ದೊಡ್ಡಬಳ್ಳಾಪುರ ಬಳಿ ಕ್ವಿನ್ ಸಿಟಿ.. ಅಂದ್ರೇನು? ಅಲ್ಲಿ ಏನಿರುತ್ತೆ..?| Doddaballapura

ಬೆಂಗಳೂರು: ಜ್ಞಾನ, ಆರೋಗ್ಯ ಮತ್ತು ಸಂಶೋಧನೆಯನ್ನು ಸಮಗ್ರವಾಗಿ ಸಂಯೋಜಿಸಲಿರುವ, ರಾಜ್ಯದ ಅರ್ಥ ವ್ಯವಸ್ಥೆ ಮರುವ್ಯಾಖ್ಯಾನಿಸಲಿರುವ ಹಾಗೂ ಕರ್ನಾಟಕದ ವಿಶಿಷ್ಟ ಹೆಗ್ಗುರುತೂ ಆಗಲಿರುವ ಹೊಸ ʼಕ್ವಿನ್‌ ಸಿಟಿʼ ಅಂದ್ರೆ ಏನು? ಅಲ್ಲಿ ಏನಿರುತ್ತೆ?

ಬನ್ನಿ ಈ ಬಗ್ಗೆ ಬೃಹತ್ ಹಾಗೂ ಮಧ್ಯಮ ಕೈಗಾರಿಕೆಗಳು ಮತ್ತು ಮೂಲಸೌಲಭ್ಯ ಅಭಿವೃದ್ಧಿ ಸಚಿವ ಎಂ.ಬಿ.ಪಾಟೀಲ ಅವರು ಪೂರ್ಣ ವಿವರಣೆ ನೀಡಿದ್ದಾರೆ.

ಭವಿಷ್ಯದ ಅಗತ್ಯಗಳನ್ನು ಪೂರೈಸುವ ರೀತಿಯಲ್ಲಿ ವಿಶೇಷ ವಿನ್ಯಾಸ ಮಾಡಿರುವ ಈ ಕ್ವಿನ್‌ ಸಿಟಿ-ಯು (Knowledge, Wellbeing, and Innovation City- KWIN City ) ಸುಸ್ಥಿರತೆ, ಮನೆ, ಕೆಲಸದ ಸ್ಥಳ ಮತ್ತು ಅತ್ಯಾಧುನಿಕ ನಗರ ಸೇರಿದಂತೆ ಬದುಕಿನ ವಿವಿಧ ಸಂಗತಿಗಳಲ್ಲಿ ತಂತ್ರಜ್ಞಾನದ ನೆರವಿನಿಂದ ದಕ್ಷತೆ ಹಾಗೂ ಅನುಕೂಲತೆಗಳನ್ನು ಗರಿಷ್ಠ ಪ್ರಮಾಣದಲ್ಲಿ ಸುಧಾರಿಸುವ ʼಸ್ಮಾರ್ಟ್‌ ಲಿವಿಂಗ್‌ʼ ಪರಿಕಲ್ಪನೆ ಕಾರ್ಯರೂಪಕ್ಕೆ ತರಲು ದೊಡ್ಡಬಳ್ಳಾಪುರ ಮತ್ತು ದಾಬಸ್‌ಪೇಟೆ ಮಧ್ಯೆ ಅಸ್ತಿತ್ವಕ್ಕೆ ಬರಲಿದೆ.

ಕ್ವಿನ್‌ ಸಿಟಿ ಅಂದರೆ ಜ್ಞಾನ, ಆರೋಗ್ಯ, ನಾವೀನ್ಯತೆ ಮತ್ತು ಸಂಶೋಧನೆ. ಇವುಗಳ ನಡುವಣ ಸಮನ್ವಯತೆಯು ಆರ್ಥಿಕ ಬೆಳವಣಿಗೆ ಉತ್ತೇಜಿಸುವುದರ ಜೊತೆಗೆ ವಿವಿಧ ಕ್ಷೇತ್ರಗಳಲ್ಲಿ ಗಮನಾರ್ಹ ಪ್ರಗತಿಯನ್ನು ಮುನ್ನಡೆಸಲಿದೆ. ಯೋಜಿತ ನಗರವಾಗಿ ಕ್ವಿನ್‌ ಸಿಟಿಯು ಅತ್ಯಾಧುನಿಕ ತಂತ್ರಜ್ಞಾನ ಸಂಯೋಜಿಸುವ ಮೂಲಕ ಪರಿಸರ ಸ್ನೇಹಿ ಮೂಲಸೌಲಭ್ಯಗಳ ನೆರವಿನಿಂದ ಹೊಸ-ಯುಗದ, ಸುಸ್ಥಿರ ಜೀವನಶೈಲಿ ಒದಗಿಸಲಿದೆ. ಸ್ವಾವಲಂಬನೆಯ ನೀರು ಮತ್ತು ವಿದ್ಯುತ್ ಸೌಲಭ್ಯಗಳೊಂದಿಗೆ ಭವಿಷ್ಯದ ಸ್ಮಾರ್ಟ್ ನಗರಗಳಿಗೆ ಆದರ್ಶ ಉದಾಹರಣೆಯಾಗಿರಲಿದೆ ಎಂದು ಪಾಟೀಲ ವಿವರಿಸಿದರು.

