ್ದಾರೆ. ಆದರೆ ಪಂಚನಾಮೆಯಲ್ಲಿ ಮಣ್ಣನ್ನು ಕಲೆಕ್ಟ್ ಮಾಡಿದ್ದು ಏಕೆ ಹೇಳಿಲ್ಲ. ಅದು ಹೇಗೆ FSLಗೆ ಕಳುಹಿಸಿದ್ದಾರೆ. ಇದು ಇನ್ನೊಂದು ಮಾದರಿ ಸಾಕ್ಷಿಯ ಸೃಷ್ಟಿಯಾಗಿದೆ.

ಪೊಲೀಸರ ಅವರು ಹೇಳ್ತಾರೆ ಆ ಮಣ್ಣು ಅವರ ಶೂನಲ್ಲಿದ್ದ ಮಣ್ಣಿಗೆ ಮ್ಯಾಚ್ ಅಂತಾರೆ. ಪ್ರಕರಣದ 14 ಪ್ರದೂಶ್, ಮೊಬೈಲ್ ತಗೊಂಡು ಡಾಟಾ ಎರೇಸ್ ಮಾಡಿದ್ದಾಗಿ ಹೇಳ್ತಾರೆ. 14ನೇ ಆರೋಪಿ ಮೊಬೈಲ್‌ನಲ್ಲಿ ವಿಡಿಯೋ ಕಳಿಸಿದ್ದಾರೆ. ಅದನ್ನ ಆತನನಿಂದ ನಾನೇ ತರಿಸಿಕೊಂಡೆ ಅಂತಾ ಹೇಳಿದ್ದಾನೆ.

ಮೇಲಿನ ವಿಡಿಯೋ ಬಗ್ಗೆ ಎಫ್ಎಸ್‌ಎಲ್ ವರದಿಯಲ್ಲಿ ಪತ್ತೆಯಾಗಿಲ್ಲ. ಆದರೆ ಈ ವಿಡಿಯೋ FSL ವರದಿಯಲ್ಲಿ ಇಲ್ಲ. ಇಲ್ಲಿ ಪಿಎಸ್ಐ ವಿನಯ್ ಆಳಿಸಿದ್ರೂ ರಿಟ್ರೀವ್ ಮಾಡಬೇಕಿತ್ತು. ಹಾಗಿದ್ದಾಗ ಆತನ ಪೋನ್ ಏಕೆ ಸೀಜ್ ಆಗಿಲ್ಲ. ಆತ 110 ಬಾರಿ ಚಾಟ್ ಮಾಡಿದ್ದಾನೆ. ಆದರೆ ಈ ಕೇಸ್‌ನಲ್ಲಿ ಪಿಎಸ್ಐಯ ಪೋನ್ ಸೀಜ್‌ ಮಾಡಿಲ್ಲ ಎಂದು ಸಿ.ವಿ.ನಾಗೇಶ್ ಪ್ರಶ್ನಿಸಿದ್ದಾರೆ.

ವೈಜ್ಞಾನಿಕವಾಗಿ ತನಿಖೆ ಆಗಬೇಕಾದಾಗ ನಿಯಮಗಳ ಉಲ್ಲಂಘನೆ ಆಗಿದೆ. ಸ್ಥಳಕ್ಕೆ ಭೇಟಿ ನೀಡಿದ್ದ ಪಂಚನಾಮೆ ಸಾಕ್ಷಿ ಹೇಳ್ತಾರೆ. ನಾವು ಹೋಗಿ ನೋಡಿದಾಗ ಒಂದು ಮರದ ಸಣ್ಣ ರೆಂಬೆ 2 ಅಡಿ ಇದ್ದು, ರಕ್ತದ ಕಲೆ ಇರುತ್ತದೆ. ಅಲ್ಲಿದ್ದ ಎರಡು ರಂಬೆಯಲ್ಲಿ ರಕ್ತದ ಕಲೆ ಇರುತ್ತದೆ. ಹೀಗೆ ಪಂಚನಾಮೆ ಮಾಡಿದಾಗ ಪಂಚ ಸಾಕ್ಷಿ ಹೇಳ್ತಾರೆ. ಆದರೆ ಎಫ್ಎಸ್ಎಲ್ ವರದಿಯಲ್ಲಿ ನೋಡಿ ಅದರಲ್ಲಿ ಹೇಳ್ತಾರೆ, ಮರದ ಕೊಂಬೆಯಲ್ಲಿ ರಕ್ತದ ಕಲೆ ಇಲ್ಲ ಅಂತಾರೆ. ಈ ರೀತಿ ಫ್ಯಾಬ್ರಿಕೇಷನ್‌ಗೂ ಒಂದು ಲಿಮಿಟ್ ಇರಬೇಕು. ಇಷ್ಟರ ಮಟ್ಟಿಗೆ ಮಾಡಬಾರದು ಎಂದು ವಕೀಲರು ಆಕ್ರೋಶ ವ್ಯಕ್ತಪಡಿಸಿದ್ದಾರೆ.

