Site icon ಹರಿತಲೇಖನಿ

ಲಾರಿ ಕ್ಲೀನರ್ ಎದೆ ಸೀಳಿದ್ದ ಕಬ್ಬಿಣ ಪೈಪ್ ತೆಗೆದ ಕೆಎಂಸಿಆರ್‌ಐ ವೈದ್ಯರು: ಭಾರೀ ಮೆಚ್ಚುಗೆ

ಹುಬ್ಬಳ್ಳಿ: ಚಲಿಸುತ್ತಿದ್ದ ಲಾರಿ ಪಲ್ಟಿಯಾಗಿ ಲಾರಿ ಕ್ಲೀನರ್ ಎದೆಗೆ ಚುಚಿದ್ದ 98 ಸೆಂ. ಮೀ ಕಬ್ಬಿಣದ ಪೈಪ್ ಹೊರತೆಗೆಯುವಲ್ಲಿ ಹುಬ್ಬಳ್ಳಿಯ ಕೆಎಂಸಿಆರ್‌ಐ ವೈದ್ಯರು ಯಶಸ್ವಿಯಾಗಿದ್ದಾರೆ. ವೈದ್ಯರ ಕೆಲಸಕ್ಕೆ ಭಾರೀ ಮೆಚ್ಚುಗೆ ವ್ಯಕ್ತವಾಗಿದೆ.

ಬುಧವಾರ ರಾಣಿಬೆನ್ನೂರಿನ ನ್ಯೂರಿನ ಹೂಲಿಹಳ್ಳಿ ಬಳಿ ರಾಷ್ಟ್ರೀಯ ಹೆದ್ದಾರಿಯಲ್ಲಿ ನಡೆದ ಅಪಘಾತದಲ್ಲಿ (accident) ಕಬ್ಬಿಣದ ಪೈಪ್ ಲಾರಿ ಕ್ಲೀನರ್ ದಯಾನಂದ ಶಂಕರ ಬಡಗಿ (27)ಯ ಎದೆ ಸೀಳಿ ಸರ್ವಿಸ್ ರಸ್ತೆಯ ಕಬ್ಬಿಣದ ಪೈಪ್ ಹೊರ ಬಂದಿತ್ತು.

ತಕ್ಷಣ ದಾವಣಗೆರೆ ಆಸ್ಪತ್ರೆಗೆ ದಾಖಲಿಸಿ, ಹೆಚ್ಚಿನ ಚಿಕಿತ್ಸೆಗೆ ಹುಬ್ಬಳ್ಳಿಯ ಕೆಎಂ ಸಿಆರ್‌ಐನ ತುರ್ತು ಚಿಕಿತ್ಸಾ ಘಟಕಕ್ಕೆ ಕರೆ ತರಲಾಗಿತ್ತು. ಡಾ.ರಮೇಶ ಹೊಸಮನಿ ನೇತೃತ್ವದ ತಂಡವು ಯಶಸ್ವಿ ಶಸ್ತ್ರ ಚಿಕಿತ್ಸೆ ನಡೆಸಿ ಪೈಪ್ ಹೊರ ತೆಗೆದಿದೆ.

ಶಸ್ತ್ರಚಿಕಿತ್ಸೆಗೆ ಯಾವುದೇ ಹಣ ಪಡೆದಿಲ್ಲ ಎಂದು ವೈದ್ಯರು ತಿಳಿಸಿದ್ದಾರೆ.

Exit mobile version