ʼಕ್ವಿನ್‌ ಸಿಟಿʼಯ ದೂರದೃಷ್ಟಿ ಸಾಕಾರಗೊಳಿಸಲಿರುವ ಪ್ರಮುಖ ಜಿಲ್ಲೆಗಳು:

ಜ್ಞಾನ ಜಿಲ್ಲೆ:  ಪ್ರತ್ಯೇಕ ಜ್ಞಾನ ಕೇಂದ್ರದೊಂದಿಗೆ, ಕ್ವಿನ್‌ ಸಿಟಿ-ಯು ಆಧುನಿಕ ಪಠ್ಯಕ್ರಮ ಮತ್ತು ಉನ್ನತ ರಾಷ್ಟ್ರೀಯ ಮತ್ತು ಅಂತರರಾಷ್ಟ್ರೀಯ ಸಂಸ್ಥೆಗಳನ್ನು ಒಳಗೊಂಡ ಪ್ರಧಾನ ಶಿಕ್ಷಣ ಕೇಂದ್ರ  ಸ್ಥಾಪಿಸಲು ಬಯಸುತ್ತದೆ. ವಿಶ್ವವಿದ್ಯಾಲಯ ಅನುದಾನ ಆಯೋಗದ (ಯುಜಿಸಿ) ನಿಯಮಾವಳಿಗಳನ್ನು  ಆಧರಿಸಿ   ಕ್ಯಾಂಪಸ್‌ಗಳನ್ನು ನಿರ್ವಹಿಸಲು 500 ಉನ್ನತ ವಿದೇಶಿ ಶಿಕ್ಷಣ ಸಂಸ್ಥೆಗಳನ್ನು ಆಕರ್ಷಿಸುವ ಗುರಿಯನ್ನು ನಗರವು  ಹೊಂದಿದೆ. ಇದು ಕರ್ನಾಟಕವನ್ನು ಜಾಗತಿಕ ಶಿಕ್ಷಣದ ಕ್ಷೇತ್ರದ ಮುಂಚೂಣಿಗೆ ಕೊಂಡೊಯ್ಯುವ ಶೈಕ್ಷಣಿಕ ವಲಯ ಹಾಗೂ ಉದ್ಯಮದ ಪಾಲುದಾರಿಕೆಗಳನ್ನು ಉತ್ತೇಜಿಸಲಿದೆ.

ಆರೋಗ್ಯ ಜಿಲ್ಲೆ: ಜೀವ ವಿಜ್ಞಾನ (ಲೈಫ್ ಸೈನ್ಸಸ್) ಪಾರ್ಕ್  ಒಳಗೊಂಡಿರುವ  ಕ್ವಿನ್‌ ಸಿಟಿಯು ಏಷ್ಯಾದ ಪ್ರಮುಖ ಶೈಕ್ಷಣಿಕ ವೈದ್ಯಕೀಯ ಕೇಂದ್ರವಾಗಿ ಬೆಳೆಯಲಿದೆ. ರಾಷ್ಟ್ರೀಯ ಮತ್ತು ಅಂತರರಾಷ್ಟ್ರೀಯ ಮಟ್ಟದ ಆಸ್ಪತ್ರೆಗಳನ್ನು ಆಕರ್ಷಿಸುವ ಮೂಲಕ ಆರೋಗ್ಯ ರಕ್ಷಣೆಯ ಭವಿಷ್ಯವನ್ನು ರೂಪಿಸಲಿದೆ. ಈ ಉಪಕ್ರಮವು ವೈದ್ಯಕೀಯ ಕ್ಷೇತ್ರದಲ್ಲಿ ಕರ್ನಾಟಕದ ಸ್ಥಾನಮಾನವನ್ನು ದೇಶೀಯವಾಗಿ ಮತ್ತು ಅಂತರರಾಷ್ಟ್ರೀಯ ಮಟ್ಟದಲ್ಲಿ ಉನ್ನತ ಮಟ್ಟಕ್ಕೆ ಏರಿಸಲಿದೆ. ಇದು ಆರೋಗ್ಯದ ಶ್ರೇಷ್ಠತೆಗೆ ದಾರಿದೀಪವಾಗಿರಲಿದೆ.

