ಮೈಸೂರು, (ಸೆ.21): ವಿಶ್ವವಿಖ್ಯಾತ ದಸರಾ ಮಹೋತ್ಸವದ ಅಂಗವಾಗಿ ಕರೆತರಲಾಗಿರುವ ಗಜಪಡೆಯಲ್ಲಿನ ಕಂಜನ್ ಹಾಗೂ ಧನಂಜಯ ಆನೆಗಳ ಮಧ್ಯೆ ಊಟದ ವಿಚಾರದಲ್ಲಿ ಗಲಾಟೆ ನಡೆದಿದೆ ಎಂದು ವರದಿಯಾಗಿದೆ.
ಈ ಗಲಾಟೆಯ ವೇಳೆ ಧನಂಜಯ ಆನೆ ಕಂಜನ್ ಆನೆ ಮೇಲೆ ದಾಳಿ ಮಾಡಿದೆ. ಇದರಿಂದ ಬೆದರಿದ ಕಂಜನ್ ಅರಮನೆಯ ಪಕ್ಕದ ಕೋಡಿ ಸೋಮೇಶ್ವರ ದೇಗುಲದ ದ್ವಾರದಿಂದ ಓಡಿ ಹೋಗಿದೆ.
ದನಂಜಯ ಆನೆ ಅಟ್ಟಿಸಿಕೊಂಡು ಬರುವುದನ್ನು ನೋಡಿ ಕಂಜನ್ ದೊಡ್ಡಕೆರೆ ಮೈದಾನ ಬಳಿ ನೆರೆದಿದ್ದ ಜನರ ಬಳಿ ಹೋಗಿದೆ.
ಈ ವೇಳೆ ಮಾವುತನ ಸಮಯಪ್ರಜ್ಞೆಯಿಂದ ಕೋಪಗೊಂಡಿದ್ದ ಧನಂಜಯನನ್ನು ನಿಯಂತ್ರಣಕ್ಕೆ ತಂದಿದ್ದಾರೆ.
ಧನಂಜಯ ಸುಮ್ಮನಾದದನ್ನು ಕಂಡು ಕಂಜನ್ ಆನೆ ಸಮಾಧಾನದಿಂದ ನಿಂತುಕೊಂಡಿದೆ. ಕಂಜನ್ ಬಳಿ ತೆರಳಿದ ಮಾವುತ ಆನೆಯನ್ನು ಅರಮನೆ ಒಳಗೆ ಕರೆ ತಂದಿದ್ದಾನೆ.
ಈ ಸಂದರ್ಭದಲ್ಲಿ ಒಂದು ಕ್ಷಣ ಅಧಿಕಾರಿಗಳು ಹಾಗೂ ಜನರು ಭಯ ಭೀತರಾಗಿದ್ದರು. ಮಾವುತರ ಸಮಯಪ್ರಜ್ಞೆಯಿಂದ ಭಾರಿ ಅನಾಹುತ ತಪ್ಪಿದೆ.
ಈ ಕುರಿತಾದ ವಿಡಿಯೋ ಸಾಮಾಜಿಕ ಜಾಲತಾಣದಲ್ಲಿ ವೈರಲ್ ಆಗಿದೆ.