ದೊಡ್ಡಬಳ್ಳಾಪುರ: ಕೆಲ ತಿಂಗಳಿಂದ ತಾಲೂಕಿನಲ್ಲಿ ತಣ್ಣಗಿದ್ದ ಚಿರತೆ ಹಾವಳಿ ಸುದ್ದಿ ಮತ್ತೆ ಕೇಳಿಬಂದಿದ್ದು, ಗ್ರಾಮದ ಹೊರವಲಯದಲ್ಲಿರುವ ಜಮೀನಿನಲ್ಲಿ ಮೇಯುತ್ತಿದ್ದ ಹಸು ಮೇಲೆ ದಾಳಿ ನಡೆಸಿ ಕೊಂದು ಹಾಕಿರುವ ಘಟನೆ ತಾಲೂಕಿನ ತೂಬಗೆರೆ ಹೋಬಳಿ ಸಿದ್ದಾಪುರದ ಬಳಿ ಸಂಭವಿಸಿದೆ.
ಸಾಧು ಮಠ ಗ್ರಾಮದ ನಿವಾಸಿ ವಿಶ್ವನಾಥ್ ಎನ್ನುವವರಿಗೆ ಸೇರಿದ ಸುಮಾರು 20-25 ಸಾವಿರ ಮೌಲ್ಯದ ಹಸು ಚಿರತೆ ದಾಳಿಯಿಂದಾಗಿ ಸಾವನಪ್ಪಿದೆ.
ಬುಧವಾರ ಸಂಜೆ 5:30ರ ವೇಳೆಗೆ ಸಿದ್ದಾಪುರದ ಸಮೀಪದ ಜಮೀನಿನಲ್ಲಿ ಹಸು ಮೇವನ್ನು ಮೇಯುವ ವೇಳೆ ಚಿರತೆ ದಾಳಿ ನಡೆಸಿ, ಹಸುವನ್ನು ಕೊಂದು ಹಾಕಿದೆ.
ಈ ಕುರಿತು ಅರಣ್ಯ ಇಲಾಖೆ ಮಾಹಿತಿ ನೀಡಲಾಗಿದೆ ಎಂದು ರೈತ ವಿಶ್ವನಾಥ್ ತಿಳಿಸಿದ್ದು, ಉಂಟಾಗಿರುವ ಆರ್ಥಿಕ ನಷ್ಟಕ್ಕೆ ಸರ್ಕಾರದಿಂದ ದೊರಕುವ ಪರಿಹಾರದ ನಿರೀಕ್ಷೆಯಲ್ಲಿದ್ದಾರೆ. (ಸಾಂದರ್ಭಿಕ ಚಿತ್ರ ಬಳಸಲಾಗಿದೆ)