ನಾವೀನ್ಯತಾ ಜಿಲ್ಲೆ: ಕ್ವಿನ್‌ ಸಿಟಿಯು ಜೀವ ವಿಜ್ಞಾನ, ಭವಿಷ್ಯದ ಸಂಚಾರ, ಸೆಮಿಕಂಡಕ್ಟರ್‌, ಸುಧಾರಿತ ಪರಿಕರ, ಆಧುನಿಕ ತಯಾರಿಕೆ, ವೈಮಾಂತರಿಕ್ಷ ಮತ್ತು ರಕ್ಷಣೆ ಹಾಗೂ ಬಾಹ್ಯಾಕಾಶ ತಂತ್ರಜ್ಞಾನದಂತಹ ಪ್ರವರ್ಧಮಾನಕ್ಕೆ ಬರುತ್ತಿರುವ ಉದ್ಯಮ ವಲಯಗಳ ಅಗತ್ಯಗಳನ್ನು ಪೂರೈಸಲಿದೆ. ಜಾಗತಿಕ ಬದಲಾವಣೆಗಳು ಮತ್ತು ಮಾರುಕಟ್ಟೆ ಬೇಡಿಕೆಗಳಿಗೆ ಹೊಂದಿಕೊಳ್ಳುವ ಮೂಲಕ, ಕ್ವಿನ್‌ ಸಿಟಿಯು ವಿಶಾಲವಾದ ಉದ್ಯಮ ಕ್ಷೇತ್ರದಲ್ಲಿ ಕರ್ನಾಟಕದ ಪಾತ್ರವನ್ನು ಹೆಚ್ಚಿಸುವ ಗುರಿ  ಹೊಂದಿದೆ, ನಿರಂತರವಾದ ನಾವೀನ್ಯತೆಯ ವಾತಾವರಣ  ಉತ್ತೇಜಿಸಲಿದೆ.

ಸಂಶೋಧನಾ ಜಿಲ್ಲೆ: ಜೈವಿಕ ಔಷಧ ಮತ್ತು ವೈಜ್ಞಾನಿಕ ಸಂಶೋಧನೆ ಹೆಚ್ಚಿಸಲು ಮೀಸಲಾಗಿರುವ  ಕ್ವಿನ್‌ ಸಿಟಿಯು ಕ್ಲಿನಿಕಲ್ ಪ್ರಯೋಗ ಕೇಂದ್ರಗಳು ಮತ್ತು ಸಂಶೋಧನಾ ಪ್ರಯೋಗಾಲಯಗಳನ್ನು ಸ್ಥಾಪಿಸಲು ಅತ್ಯಾಧುನಿಕ ತಂತ್ರಜ್ಞಾನವನ್ನು ಸಂಯೋಜಿಸಲಿದೆ. ಇದು ಜಾಗತಿಕ ಜ್ಞಾನ ಆಧಾರಿತ ಆರ್ಥಿಕತೆಗೆ ಗಣನೀಯವಾಗಿ ಕೊಡುಗೆ ನೀಡುವ, ಪ್ರಕಾಶನ, ಸೆಮಿನಾರ್‌ ಮತ್ತು ಸಾರ್ವಜನಿಕ ಉಪನ್ಯಾಸಗಳ ಮೂಲಕ   ಸಂಶೋಧನೆಗಳ ಪ್ರಸಾರವನ್ನು ಉತ್ತೇಜಿಸಲಿದೆ.

ಕ್ವಿನ್‌ ಸಿಟಿ-ಯು ಅಭಿವೃದ್ಧಿಗಿಂತ ಹೆಚ್ಚಿನದಾಗಿದೆ. ಇದು ಭವಿಷ್ಯದ ಕಡೆಗಿನ ಒಂದು ದಿಟ್ಟ ಹೆಜ್ಜೆಯಾಗಿದೆ. ಶಿಕ್ಷಣ, ಆರೋಗ್ಯ, ನಾವೀನ್ಯತೆ ಮತ್ತು ಸಂಶೋಧನೆಗಾಗಿ ವಿಶ್ವ ದರ್ಜೆಯ ಕೇಂದ್ರವನ್ನು ನಿರ್ಮಿಸಲಿದೆ.

