ದೊಡ್ಡಬಳ್ಳಾಪುರ: ರಾಜ್ಯದಲ್ಲಿ ಕನ್ನಡಿಗರಿಗೆ ಉದ್ಯೋಗ ಮೀಸಲಾತಿ ಕುರಿತಂತೆ ಸರ್ಕಾರ ಯಾವುದೇ ರೀತಿಯ ಸ್ಪಷ್ಟ ನಿರ್ಧಾರ ಕೈಗೊಂಡಿಲ್ಲ. ಉದ್ಯೋಗ ಮೀಸಲಾತಿಗಾಗಿ ಆಗ್ರಹಿಸಿ ಅ.19 ರಂದು ಬೆಂಗಳೂರಿನಲ್ಲಿ ಬೃಹತ್ ಪ್ರತಿಭಟನೆ ನಡೆಸಲಾಗುತ್ತಿದೆ ಎಂದು ಕನ್ನಡ ಜಾಗೃತಿ ವೇದಿಕೆ ರಾಜ್ಯ ಘಟಕದ ಅಧ್ಯಕ್ಷ ಕೆ ಮಂಜುನಾಥ್ ದೇವಣ್ಣ ಹೇಳಿದರು.
ನಗರದ ಪ್ರವಾಸಿ ಮಂದಿರದಲ್ಲಿ ಭಾನುವಾರ ಕನ್ನಡ ಜಾಗೃತ ವೇದಿಕೆ ವತಿಯಿಂದ ನಡೆದ ಜಿಲ್ಲಾ ಹಾಗೂ ತಾಲ್ಲೂಕು ಪದಾಧಿಕಾರಿಗಳ ಸಭೆಯಲ್ಲಿ ಮಾತನಾಡಿದರು.
ಸರೋಜಿನಿ ಮಹಿಷಿ ವರದಿ ಜಾರಿಗೊಳಿಸುವಲ್ಲಿ ರಾಜ್ಯದಲ್ಲಿ ಆಡಳಿತ ನಡೆಸಿರುವ ಎಲ್ಲಾ ಸರ್ಕಾರಗಳು ವಿಫಲವಾಗಿವೆ. ಈ ಬಗ್ಗೆ ನಾವು ಎಚ್ಚೆತುಕೊಳ್ಳದೇ ಇದ್ದರೆ ನಾಡಿನ ಯುವ ಸಮುದಾಯ ನಮ್ಮಲ್ಲಿ ಕೈಗಾರಿಕೆಗಳು ಇದ್ದು ಸಹ ಉದ್ಯೋಗ ಇಲ್ಲದೆ ಬರಿಗೈಯಲ್ಲಿ ಕೂರುವ ಪರಿಸ್ಥಿತಿ ನಿರ್ಮಾ- ಣವಾಗಲಿದೆ ಎಂದು ಹೇಳಿದರು.
ನಾಡಿನ ಜನತೆ ಈ ವಿಷಯವನ್ನು ಗಂಭೀರವಾಗಿ ಪರಿಗಣಿಸಬೇಕಿದೆ. ಹಾಗೆಯೇ ಯುವಕರಲ್ಲಿ ಪರಭಾಷೆಗಳ ವ್ಯಾಮೋಹ ಹೆಚ್ಚಾಗುತ್ತಿದೆ. ನಾಡು ನುಡಿ ಮತ್ತು ನಮ್ಮ ಸಂಸ್ಕೃತಿಯನ್ನು ಗೌರವಿಸುವ ಮನೋಭಾವನೆಯನ್ನು ಬೆಳೆಸಿಕೊಳ್ಳಬೇಕು ಎಂದರು.
ಕನ್ನಡ ಜಾಗೃತಿ ವೇದಿಕೆ ಜಿಲ್ಲಾ ಅಧ್ಯಕ್ಷ ಎಂ.ನಾಗರಾಜ್, ರಾಜ್ಯದಲ್ಲಿ ನಿರುದ್ಯೋಗದ ಸಮಸ್ಯೆ ಹೆಚ್ಚಾಗುತ್ತಲೇ ಇದೆ. ನಮ್ಮ ರಾಜ್ಯದ ಜನರ ಉದ್ಯೋಗ ಅನ್ಯ ರಾಜ್ಯದವರ ಪಾಲಾಗುತ್ತಿವೆ. ಖಾಸಗಿ ಕಂಪನಿಗಳಲ್ಲಿ ಕೆಳ ಹಂತದ ಉದ್ಯೋಗಗಳಿಗೆ ಮಾತ್ರ ಕನ್ನಡಿಗರ- ನ್ನು ಸೀಮಿತಗೊಳಿಸಲಾಗುತ್ತಿದೆ. ಇದರ ವಿರುದ್ಧ ನಡೆಯುವ ಪ್ರತಿಭಟನೆಗೆ ಯುವ ಸಮುದಾಯ ಹೆಚ್ಚಿನ ಬೆಂಬಲ ನೀಡಬೇಕಿದೆ ಎಂದರು.
ಇದನ್ನೂ ಓದಿ; Doddaballapura; ರಸ್ತೆ ದಾಟಿದ ಹಾವು.. ವಾಹನ ಸವಾರರು ಶಾಕ್..!| ವಿಡಿಯೋ ನೋಡಿ
ಕನ್ನಡ ಜಾಗೃತ ವೇದಿಕೆ ರಾಜ್ಯ ಘಟಕದ ಪ್ರಧಾನ ಕಾರ್ಯದರ್ಶಿ ಕವಿತಾ ಪೇಟೆ ಮಠ, ಸುಮಂಗಲಿ ರಾಮಾಚಾರಿ, ಆನೇಕಲ್ ಯುವ ಘಟಕದ ಅಧ್ಯಕ್ಷ ಮಧುಸುಧನ್, ಸತೀಶ್, ಜಿಲ್ಲಾ ಮುಖಂಡರಾದ ಅಗ್ನಿ ವೆಂಕಟೇಶ, ತಾಲ್ಲೂಕ ಅಧ್ಯಕ್ಷ ಸಿ.ಶಶಿಧರ್, ಉಪಾಧ್ಯಕ್ಷ ಗಿರೀಶ್, ಗೌರವ ಅಧ್ಯಕ್ಷ ಅನಿಲ್ ದೇಶಪಾಂಡೆ, ಕಾರ್ಮಿಕ ಯುವ ಘಟಕದ ತರುಣ್ ಸರ್ಜಾ, ಚೇತನ್ ಚಂದನ್, ಬಾಲಾಜಿ, ಕಾರ್ಯದರ್ಶಿ ಬಿ.ಪ್ರಕಾಶ್, ತಾಲ್ಲೂಕು ಸಂಚಾಲಕ ಮನುಕುಮಾರ್, ಶಿವಕುಮಾರ್ ಇದ್ದರು.