ದೊಡ್ಡಬಳ್ಳಾಪುರ: ಇತ್ತೀಚಿಗೆ ತಾಲೂಕಿನ ಮಧುರೆ ಹೋಬಳಿ ಕನಸವಾಡಿ ಮತ್ತು ಕನ್ನಮಂಗಲ ಮೈದಾನದಲ್ಲಿ ಆಯೋಜಿಸಿದ್ದ ಸ್ನೇಹಲೋಕ ಕಪ್- ಸೀಸನ್ 4ರ ಕ್ರಿಕೆಟ್ ಟೂರ್ನಿಯಲ್ಲಿ ಮಾರಸಂದ್ರದ ಎಂಆರ್ ಇಲೆವೆನ್ ತಂಡ ಪ್ರಥಮ ಸ್ಥಾನವನ್ನು ಪಡೆದು ಸ್ನೇಹಲೋಕ ಕಪ್ ತನ್ನದಾಗಿಸಿಕೊಂಡಿದೆ.
ಶನಿವಾರ ಮತ್ತು ಭಾನುವಾರ ನಡೆದ ಮಧುರೆ ಹೋಬಳಿಯ ಒಟ್ಟು 13 ತಂಡಗಳು ಈ ಸ್ಪರ್ಧೆಯಲ್ಲಿ ಭಾಗವಹಿಸಿದ್ದು, ಪ್ರಥಮ ಸ್ಥಾನ ಎಂಆರ್ ಇಲೆವೆನ್ ತಂಡ (ಮಾರಸಂದ್ರ) ದ್ವಿತೀಯ ಬಹುಮಾನವನ್ನು ಜಾಗೃತಿ ಕ್ರಿಕೇಟರ್ಸ್ (ಬೀರಯ್ಯನ ಪಾಳ್ಯ), ತೃತೀಯ ಬಹುಮಾನ ಟಿ.ಪಿ.ಸ್ಟೈಕರ್ಸ್ (ಜೋಡಿ ತಿಮ್ಮಸಂದ್ರ) ಮತ್ತು ಭಗತ್ ಕ್ರಿಕೇಟರ್ಸ್ (ಮದಗೊಂಡನಹಳ್ಳಿ) ಜಂಟಿಯಾಗಿ ಪಡೆದಿದ್ದಾರೆ.
ಮಹಾತ್ಮ ಗಾಂಧಿ ಜಯಂತಿ ಹಿನ್ನೆಲೆಯಲ್ಲಿ ಇಂದು ಎಲ್.ಜಿ.ಮಹಲ್ ನಲ್ಲಿ ನಡೆದ ಸಮಾರಂಭದಲ್ಲಿ ವಿಜೇತರಿಗೆ ದೊಡ್ಡಬಳ್ಳಾಪುರ ಯೋಜನಾ ಪ್ರಾಧಿಕಾರದ ಅಧ್ಯಕ್ಷ ಚುಂಚೇಗೌಡ ಅವರು ಕಪ್ ವಿತರಿಸಿದರು.
ಈ ವೇಳೆ ಗ್ರಾಪಂ ಮಾಜಿ ಅಧ್ಯಕ್ಷ ಶ್ರೀ ಪ್ರಭಾಕರ್, ಮಧುರೆ ಹೋಬಳಿ ಕ್ರಿಕೆಟ್ ಅಸೋಸಿಯೇಷನ್ ಅಧ್ಯಕ್ಷ ಮುನ್ನ, ಕಾರ್ಯದರ್ಶಿ ದೇವರಾಜ ಕೆ (ವಕೀಲರು), ಖಜಾಂಚಿ ಶ್ರೀನಿವಾಸ ಮತ್ತಿತರರಿದ್ದರು.