ಮಾಹಿತಿಗೆ  kwincity.com ಅಂತರ್ಜಾಲ ತಾಣಕ್ಕೆ ಭೇಟಿ ನೀಡಿ.

ರಾಜಕೀಯ

ಹಕ್ಕೊತ್ತಾಯಕ್ಕೆ ಸಿಗಲಿಲ್ಲ ಕಿಮ್ಮತ್ತು; ಬಳ್ಳಾರಿ ಪಾಲಾಯ್ತು 88ನೇ ಸಾಹಿತ್ಯ ಸಮ್ಮೇಳನ..!| Kannada sahitya sammelana

ಹಕ್ಕೊತ್ತಾಯಕ್ಕೆ ಸಿಗಲಿಲ್ಲ ಕಿಮ್ಮತ್ತು; ಬಳ್ಳಾರಿ ಪಾಲಾಯ್ತು 88ನೇ ಸಾಹಿತ್ಯ ಸಮ್ಮೇಳನ..!| Kannada sahitya

ವೇದಿಕೆಯ ಬಳಿ ತೆರಳಿ ಬೆಂಗಳೂರು ಗ್ರಾಮಾಂತರ ಜಿಲ್ಲೆಗೆ ಅವಕಾಶ ನೀಡಬೇಕೆಂದು ಗಟ್ಟಿ ದನಿಯಲ್ಲಿ ಹಕ್ಕೊತ್ತಾಯ ಮಾಡಬೇಕೆಂಬ ಕೂಗು Kannada sahitya sammelana

[ccc_my_favorite_select_button post_id="99244"]
ಅಂಬಾನಿ ಆದ್ರೆ ಅವರ ಮನೆಗೆ.. ರಸ್ತೆ ಬಂದ್ ಮಾಡಿದಕ್ಕೆ ಬೆಂಗಳೂರಿನ ಮಹಿಳೆ ಕ್ಲಾಸ್ – VIDEO ನೋಡಿ

ಅಂಬಾನಿ ಆದ್ರೆ ಅವರ ಮನೆಗೆ.. ರಸ್ತೆ ಬಂದ್ ಮಾಡಿದಕ್ಕೆ ಬೆಂಗಳೂರಿನ ಮಹಿಳೆ ಕ್ಲಾಸ್

ಇತ್ತೀಚೆಗೆ ನೀತಾ ಅಂಬಾನಿ ಅವರು ತಮ್ಮ ಮರ್ಸಿಡೀಸ್ ಬೆಂಜ್ ಬುಲೆಟ್ ಪ್ರೊಫ್ ಕಾರ್‌ನಲ್ಲಿ ಹೈ ಸೆಕ್ಯೂರಿಯಲ್ಲಿ ಆಗಮಿಸಿದ್ದರು. Video

[ccc_my_favorite_select_button post_id="99152"]
ಗುಂಡಿನ ದಾಳಿ: ಭಾರತೀಯ ಮೂಲದ ವಿದ್ಯಾರ್ಥಿ ಶಿಕಾಗೊದಲ್ಲಿ ಹತ್ಯೆ.‌!| murder

ಗುಂಡಿನ ದಾಳಿ: ಭಾರತೀಯ ಮೂಲದ ವಿದ್ಯಾರ್ಥಿ ಶಿಕಾಗೊದಲ್ಲಿ ಹತ್ಯೆ.‌!| murder

2023-24ರಲ್ಲಿ ಚೀನಾಗಿಂತಲೂ ಭಾರತೀಯ ವಿದ್ಯಾರ್ಥಿಗಳೇ ಅಮೆರಿಕಕ್ಕೆ ಉನ್ನತ ವ್ಯಾಸಂಗಕ್ಕಾಗಿ ಹೆಚ್ಚಿನ (3.30 ಲಕ್ಷ) ಸಂಖ್ಯೆಯಲ್ಲಿ ತೆರಳಿದ್ದಾರೆ. Murder

[ccc_my_favorite_select_button post_id="97531"]

ಬಾಂಗ್ಲಾದಲ್ಲಿ ಹಿಂದೂ ಸಾಧು ಬಂಧನ; ನಾಳೆ ರಾಜ್ಯದಾದ್ಯಂತ

[ccc_my_favorite_select_button post_id="97359"]

miss universe; ವಿಶ್ವ ಸುಂದರಿ ಕಿರೀಟ ಮುಡಿಗೇರಿಸಿಕೊಂಡ

[ccc_my_favorite_select_button post_id="96599"]

mike tyson vs jake paul date,

[ccc_my_favorite_select_button post_id="96464"]

elon musk; ಟ್ರಂಪ್ ಪರ ವಕಾಲತ್ತು: ಎಕ್ಸ್

[ccc_my_favorite_select_button post_id="96366"]

