ಮುಂಬಯಿ: ಬಾಲಿವುಡ್ ಖ್ಯಾತ ನಟ, ಶಿವಸೇನೆ ನಾಯಕ ಗೋವಿಂದ ಅವರಿಗೆ ಆಕಸ್ಮಿಕವಾಗಿ ಗುಂಡು ತಗುಲಿ ಆಸ್ಪತ್ರೆಗೆ ದಾಖಲಾಗಿದ್ದಾರೆ ಎಂದು ವರದಿಯಾಗಿದೆ.
ಇಂದು ಬೆಳಗ್ಗೆ ನಟ ಗೋವಿಂದ ಅವರ ಕಾಲಿಗೆ ಅವರದೇ ರಿವಾಲ್ವರ್‌ನಿಂದ ಗುಂಡು ತಗುಲಿದ ಹಿನ್ನೆಲೆಯಲ್ಲಿ ಅವರನ್ನು ಸಮೀಪದ ಆಸ್ಪತ್ರೆಗೆ ದಾಖಲಿಸಲಾಗಿದೆ.
ಮುಂಜಾನೆ 4:45ಕ್ಕೆ ಈ ಘಟನೆ ನಡೆದಿದೆ ಎಂದು ವರದಿಯಾಗಿದೆ. ಅವರು ತನ್ನ ರಿವಾಲ್ವರ್ ನ್ನು ಕ್ಲೀನ್ ಮಾಡುವಾಗ ಆಕಸ್ಮಿಕವಾಗಿ ಗುಂಡು ಅವರ ಕಾಲಿಗೆ ಬಂದು ತಗುಲಿದೆ ಎಂದು ವರದಿಯಾಗಿದೆ.