ಇನ್ನು ದರ್ಶನ್ (Darshan) ಮನೆಯಲ್ಲಿ ಪೊಲೀಸರು ವಶಪಡಿಸಿಕೊಂಡ ಲಕ್ಷಾಂತರ ರೂಪಾಯಿ ಹಣದ ಮೂಲದ ಬಗ್ಗೆ ನ್ಯಾಯಾಲಕ್ಕೆ ಮಾಹಿತಿ ನೀಡಿದರು.

ಜೂ 18ರಂದು ದರ್ಶನ್‌ ಮನೆಯಲ್ಲಿ 37.5 ಲಕ್ಷ ಹಣವನ್ನು ಪೊಲೀಸರು ವಶಪಡಿಸಿಕೊಂಡಿದ್ದರು. ಈ ಕುರಿತು ವಾದ ಮಂಡಿಸಿದ ಸಿವಿ ನಾಗೇಶ್, ಹಣದ ಮೂಲದ ಬಗ್ಗೆ ನ್ಯಾಯಾಲಯಕ್ಕೆ ಮಾಹಿತಿ ನೀಡಿದರು.

ಸಾಕ್ಷಿಗಳಿಗೆ ಕೊಡಲೆಂದು ದರ್ಶನ್ ಈ ಹಣ ಇಟ್ಟಿದ್ದಾರೆ ಎಂಬುದಾಗಿ ಪೊಲೀಸರು ಹೇಳಿಕೆ ಪಡೆದುಕೊಂಡಿದ್ದಾರೆ. ಆದರೆ ಮೋಹನ್‌ ರಾಜ್ ಎಂಬುವರು ಈ ಹಣವನ್ನು ಮೇ 2ನೇ ತಾರೀಖಿನಂದೇ ದರ್ಶನ್‌ಗೆ (Darshan) ನೀಡಿದ್ದರು. ಅಸಲಿಗೆ ಇವರು ದರ್ಶನ್ ಅವರಿಂದ ಹಣ ಸಾಲ ಪಡೆದಿದ್ದರು. ಆ ಹಣವನ್ನು ಮೇ 2ರಂದೇ ದರ್ಶನ್‌ಗೆ ನೀಡಬೇಕಿದ್ದ ಸಾಲ ವಾಪಸ್ ಮಾಡಿದ್ದರು. ಆಗ ರೇಣುಕಾಸ್ವಾಮಿ ಯಾರೆಂಬುದು ಅವರ ಮನೆಯವರು, ಸಂಬಂಧಿಕರಿಗೆ ಬಿಟ್ಟರೆ ಜಗತ್ತಿಗೇ ಗೊತ್ತಿರಲಿಲ್ಲ.