ಕ್ರೀಡೆ

Video: ವಿಶ್ವ ಚದುರಂಗ ವೀರನಾದ ಭಾರತದ ಡಿ.ಗುಕೇಶ್.. ಚಾಂಪಿಯನ್‌ ಆಗ್ತಿದ್ದಂತೆ ಕಣ್ಣೀರು| World Chess Championship

Video: ವಿಶ್ವ ಚದುರಂಗ ವೀರನಾದ ಭಾರತದ ಡಿ.ಗುಕೇಶ್.. ಚಾಂಪಿಯನ್‌ ಆಗ್ತಿದ್ದಂತೆ ಕಣ್ಣೀರು| World

18 ವರ್ಷ ವಯಸ್ಸಿನ ಗ್ರಾ ಟ್ರ್ಯಂಡ್ ಮಾಸ್ಟರ್ ಗುಕೇಶ್ World Chess Championship

[ccc_my_favorite_select_button post_id="98503"]
ರಾಬಿನ್ ಉತ್ತಪ್ಪ ವಿರುದ್ಧ ಬಂಧನ ವಾರೆಂಟ್‌ ಜಾರಿ..!: RobinUthappa

ರಾಬಿನ್ ಉತ್ತಪ್ಪ ವಿರುದ್ಧ ಬಂಧನ ವಾರೆಂಟ್‌ ಜಾರಿ..!: RobinUthappa

ರಾಬಿನ್ ಉತ್ತಪ್ಪ ಪುಲಕೇಶಿ ನಗರ ಠಾಣೆ ವ್ಯಾಪ್ತಿಯ ನಿವಾಸಿ ಆಗಿರುವುದರಿಂದ ಅವರನ್ನು ಬಂಧಿಸುವಂತೆ ಇಪಿಎಫ್ ರಿಜಿನಲ್ ಕಮಿಷನರ್ ಷಟಾಕ್ಷರಿ ಗೋಪಾಲರೆಡ್ಡಿ ಎಂಬುವರು ಪೊಲೀಸರಿಗೆ ಪತ್ರ ಬರೆದಿದ್ದಾರೆ. RobinUthappa

[ccc_my_favorite_select_button post_id="99224"]
ನೆಲಮಂಗಲ Accident News update: ಮಹಾರಾಷ್ಟ್ರದ ಸ್ವಗ್ರಾಮದಲ್ಲಿ ಸಾಮೂಹಿಕ ಅಂತ್ಯಕ್ರಿಯೆ..!

ನೆಲಮಂಗಲ Accident News update: ಮಹಾರಾಷ್ಟ್ರದ ಸ್ವಗ್ರಾಮದಲ್ಲಿ ಸಾಮೂಹಿಕ ಅಂತ್ಯಕ್ರಿಯೆ..!

ಮೃತ ದೇಹಗಳನ್ನು ಮಹಾರಾಷ್ಟ್ರದ ಸಾಂಗ್ಲಿ ಜಿಲ್ಲೆಯ ಜತ್ ತಾಲೂಕಿನ ಮೊರಬಗಿ ಗ್ರಾಮಕ್ಕೆ ಮೂರು ಅಂಬುಲೆನ್ಸ್‌ ಮೂಲಕ ತಲುಪಿಸಲಾಯಿತು‌. Accident

[ccc_my_favorite_select_button post_id="99247"]

ಆರೋಗ್ಯ

ಸಿನಿಮಾ

ಅಲ್ಲು ಅರ್ಜುನ್ ಭೇಟಿಯಾದ ಉಪೇಂದ್ರ, ವೇಣು..!| Allu Arjun

ಅಲ್ಲು ಅರ್ಜುನ್ ಭೇಟಿಯಾದ ಉಪೇಂದ್ರ, ವೇಣು..!| Allu Arjun

ಬಂಧನಕ್ಕೊಳಗಾಗಿದ್ದ ಅಲ್ಲು ಅರ್ಜುನ್ ಅವರು ಇಂದು ಬೆಳಿಗ್ಗೆಯಷ್ಟೇ ಜೈಲಿನಿಂದ ಜಾಮೀನಿನ ಮೇಲೆ ಬಿಡುಗಡೆಯಾಗಿದ್ದಾರೆ. Allu arjun

[ccc_my_favorite_select_button post_id="98682"]