ರಾಮನಗರ: ಮಕ್ಕಳೇ ನಾ ಯಾರು ಗೊತ್ತಾ..? ನನ್ನ ಹೆಸರೇನು ಹೇಳಿ, ನಾನು ಏನು ಇದೀನಿ ಗೊತ್ತಾ ಎಂದು ಪ್ರಶ್ನಿಸುವ ಮೂಲಕ ಚನ್ನಪಟ್ಟಣ ತಾಲೂಕಿನ ಚಕ್ಕೆರೆ ಗ್ರಾಮದ ಸರ್ಕಾರಿ ಶಾಲಾ ಮಕ್ಕಳೊಂದಿಗೆ ಉಪ ಮುಖ್ಯಮಂತ್ರಿ ಡಿಕೆ ಶಿವಕುಮಾರ್ (DK Shivakumar) ಅವರು ಮಾತುಕತೆ ನಡೆಸಿದರು.
ಚಕ್ಕೆರೆ ಗ್ರಾಮದಲ್ಲಿ ಇಂದು ಸರ್ಕಾರಿ ಹಿರಿಯ ಪ್ರಾಥಮಿಕ ಶಾಲೆ ನೂತನ ಕಟ್ಟಡ ಉದ್ಘಾಟನೆ ಬಳಿಕ ಶಾಲಾ ಮಕ್ಕಳೊಂದಿಗೆ ಅವರು ಮಾತುಕತೆ ನಡೆಸಿದ ಅವರ ಪ್ರಶ್ನೆಗಳಿ ಮಕ್ಕಳು, ನೀವು ಡಿಕೆ ಶಿವಕುಮಾರ್ (DK Shivakumar), ಈ ರಾಜ್ಯದ ಉಪ ಮುಖ್ಯಮಂತ್ರಿ ಎಂದು ಮಕ್ಕಳು ಹೂವನ್ನು ನೀಡಿ ಒಕ್ಕೊರಿಲಿನಿಂದ ಪ್ರತಿಕ್ರಿಯೆ ನೀಡಿದರು.
ಇದನ್ನೂ ಓದಿ: Darshan ಪರ ಸಿವಿ ನಾಗೇಶ್ ಅವರ ಪ್ರಬಲ ವಾದಕ್ಕೆ ಕೆಲ ಖಾಸಗಿ ಸುದ್ದಿ ವಾಹಿನಿಗಳು ಶಾಕ್..!
ಮಕ್ಕಳ ಉತ್ತಮ ಭವಿಷ್ಯ ಸಮಯ ಪಾಲನೆ ಬಗ್ಗೆ ಕಿವಿಮಾತು ಹೇಳಿದ ಡಿಕೆಶಿ, ಪ್ರತಿ ದಿನವನ್ನು ವ್ಯರ್ಥ ಮಾಡಬಾರದು.. ಪ್ರತಿ ದಿನವೂ ಜೀವನದಲ್ಲಿ ಅತ್ಯಮೂಲ್ಯ ಪ್ರತಿ ದಿನ ಒಳ್ಳೆಯದಾಗಿರುತ್ತದೆ ಎಂದು ಮುಂದೆ ಸಾಗಬೇಕು ಎಂದು ಸಲಹೆ ನೀಡಿದರು.
ಇಂದು ಚನ್ನಪಟ್ಟಣ ವಿಧಾನಸಭಾ ಕ್ಷೇತ್ರದ ಹಲವು ಗ್ರಾಮಗಳಲ್ಲಿ ಡಿಕೆ ಶಿವಕುಮಾರ್ ಅವರು ವಿವಿಧ ರಸ್ತೆ ಅಭಿವೃದ್ಧಿ ಕಾಮಗಾರಿಗಳಿಗೆ ಚಾಲನೆ ನೀಡಿದರು.
ವಾಟ್ಸಪ್ ಗುಂಪಿಗೆ ಸೇರಲು ಇಲ್ಲಿ ಕ್ಲಿಕ್ ಮಾಡಿ; https://whatsapp.com/channel/0029Va5azA9GufIxBBdKdG0A