Site icon ಹರಿತಲೇಖನಿ

ಮನೆ ಬಾಡಿಗೆ ಕೊಟ್ಟಿದ್ದೇ ತಪ್ಪಾಯ್ತಾ..?- ಮಾಲಕಿಯನ್ನೇ ಕೊಂದ ಕಿರಾತಕ

Friend commits suicide due to the mistake of lending to a friend..!

Friend commits suicide due to the mistake of lending to a friend..!

ರಾಯಚೂರು; ಖತರ್ನಾಕ್ ಬಾಡಿಗೆದಾರನೊಬ್ಬ ಮನೆಯ ಮಾಲಕಿಯನ್ನೇ ಕೊಲೆ ಮಾಡಿ ಬಳಿಕ ತಾನೇ ಶಾಸ್ತೋಕ್ತವಾಗಿ ಅಂತ್ಯಸಂಸ್ಕಾರ ನೆರವೇರಿಸಿರುವ ಘಟನೆ ಉದಯನಗರದಲ್ಲಿ ನಡೆದಿದೆ.

ಮೃತ ದುರ್ದೈವಿಯನ್ನು 63 ವರ್ಷದ ಶೋಭಾ ಪಾಟೀಲ್ ಎಂದು ಗುರುತಿಸಲಾಗಿದೆ. ಈಕೆಯನ್ನು ಶಿವು ಬಂಡಯ್ಯಸ್ವಾಮಿ ಎಂಬಾತ ಕೊಲೆ ಮಾಡಿದ್ದಾನೆ.

ಘಟನೆ ವಿವರ: ಮೂಲತಃ ರಾಯಚೂರಿನವರಾಗಿರುವ ಶೋಭಾ ಪಾಟೀಲ್ ಬೆಂಗಳೂರಲ್ಲೇ ವಾಸವಿದ್ದರು. ಹಾಗಾಗಿ ಮನೆಯನ್ನ ಪರಿಚಯಸ್ಥನೇ ಆಗಿದ್ದ ಶಿವು ಬಂಡಯ್ಯಸ್ವಾಮಿಗೆ ಎಂಬಾತನಿಗೆ ಬಾಡಿಗೆ ನೀಡಿದ್ದರು. ಆದರೆ ಬಾಡಿಗೆ ವಿಚಾರದಲ್ಲಿ ತಕರಾರು ಆಗಿ ಮನೆಯೊಡತಿಯನ್ನೇ ಶಿವು ಕೊಂದಿದ್ದಾನೆ ಎಂದು ವರದಿಯಾಗಿದೆ.

ಇತ್ತ ಕುಟುಂಬಸ್ಥರು ಶೋಭಾ ಪಾಟೀಲ್ ಅವರಿಗೆ ಹೃದಯ ಸಂಬಂಧಿ ಖಾಯಿಲೆ ಇರುವ ಕಾರಣ ಅನಾರೋಗ್ಯದಿಂದ ಮೃತಪಟ್ಟಿರಬಹುದು ಎಂದುಕೊಂಡಿದ್ದರು. ಆದರೆ ಇದೀಗ ಬಾಡಿಗೆದಾರನೇ ಕೊಲೆ ಮಾಡಿದ್ದಾನೆ ಎಂಬ ಸತ್ಯ ತಿಳಿದೊಡನೆ ಅಚ್ಚರಿಗೊಂಡಿದ್ದಲ್ಲದೆ, ಕಣ್ಣೀರು ಹಾಕಿದ್ದಾರೆ.

ಶೋಭಾ ಪಾಟೀಲ್ ಅವರ ಸಾವಿನ ಸತ್ಯಾಸತ್ಯತೆಯನ್ನು ಬಯಲಿಗೆಳೆದಿರುವ ಪೊಲೀಸರು, ಸದ್ಯ ಶಿವುವನ್ನ ವಶಕ್ಕೆ ಪಡೆದಿದ್ದಾರೆ.

Exit mobile version