Site icon ಹರಿತಲೇಖನಿ

ಕಾರು ಅಡ್ಡಗಟ್ಟಿ ಕೋಟಿ ಕೋಟಿ ಲೂಟಿ..!

Dandupalya gang associates arrested..!

Dandupalya gang associates arrested..!

ತುಮಕೂರು: ಚಿನ್ನಾಭರಣ ವ್ಯಾಪಾರಿಯೊಬ್ಬರು ಕಾರನ್ನು ಅಡ್ಡಗಟ್ಟಿರುವ ದರೋಡೆಕೋರರು, ಹಲ್ಲೆ ನಡೆಸಿದ್ದಲ್ಲದೇ 1 ಕೋಟಿ ರೂ. ನಗದು ಹಾಗೂ 350 ಕೆಜಿ ಬೆಳ್ಳಿ ಗಟ್ಟಿಗಳನ್ನು ಲೂಟಿ ಮಾಡಿರುವ ಘಟನೆ ನೆಲಹಾಳ್ ಕ್ರಾಸ್ ಬಳಿಯ ರಾಷ್ಟ್ರೀಯ ಹೆದ್ದಾರಿ 48ರಲ್ಲಿ ನಡೆದಿದೆ.

ಅನಿಲ್‌ ಮಹದೇವ್ ಅವರು, ಮಹಾರಾಷ್ಟ್ರದ ಕೊಲ್ಲಾಪುರದಲ್ಲಿ ಬೆಳ್ಳಿ ಗಟ್ಟಿ ಖರೀದಿಸಿ ಕಾರಿನಲ್ಲಿ ಸೇಲಂಗೆ ಕೊಂಡೊಯ್ಯುತ್ತಿದ್ದರು. ಅನಿಲ್ ಅವರ ಮಗ ಬಾಲಾಜಿ, ಸ್ನೇಹಿತರಾದ ಗಣೇಶ್‌, ವಿನೋದ್ ಪ್ರಯಾಣಿಸುತ್ತಿದ್ದ ವೇಳೆ ಮೂರು ಕಾರುಗಳಲ್ಲಿ ಬಂದ ಏಳೆಂಟು ಮಂದಿ ಕಳ್ಳರು ಕಾರು ಅಡ್ಡಗಟ್ಟಿ ಹಲ್ಲೆ ನಡೆಸಿದ್ದಾರೆ.

ಇದನ್ನೂ ಓದಿ: Doddaballapura; ಬಯಲು ಬಸವಣ್ಣ ದೇವಾಲಯದಲ್ಲಿ ಕಳವಿಗೆ ಯತ್ನ..!

ಬಾಲಾಜಿ, ಗಣೇಶ್, ವಿನೋದ್ ಕಳ್ಳರಿಂದ ತಪ್ಪಿಸಿಕೊಂಡು ಪರಾರಿಯಾಗಿದ್ದರೆ, ಅನಿಲ್ ಅವರನ್ನು ಕಾರು ಸಮೇತ ಅಪಹರಿಸಿಕೊಂಡು ಹೋಗಿದ್ದ ಕಳ್ಳರು, ಕೋರ ಪೊಲೀಸ್‌ ಠಾಣೆ ವ್ಯಾಪ್ತಿಯ ಅಜೇನಹಳ್ಳಿ ಕಾರಿನ ಸಮೇತ ಬಿಟ್ಟು ಪರಾರಿಯಾಗಿದ್ದಾರೆ.

ಕೂಡಲೆ ಅನಿಲ್ ಪೊಲೀಸರಿಗೆ ಸಂದೇಶ ತಲುಪಿಸಿ, ದೂರು ದಾಖಲಿಸಿದ್ದಾರೆ.

ಅನಿಲ್ ಅವರ ಬಳಿ ನಗದು ಹಾಗೂ ಬೆಳ್ಳಿಯ ಗಟ್ಟಿಗಳಿರುವ ಬಗ್ಗೆ ದುಷ್ಕರ್ಮಿಗಳಿಗೆ ಮಾಹಿತಿ ಸಿಕ್ಕಿದ್ದು ಹೇಗೆ ಎಂಬ ಕುರಿತು ಪೊಲೀಸರು ತನಿಖೆ ನಡೆಸುತ್ತಿದ್ದಾರೆ.

ಈ ಕುರಿತು ಪ್ರಕರಣ ದಾಖಲಾಗಿದೆ.

Exit mobile version