ಮೋಹನ್ ರಾಜ್ ಪುತ್ರಿಯ ಡ್ಯಾನ್ಸ್ ಆಲ್ಬಂ ಮಾಡಿಸಬೇಕಿತ್ತು, ದರ್ಶನ್ ಈ ಮುಂಚೆ ಮಾಲೀಕರಾಗಿದ್ದ ಡಿ ಬೀಟ್ಸ್‌ ಅವರ ಕಡೆಯವರಿಗೆ ಹೇಳಿ ಈ ಡ್ಯಾನ್ಸ್ ಆಲ್ಬಂ ಮಾಡಿಸಿಕೊಟ್ಟಿದ್ದರು. ಇದಕ್ಕಾಗಿ ದರ್ಶನ್‌ರಿಂದ 40 ಲಕ್ಷ ರೂಪಾಯಿ ಹಣ ಫೆಬ್ರವರಿಯಲ್ಲಿ ಪಡೆದಿದ್ದೆ, ಅದನ್ನು ಮೇ 2ರಂದು ಹಿಂತಿರುಗಿಸಿದ್ದಾಗಿ ಮೋಹನ್ ರಾಜ್ ಪೊಲೀಸರ ಮುಂದೆ ಹೇಳಿಕೆ ನೀಡಿದ್ದಾರೆ. ಹೀಗಿದ್ದಾಗ ರೇಣುಕಾ ಸ್ವಾಮಿ ಕೊಲೆ ಆದ ಬಳಿಕ ದರ್ಶನ್ ಹಣ ಸಂಗ್ರಹಿಸಿದ್ದರೆಂದು ಹೇಳುವುದು ಹೇಗೆ ಎಂದು ಪ್ರಶ್ನಿಸಿದರು.

ಇದನ್ನೂ ಓದಿ: ದರ್ಶನ್ ಬಿಟ್ ಬೇರೆ ಇಲ್ವೇನ್ರೀ; ಖಾಸಗಿ ಸುದ್ದಿ ವಾಹಿನಿಗಳ ವಿರುದ್ಧ ಗೃಹಸಚಿವ ಪರಮೇಶ್ವರ್ ಗರಂ

ರೇಣುಕಾ ಸ್ವಾಮಿ ಎಂಬಾತ ಒಬ್ಬ ಮುಂದೊಂದು ದಿನ ಬರುತ್ತಾನೆ, ಅವನನ್ನು ಕೊಲ್ಲುವ ಪ್ರಮೇಯ ಬರುತ್ತದೆ, ನನ್ನ ಮೇಲೆ ಚಾರ್ಜ್‌ಶೀಟ್ ಹಾಕ್ತಾರೆ ಅದಕ್ಕಾಗಿ ನಾನು ಸಾಕ್ಷಿಗಳಿಗೆ ಕೊಡಲು ಹಣ ಪಡೆಯಬೇಕು ಎಂದು ಮೊದಲೇ ಊಹಿಸಲು ಸಾಧ್ಯವೇ? ಎಂದು ಪ್ರಶ್ನಿಸಿರುವ ವಕೀಲ ಸಿ.ವಿ.ನಾಗೇಶ್, ರೇಣುಕಾ ಸ್ವಾಮಿ ಎಂಬ ಒಬ್ಬ ವ್ಯಕ್ತಿ ಇದ್ದಾನೆ ಎಂಬುದು ಗೊತ್ತಾಗಿದ್ದೆ ಜೂನ್ 6 ರಂದು, ಅಲ್ಲಿಯವರೆಗೆ ಆತನನ್ನು ಗೌತಮ್ ಎಂದೇ ನಂಬಲಾಗಿತ್ತು. ಮಲಗುವಾಗ ಓದಬಹುದಾದ ಅರೇಬಿಯನ್ ನೈಟ್ಸ್ ಕಥೆಯಂತಿದೆ ಪೊಲೀಸರ ತನಿಖಾ ವರದಿ ಎಂದು ದರ್ಶನ್ ಪರ ಸಿವಿ ನಾಗೇಶ್ ವ್ಯಂಗ್ಯ ಮಾಡಿದ್ದಾರೆ.

