ಬೆಂಗಳೂರು: ಮದ್ಯ ಸೇವಿಸಿ ಗಲಾಟೆ ಮಾಡುತ್ತಿದ್ದ ಎಂಬ ಕಾರಣಕ್ಕೆ ಯುವಕನೊಬ್ಬನ ಹಳೆಯ ಸಹುದ್ಯೋಗಿಗಳೇ ಮರದ ರೀಪ್‌ನಿಂದ ಬಡಿದು ಕೊಲೆ ಮಾಡಿದ್ದಾರೆ. (crime news)
ಬಿಹಾರದ ಸುಜಿತ್ (34) ಮೃತ. ಸಂಜಯ್ (28) ಅಮನ್ ಕುಮಾರ್ (22) ಹಂತಕರು. ಗುರುವಾರ ತಡರಾತ್ರಿ ಮೈಕೋ ಲೇಔಟ್ ಠಾಣಾ ವ್ಯಾಪ್ತಿಯಲ್ಲಿ ಕೊಲೆ ನಡೆದಿದ್ದು ಆರೋಪಿಗಳಿಬ್ಬರನ್ನು ಪೊಲೀಸರು ಬಂಧಿಸಿದ್ದಾರೆ.
ಸುಜಿತ್, ಸಂಜಯ್ ಹಾಗೂ ಅಮನ್ ಕುಮಾರ್ ಮೈಕೋ ಲೇಔಟ್‌ನಲ್ಲಿರುವ ಫೈವುಡ್ ಅಂಗಡಿಯೊಂದರಲ್ಲಿ ಕೆಲಸ ಮಾಡುತ್ತಿದ್ದರು. ಕೆಲಸದ ವೇಳೆಯೂ ಮದ್ಯ ಸೇವನೆ ಮಾಡುತ್ತಿದ್ದ ಕಾರಣಕ್ಕಾಗಿ ಸುಜಿತ್ ನನ್ನು ಕೆಲಸದಿಂದ ತೆಗೆದುಹಾಕಲಾಗಿತ್ತು.
ಆದರೆ ಸುಜಿತ್ ಆಗಾಗ ಮದ್ಯ ಸೇವಿಸಿ ಅಂಗಡಿ ಮುಂದೆ ಬಂದು ಗಲಾಟೆ ಮಾಡುತ್ತಿದ್ದ ಎಂಬ ಕಾರಣಕ್ಕೆ ಕೊಲೆ ಮಾಡಿದ್ದಾಗಿ ಆರೋಪಿಗಳು ತಪ್ಲೊಪ್ಪಿಕೊಂಡಿದ್ದಾರೆ ಎನ್ನಲಾಗಿದೆ.