ದೊಡ್ಡಬಳ್ಳಾಪುರ; ಎರಡು ದ್ವಿಚಕ್ರ ವಾಹನಗಳ ನಡುವೆ ಸಂಭವಿಸಿದ ಭೀಕರ ಅಪಘಾತದಲ್ಲಿ ( Accident) ಓರ್ವ ಬೈಕ್ ಸವಾರ ಗಂಭೀರವಾಗಿ ಗಾಯಗೊಂಡಿರುವ ಘಟನೆ Doddaballapura ನಗರದ ಹೊರವಲಯದಲ್ಲಿರುವ ಸಿದ್ದೇನಾಯಕನಹಳ್ಳಿ ಬಳಿ ಸಂಭವಿಸಿದೆ.
ಕಾವಾಸಾಕಿ ನಿಂಜಾ ಹಾಗೂ ಬುಲೆಟ್ ನಡುವೆ ಅಪಘಾತ ಸಂಭವಿಸಿದ್ದು, ಬುಲೆಟ್ ಸವಾರ ಗಂಭೀರವಾಗಿ ಗಾಯಗೊಂಡಿದ್ದಾರೆ.
ಬುಲೆಟ್ ಸವಾರ ಸಿದ್ದೇನಾಯಕನಹಳ್ಳಿ ವೃತ್ತದ ಬಳಿ ತಿರುವ ಪಡೆಯುವ ಸಂದರ್ಭದಲ್ಲಿ ವೇಗವಾಗಿ ಬಂದ ನಿಂಜಾ ಬೈಕಿ ಡಿಕ್ಕಿ ಹೊಡೆದು ಘಟನೆ ಸಂಭವಿಸಿದೆ ಎಂದು ಪ್ರತ್ಯಕ್ಷದರ್ಶಿಗಳು ತಿಳಸಿದ್ದಾರೆ.
ಘಟನೆಯಲ್ಲಿ ಬುಲೆಟ್ ಬೈಕ್ ಪೀಸ್ ಪೀಸ್ ಆಗಿದ್ದು, ಮುಂದಿನ ಚಕ್ರವೇ ಕಾಣೆಯಾಗಿದೆ. ಇನ್ನೂ ನಿಂಜಾ ಬೈಕ್ ಮುಂಭಾಗ ತೀವ್ರವಾಗಿ ಜಖಂಗೊಂಡಿದೆ.
ಗಂಭೀರವಾಗಿ ಗಾಯಗೊಂಡ ಬುಲೆಟ್ ಸವಾರನನ್ನು ಆಸ್ಪತ್ರೆಗೆ ಕರೆದೊಯ್ಯಲಾಗಿದ್ದು, ಗುರುತು ಪತ್ತೆಯಾಗಿಲ್ಲ.
ಸ್ಥಳಕ್ಕೆ ದೊಡ್ಡಬಳ್ಳಾಪುರ ನಗರ ಠಾಣೆ ಪೊಲೀಸರು ಭೇಟಿ ನೀಡ ಪರಿಶೀಲನೆ ನಡೆಸುತ್ತಿದ್ದಾರೆ. (ಹೆಚ್ಚಿನ ಮಾಹಿತಿ ನಿರೀಕ್ಷಿಸಲಾಗಿದೆ)