ನಟ ದರ್ಶನ್ ಅವರನ್ನು ಬೇಕು ಅಂತಲೇ ಕೇಸ್‌ನಲ್ಲಿ ಸಿಲುಕಿಸುವ ಹಾಗೂ ದರ್ಶನ್ ವಿರುದ್ಧ ಸಾಕ್ಷಾಗಳನ್ನು ಸೃಷ್ಟಿಸಲಾಗಿದೆ ಸಿ.ವಿ.ನಾಗೇಶ್ ಅವರು ನ್ಯಾಯಾಲಯದ ಗಮನಕ್ಕೆ ತಂದಿದ್ದಾರೆ.

ದರ್ಶನ್ ಜಾಮೀನು ಅರ್ಜಿಯ ವಿಚಾರಣೆ ವೇಳೆ ಪ್ರಬಲವಾಗಿ ವಾದ ಮಂಡಿಸಿರುವ ನಾಗೇಶ್ ಅವರು, ಪೊಲೀಸರ ತನಿಖೆ ಲೋಪದೋಷಗಳನ್ನು ಉಲ್ಲೇಖಿಸಿದ್ದಾರೆ. ಕೃತ್ಯ ನಡೆದ ಪಟ್ಟಣಗೆರೆ ಶೆಡ್ ಜಾಗದ ಸಿಸಿಟಿವಿ ವಿಡಿಯೋ ನಗರದಿಂದ ಹೊರಗಿದ್ದ ಪಿಎಸ್‌ಐಗೆ ಹೋಗಿತ್ತು.

ಜೂ.9ರಂದು ಆರೋಪಿಗಳೇ ಪಿಎಸ್‌ಐ ವಿನಯ್‌ಗೆ ವಿಡಿಯೋ ಕಳುಹಿಸಿದ್ದಾರೆ. ಮಾಹಿತಿ ಇದ್ದರೂ ಪೊಲೀಸರು ನಟ ದರ್ಶನ್ ಹೇಳಿಕೆ ದಾಖಲಿಸುವ ತನಕ ಸುಮ್ಮನಾಗಿದ್ದರು. ಪ್ರಕರಣದಲ್ಲಿ ದರ್ಶನ್ ಸಿಲುಕಿಸಲು ಪಕ್ಕಾ ಪ್ಲಾನ್ ಇತ್ತು ಎಂದಿರುವ ವಕೀಲರು, ವಿಡಿಯೋ ಮೊಬೈಲ್‌ನಲ್ಲಿದ್ದರೂ ಸೀಜ್ ಯಾಕೆ ಮಾಡಲಿಲ್ಲ. ಮೊಬೈಲ್ FSLಗೆ ಕಳುಹಿಸದೇ ನಿಯಮ ಉಲ್ಲಂಘಿಸಲಾಗಿದೆ.

ಫೋನ್ ಚಾಟ್, ಶೆಟ್ ಸಿಸಿಟಿವಿಯ ಕೆಲ ವಿಡಿಯೋ ಡಿಲೀಟ್ ಯಾರು ಮಾಡಿಸಿದ್ದಾರೆ ಎಂಬ ಪ್ರಶ್ನೆಗಳನ್ನು ದರ್ಶನ್ ಪರ ವಕೀಲರು ಎತ್ತಿದ್ದಾರೆ. ಹೀಗಾಗಿ ಕೇಸ್‌ಗೆ ಫೋನ್ ಚಾಟ್ ವಿಡಿಯೋ ಡಿಲೀಟ್ ಮಾಡಿರುವ ಅಂಶ ಮತ್ತೆ ಟ್ವಿಸ್ಟ್ ಕೊಡುವ ಸಾಧ್ಯತೆ ಇದೆ ಎಂದು ಹೇಳಲಾಗುತ್ತಿದೆ.

