Site icon ಹರಿತಲೇಖನಿ

ಬೈಕ್‌ಗಳ ನಡುವೆ ಅಪಘಾತ: ಓರ್ವ ಸಾವು.. ಪೊಲೀಸರಿಗೆ ಗಾಯ..!

ರಾಮನಗರ: ಬೈಕ್‌ಗಳ ನಡುವೆ ಸಂಭವಿಸಿದ ಅಪಘಾತದಲ್ಲಿ ಓರ್ವ ಸಾವನ್ನಪ್ಪಿ, ಇಬ್ಬರು ಗಾಯಗೊಂಡಿರುವ ಘಟನೆ ನಗರದ ಕನಕಪುರ ವೃತ್ತದಲ್ಲಿ ಗುರುವಾರ ನಡೆದಿದೆ.

ಚನ್ನಪಟ್ಟಣ ತಾಲೂಕಿನ ಮಾಳಗಾಲು ಗ್ರಾಮದ ಯಶವಂತ್ (20) ಮೃತ ದುರ್ದೈವಿ. ಗಾಯಾಳುಗಳಾದ ಗುರುರಾಜ್ ಮತ್ತು ನಾಗೇಶ್ ಆಸ್ಪತ್ರೆ ಯಲ್ಲಿ ಚಿಕಿತ್ಸೆ ಪಡೆಯುತ್ತಿದ್ದಾರೆ.

ರಾಮನಗರದಿಂದ ಚನ್ನಪಟ್ಟಣಕ್ಕೆ ಯಶವಂತ್‌ ಬೈಕ್‌ನಲ್ಲಿ ತೆರಳುತ್ತಿದ್ದಾಗ ಕನಕಪುರ ವೃತ್ತದಲ್ಲಿ ಅಡ್ಡ ಬಂದ ಗುರುರಾಜ್ ಮತ್ತು ನಾಗೇಶ್ ಅವರಿದ್ದ ಬೈಕಿಗೆ ಡಿಕ್ಕಿ ಹೊಡೆದಿದೆ.

ಗಾಯಾಳುಗಳು ಪೊಲೀಸ್ ಪೇದೆಗಳೆಂದು ತಿಳಿದು ಬಂದಿದೆ. ಈ ಅಪಘಾತದ ದೃಶ್ಯಾವಳಿ ಸಿಸಿ ಕ್ಯಾಮೆರಾದಲ್ಲಿ ಸೆರೆಯಾಗಿದೆ.

ಈ ಸಂಬಂಧ ಸಂಚಾರಿ ಠಾಣೆ ಪೊಲೀಸರು ಪ್ರಕರಣ ದಾಖಲಿಸಿಕೊಂಡಿದ್ದಾರೆ.

Exit mobile version