Site icon ಹರಿತಲೇಖನಿ

ಹಣಕಾಸು ವಿಚಾರವಾಗಿ ಶೆಡ್‌ನಲ್ಲಿ ಗಲಾಟೆ.. ಓರ್ವನ ಸಾವು..!

ನೆಲಮಂಗಲ: ಹಣಕಾಸು ವಿಚಾರವಾಗಿ ಕಾರ್ಮಿಕರ ನಡುವಿನ ಗಲಾಟೆ ಕೊಲೆಯಲ್ಲಿ ಅಂತ್ಯವಾಗಿದೆ ಘಟನೆ ಮಹಿಮಾಪುರ ಗೋದಾಮಿನ ಕಾರ್ಮಿಕರ ಶೆಡ್ ನಲ್ಲಿ ನಡೆದಿದೆ.

ಘಟನೆಯಲ್ಲಿ ತಮಿಳುನಾಡು ಮೂಲದ 40 ವರ್ಷದ ರಾಜೀವ್ ಗಾಂಧಿ ಪೆರುಮಾಳ್ ಕೊಲೆಯಾಗಿದೆ.

ಮಹಿಮಾಪುರ ಬಳಿಯ ಶೆಡ್ ನಲ್ಲಿ ಹಣಕಾಸಿನ ವಿಚಾರದಲ್ಲಿ ಗಲಾಟೆ ಆರಂಭವಾಗಿದೆ. ಪೆರುಮಾಳ್ ಸ್ನೇಹಿತನೆ ತೀವ್ರವಾಗಿ ಹಲ್ಲೆ ನಡೆಸಿದ್ದಾನೆ ಎನ್ನಲಾಗಿದ್ದು, ರಾಜೀವ್ ಗಾಂಧಿ ಪೆರುಮಾಳ್ ಗೆ ತೀವ್ರ ರಕ್ತ ಸ್ರಾವವಾಗಿದ್ದು, ಆಸ್ಪತ್ರೆಯಲ್ಲಿ ಚಿಕಿತ್ಸೆ ಫಲಕಾರಿಯಾಗದೆ ಸಾವನಪ್ಪಿದ್ದಾರೆ.

85 ಸಾವಿರ ರೂಪಾಯಿ ವಿಚಾರವಾಗಿ ಒಂದೇ ರೂಮಿನಲ್ಲಿದ್ದ ಇಬ್ಬರು ಸ್ನೇಹಿತರ ನಡುವೆ ಗಲಾಟೆ ನಡೆದಿದೆ ಎನ್ನಲಾಗಿದೆ.

ಸ್ಥಳಕ್ಕೆ ವಿಧಿ ವಿಜ್ಞಾನ ಪ್ರಯೋಗಾಲಯ ಮತ್ತು ಬೆರಳಚ್ಚು ತಜ್ಞರು ಭೇಟಿ ನೀಡಿದ್ದಾರೆ.

ಬೆಂಗಳೂರು ಗ್ರಾಮಾಂತರ ಎಸ್.ಪಿ. ಸಿ.ಕೆ.ಬಾಬಾ, ಎಎಸ್ಪಿ ನಾಗೇಶ್, ಡಿವೈಎಸ್ಪಿ ರವಿ, ಪಿಐ ನರೇಂದ್ರ ಬಾಬು ಭೇಟಿ ನೀಡಿ ಪರಿಶೀಲನೆ ನಡೆಸಿದ್ದಾರೆ.

ಆರೋಪಿಯನ್ನು ಬಂಧಿಸಿ ತನಿಖೆ ನಡೆಸುತ್ತಿರುವ ನೆಲಮಂಗಲ ಗ್ರಾಮಾಂತರ ಪೊಲೀಸರು ಹೆಚ್ಚಿನ ತನಿಖೆ ಕೈಗೊಂಡಿದ್ದಾರೆ.

Exit mobile version