ರಾಜಕೀಯ

ಚನ್ನಪಟ್ಟಣ ಟಿಕೆಟ್ ಮಹತ್ವದ ಬೆಳವಣಿಗೆ ನಡೆಯಲಿದೆ: ನಿಖಿಲ್ ಕುಮಾರಸ್ವಾಮಿ

ಚನ್ನಪಟ್ಟಣ ಟಿಕೆಟ್ ಮಹತ್ವದ ಬೆಳವಣಿಗೆ ನಡೆಯಲಿದೆ: ನಿಖಿಲ್ ಕುಮಾರಸ್ವಾಮಿ

ಬೆಂಗಳೂರು: ಉಪಚುನಾವಣೆಗೆ ಈಗಾಗಲೇ ಶಿಗ್ಗಾಂವಿ ಮತ್ತು ಸಂಡೂರು ಟಿಕೆಟ್ ಘೋಷಣೆ ಆಗಿದೆ..ಆದರೆ ಚನ್ನಪಟ್ಟಣ ವಿಚಾರದಲ್ಲಿ ಮಹತ್ವದ ಬೆಳವಣಿಗೆ ನಡೆಯುತ್ತಿದೆ..ಕೊನೆ ಹಂತದಲ್ಲಿ ಏನ್ ಆಗುತ್ತೆ ಅನ್ನೋ ಕುತೂಹಲ ಎಲ್ಲಿರಿಗೂ ಇದೆ ಎಂದು ತಿಳಿಸಿದರು. ಚನ್ನಪಟ್ಟಣದಲ್ಲಿ ನಮ್ಮದೇ

[ccc_my_favorite_select_button post_id="94693"]
Doddaballapura: ಕೋಡಿ ಬಿದ್ದ ಗೌಡನಕೆರೆ..!| Video

Doddaballapura: ಕೋಡಿ ಬಿದ್ದ ಗೌಡನಕೆರೆ..!| Video

ದೊಡ್ಡಬಳ್ಳಾಪುರ: ತಾಲ್ಲೂಕಿನ ಪಂಚಗಿರಿ ಶ್ರೇಣಿಗಳಲ್ಲಿ ಒಂದಾದ ಚನ್ನರಾಯಸ್ವಾಮಿ ಬೆಟ್ಟದ ತಪ್ಪಲಿನ ಗೌಡನಕೆರೆ ಸೋಮವಾರ ರಾತ್ರಿ ಸುರಿದ ಮಳೆಗೆ ಕೋಡಿ ಬಿದ್ದಿದೆ. doddaballapura rain ಈ ಕೆರೆಗೆ ಹೆಚ್ಚಿನ ನೀರು ಹರಿದು ಬರುವುದೇ ಬೆಟ್ಟದ ಮೇಲೆ

[ccc_my_favorite_select_button post_id="94701"]
ಅರುಣ್ ಶಬರಿಮಲೆ ಮುಖ್ಯ ಅರ್ಚಕ

ಅರುಣ್ ಶಬರಿಮಲೆ ಮುಖ್ಯ ಅರ್ಚಕ

ಪತ್ತನಂತಿಟ್ಟ: ಅರುಣ ಕುಮಾರ ನಂಬೂದಿರಿ ಅವರು ಕೇರಳದ ಪ್ರಸಿದ್ಧ ಶಬರಿಮಲೆ ಅಯ್ಯಪ್ಪ ದೇವಸ್ಥಾನದ ಮುಖ್ಯ ಅರ್ಚಕರಾಗಿ ನೇಮಕವಾಗಿದ್ದಾರೆ. ಅರ್ಚಕರ ನೇಮಕಕ್ಕಾಗಿ ಉಷಾ ಪೂಜೆಯ ನಂತರ, ಬೆಳಿಗ್ಗೆ 7.30ರ ಸುಮಾರಿಗೆ ಸಾಂಪ್ರದಾಯಿಕ ಡ್ರಾ ಮೂಲಕ ಆಯ್ಕೆ

[ccc_my_favorite_select_button post_id="94370"]
ರೊವಾಂಡಾ ದೇಶದಲ್ಲಿ ಬಂಡವಾಳ ಹೂಡಿಕೆಗೆ ಮುಕ್ತ ಅವಕಾಶ: ಸ್ಥಳೀಯ ಉದ್ಯಮಿಗಳಿಗೆ ಆಹ್ವಾನ| ಇಂಡಿಯನ್ ಕ್ರೀಡಾ ಶಾಲೆ ಸ್ಥಾಪನೆ: ಸಚಿವ ಸತೀಶ್ ಜಾರಕಿಹೊಳಿ

