ಲಖನೌ: ಹಾಥರಸ್‌ನ ಡಿಎಲ್ ಪಬ್ಲಿಕ್ ಶಾಲೆಯ ಶಿಕ್ಷಕರೇ ಶಾಲೆಗೆ ಶ್ರೇಯಸ್ಸು ಸಿಗುತ್ತ ದೆಂಬ ನಂಬಿಕೆಯಲ್ಲಿ 11 ವರ್ಷದ ಬಾಲಕ ನನ್ನು ಅರಣ್ಯದಲ್ಲಿ ನರಬಲಿ ನೀಡಿದ್ದಾರೆ.
‘ಕೃತಾರ್ಥ’ ಎಂಬ ಬಾಲಕ ತಾನು ಮೆಚ್ಚಿಕೊಂಡಿದ್ದ ಶಿಕ್ಷಕರಿಂದಲೇ ಹತನಾಗಿದ್ದಾನೆ. ಪ್ರಕರಣ ಸಂಬಂಧ ಶಾಲೆಯ ಮಾಲೀಕ, ನಿರ್ದೇಶಕ, ಮುಖ್ಯಶಿಕ್ಷಕ, ಇಬ್ಬರು ಶಿಕ್ಷಕರು ಸೇರಿ ಐವರನ್ನು ಪೊಲೀಸರು ಬಂಧಿಸಿದ್ದಾರೆ.
ಈ ನತದೃಷ್ಟ ಬಾಲಕನನ್ನು ಕತ್ತುಹಿಸುಕಿ ಕೊಲ್ಲಲಾ ಗಿದೆ ಎಂದು ಆರೋಪಿಸಲಾಗಿದೆ.