ರೊವಾಂಡಾ ದೇಶದಲ್ಲಿ ಬಂಡವಾಳ ಹೂಡಿಕೆಗೆ ಮುಕ್ತ ಅವಕಾಶ: ಸ್ಥಳೀಯ ಉದ್ಯಮಿಗಳಿಗೆ ಆಹ್ವಾನ| ಇಂಡಿಯನ್

ಬೆಳಗಾವಿ, (ಸೆ.9): ರೊವಾಂಡಾ ದೇಶದಲ್ಲಿ ಕೃಷಿ, ಆರೋಗ್ಯ, ಶಿಕ್ಷಣ, ಗಣಿಗಾರಿಕೆ, ಇಂಧನ ಹಾಗೂ ಮೂಲಸೌಕರ್ಯಸೇರಿದಂತೆ ವಿವಿಧ ಕ್ಷೇತ್ರಗಳಲ್ಲಿ ಬಂಡವಾಳ ಹೂಡಿಕೆಗೆ ವಿಫುಲ ಅವಕಾಶಗಳಿವೆ. ಕೈಗಾರಿಕೋದ್ಯಮಿಗಳು ಮತ್ತು ಬಂಡವಾಳ ಹೂಡಿಕೆದಾರರಿಗೆ ಅನುಕೂಲವಾಗುವಂತಹ ಉದ್ಯಮಸ್ನೇಹಿ ವಾತಾವರಣ ಹೊಂದಿದ್ದು, ಇಲ್ಲಿನ ಹೂಡಿಕೆದಾರರಿಗೆ ಮುಕ್ತ ಸ್ವಾಗತವಿದೆ ಎಂದು ಪೂರ್ವ

[ccc_my_favorite_select_button post_id="89581"]

ಕ್ರೀಡೆ

Doddaballapura: ರಾಜ್ಯಮಟ್ಟದ ಯೋಗ ಪಂದ್ಯಾವಳಿಯಲ್ಲಿ 14 ಮಂದಿ ರಾಷ್ಟ್ರ ಮಟ್ಟಕ್ಕೆ ಆಯ್ಕೆ..

Doddaballapura: ರಾಜ್ಯಮಟ್ಟದ ಯೋಗ ಪಂದ್ಯಾವಳಿಯಲ್ಲಿ 14 ಮಂದಿ ರಾಷ್ಟ್ರ ಮಟ್ಟಕ್ಕೆ ಆಯ್ಕೆ..

ದೊಡ್ಡಬಳ್ಳಾಪುರ: ಬೆಂಗಳೂರು ಗ್ರಾಮಾಂತರ ಜಿಲ್ಲಾಡಳಿತ, ಶಾಲಾ ಶಿಕ್ಷಣ ಇಲಾಖೆ (ಪದವಿ ಪೂರ್ವ) ವತಿಯಿಂದ ನಗರದ ದೇವರಾಜ ಅರಸು ಪದವಿ ಪೂರ್ವ ಕಾಲೇಜಿನಲ್ಲಿ ನಡೆದ ಪದವಿ ಪೂರ್ವ ಕಾಲೇಜುಗಳ ರಾಜ್ಯಮಟ್ಟದ ಯೋಗ ಪಂದ್ಯಾವಳಿಯ ಸಮಾರೋಪ ಸಮಾರಂಭ

[ccc_my_favorite_select_button post_id="94463"]
News update: ಅಣ್ಣ ತಂಗಿಯ ಮೃತ ದೇಹಗಳು ಪತ್ತೆ.. ಮುಗಿಲು ಮುಟ್ಟಿದ ಹೆತ್ತಮ್ಮನ ರೋಧನೆ

News update: ಅಣ್ಣ ತಂಗಿಯ ಮೃತ ದೇಹಗಳು ಪತ್ತೆ.. ಮುಗಿಲು ಮುಟ್ಟಿದ ಹೆತ್ತಮ್ಮನ

ಬೆಂಗಳೂರು: ನೀರು ತರಲು ಹೋಗಿದ್ದ ವೇಳೆ ಆಯತಪ್ಪಿ ಕೆಂಗೇರಿ (Kengeri) ಕೆರೆಗೆ ಬಿದ್ದು ನಾಪತ್ತೆಯಾಗಿದ್ದ ಅಣ್ಣ-ತಂಗಿಯ ಮೃತದೇಹಗಳು ಪತ್ತೆಯಾಗಿವೆ. ಮೊದಲಿಗೆ ಅಣ್ಣ ಜಾನ್ಸನ್ ಮೃತದೇಹ ಸಿಕ್ಕಿದೆ. ಇದೀಗ ಮಹಾಲಕ್ಷ್ಮೀ ಮೃತದೇಹ ಪತ್ತೆಯಾಗಿದ್ದು, ಪೋಷಕರ ಆಕ್ರಂದನ ಮುಗಿಲು ಮುಟ್ಟಿದೆ. ಸೋಮವಾರ ಸಂಜೆ 6 ಗಂಟೆ

[ccc_my_favorite_select_button post_id="94698"]
ಮದುವೆಗೆ ಹೊರಟಿದ್ದ ಬಸ್ ಉರುಳಿ ಹಲವರಿಗೆ ಗಾಯ

ಮದುವೆಗೆ ಹೊರಟಿದ್ದ ಬಸ್ ಉರುಳಿ ಹಲವರಿಗೆ ಗಾಯ

ಕನಕಪುರ: ಮದುವೆಗೆ ಹೊರಟ್ಟಿದ್ದ ಖಾಸಗಿ ಬಸ್ಸೋಂದು ಚಾಲಕನ ನಿಯಂತ್ರಣ ತಪ್ಪಿ ಉರುಳಿ ಬಿದ್ದ ಪರಿಣಾಮ 20ಕ್ಕೂ ಹೆಚ್ಚು ಮಂದಿ ಗಾಯಗೊಂಡಿರುವಘಟನೆ ತಾಲೂಕಿನ ಸಂಗಮದ ಮಡಿವಾಳ ಬಳಿ ಭಾನುವಾರ ಬೆಳಗ್ಗೆ ನಡೆದಿದೆ. ತಗಡೇಗೌಡನದೊಡ್ಡಿ ಗ್ರಾಮದ ವಧು

[ccc_my_favorite_select_button post_id="94562"]

ಆರೋಗ್ಯ

ಸಿನಿಮಾ

ಜಾಮೀನಿಗಾಗಿ ಹೈಕೋರ್ಟ್‌ ಮೆಟ್ಟಿಲೇರಿದ ದರ್ಶನ್ ಪರ ವಕೀಲರು

ಜಾಮೀನಿಗಾಗಿ ಹೈಕೋರ್ಟ್‌ ಮೆಟ್ಟಿಲೇರಿದ ದರ್ಶನ್ ಪರ ವಕೀಲರು

ಬೆಂಗಳೂರು: ಅಶ್ಲೀಲ ಸಂದೇಶ ಕಳಿಸಿದ ವ್ಯಕ್ತಿಯೋರ್ವನ ಹತ್ಯೆ ಆರೋಪದ ಹಿನ್ನೆಲೆಯಲ್ಲಿ ನ್ಯಾಯಾಂಗ ಬಂಧನದಲ್ಲಿರುವ ನಟ ದರ್ಶನ್ ಅವರಿಗೆ ಜಾಮೀನು ನೀಡಲು ಬೆಂಗಳೂರಿನ 57ನೇ ಸಿಸಿ ಹೆಚ್ ನ್ಯಾಯಾಲಯ ನಿರಾಕರಿಸಿದ ಹಿನ್ನಲೆಯಲ್ಲಿ ನಟ ದರ್ಶನ್ ಪರವಾಗಿ

[ccc_my_favorite_select_button post_id="94198"]
error: Content is protected !!