ಹರಿತಲೇಖನಿ ದಿನಕ್ಕೊಂದು ಕಥೆ: ಆನೆಗೆ ರಕ್ತ ದಾನ

ಕಾಡಿನಲ್ಲಿ ಗಜರಾಜ, ಹೊಟ್ಟೆಯ ಕೆಳಗೆ ಚೂಪಾದ ಕಲ್ಲು ತರಚಿ ಗಾಯವಾಗಿ ಒಂದು ದೊಡ್ಡ ಆಲದಮರದ ಕೆಳಗೆ ಮಲಗಿತ್ತು. ಗಾಯ ಆದ ಜಾಗದಲ್ಲಿ ರಕ್ತ ಸ್ರಾವ ಆಗುತ್ತಿತ್ತು.

ಅದಕ್ಕೆ ಉಪಚಾರ ಮಾಡಲು ಪಶುವೈದ್ಯರನ್ನು ಕರೆಸಲಾಯಿತು. ಪಶುವೈದ್ಯರು ‘ಆನೆಗೆ ಬಹಳ ರಕ್ತ ಹೋಗಿದೆ. ತಕ್ಷಣ ಪ್ರಾಣಿಗಳು ರಕ್ತ ನೀಡಲು ಮುಂದೆ ಬರಬೇಕು’ ಎಂದರು. ಗಜರಾಜ ಗಾಯಗೊಂಡ ಸುದ್ದಿ ಕೇಳಿ ಎಲ್ಲಾ ಪ್ರಾಣಿ, ಪಕ್ಷಿ, ಕೀಟಗಳು ಸೇರಿದ್ದವು. ಎಲ್ಲರೂ ತಮ್ಮ ವರ್ಗದಲ್ಲಿ ರಕ್ತ ದಾನ ಮಾಡಲು ಅಭಿಪ್ರಾಯ ಮಂಡಿಸಿದವು.

ಕೀಟಸಂಕುಲದ ಪರವಾಗಿ ಚಿಟ್ಟೆ ತಮಗೆ ಮೊದಲು ರಕ್ತದಾನ ಮಾಡಲು ಅವಕಾಶ ನೀಡಲು ಕೋರಿತು. ಎಲ್ಲಾ ಪ್ರಾಣಿಗಳು ನಗಲು ಪ್ರಾರಂಭಿಸಿದವು. ಬೃಹತ್ ಆಕಾರದ ದೇಹವನ್ನು ಹೊಂದಿರುವ ಗಜರಾಜನಿಗೆ ನಿನ್ನ ರಕ್ತ ಎಲ್ಲಿ ಸಾಲುತ್ತದೆ ಎಂದು ಅಪಹಾಸ್ಯ ಮಾಡಿದವು.

ಪಕ್ಷಿ ಸಂಕುಲದ ಪರವಾಗಿ ಗಿಳಿಯು ರೆಕ್ಕೆಯನ್ನು ರಪ ರಪ ಬಡಿಯುತ್ತಾ ‘ನಾವು ಕೂಡ ಈ ಕಾಡಿನಲ್ಲಿ ಗಜರಾಜನ ಒಡನಾಡಿಗಳು. ಹಾಗಾಗಿ ನಾವೂ ರಕ್ತದಾನ ಮಾಡುತ್ತೇವೆ ಎಂದಿತು. ಮತ್ತೆ ಎಲ್ಲ ಕೆಲವು ಪ್ರಾಣಿಗಳು ನಗಲು ಪ್ರಾರಂಭಿಸಿದವು.

ಗರಿಗಳುಳ್ಳ, ತಕ-ತಕ ಕುಣಿಯುವ, ನಾಟ್ಯ ಪ್ರವೀಣೆ ನವಿಲು ಮತ್ತು ಪ್ರಾಣಿವರ್ಗದಿಂದ ಚಾತುರ್ಯವುಳ್ಳ ನರಿಯು ತನ್ನ ಸೊಂಟವನ್ನು ಸರಿ ಮಾಡಿಕೊಳ್ಳುತ್ತಾ ಎದ್ದು ನಿಂತು, ‘ನಾನು ಎಲ್ಲ ಪ್ರಾಣಿ ವರ್ಗಕ್ಕಿಂತ ಗಾತ್ರದಲ್ಲಿ ಚಿಕ್ಕವರಾದರೂ ಬುದ್ದಿವಂತಿಕೆಯಿಂದ ಶುತ್ರುಗಳ ಎದೆಯಲ್ಲಿ ನಡುಕ ಹುಟ್ಟಿಸಬಲ್ಲೆ. ಹಾಗಾಗಿ ನಾನು ರಕ್ತ ಕೊಡುತ್ತೇನೆ’ ಎಂದು ಜಂಬದ ಮಾತು ಹೇಳಿ ತಕ್ಷಣವೇ ‘ನನ್ನನ್ನು ಯಾರೋ ಕರೆಯುತ್ತಿದ್ದಾರೆ’ ಎಂದು ಹೇಳುತ್ತಾ ಆ ಸ್ಥಳದಿಂದ ಜಾಗ ಖಾಲಿ ಮಾಡಿ ಹೊರಟು ಹೋಯಿತು.

ಹಾಗೆಯೇ ಜೇಡ, ಹದ್ದು, ಕಾಗೆ, ಬಲಿಷ್ಠ ಸಿಂಹ, ಹುಲಿ, ಕಾಡು ಕೋಣ, ಕರಡಿ… ಹೀಗೆ ಇನ್ನೂ ಅನೇಕ ಪ್ರಾಣಿಗಳು ಮುಂದೆ ಬರಲಿಲ್ಲ. ಅದೇ ಸಮಯದಲ್ಲಿ ಅತಿಚಿಕ್ಕ ಇರುವೆಗಳು ದಾರಿಯಲ್ಲಿ ಬರಬರನೇ ಓಡುತ್ತಿದ್ದವು. ಅದನ್ನು ಎಲ್ಲಾ ಪ್ರಾಣಿಗಳು ನೋಡಿದವು.

‘ಎಲ್ಲಿಗೆ ಹೊರಟಿರುವೆ ಇರುವೆ?’ ಎಂದು ಮಾತನಾಡಿಸಿದವು. ಆಗ ಒಂದು ಇರುವೆ ಹೇಳಿತು, ‘ನಮ್ಮ ಗಜರಾಜನಿಗೆ ಚೂಪಾದ ಕಲ್ಲು ತರಚಿ, ಗಾಯವಾಗಿ ರಕ್ತ ಹೋಗುತ್ತಿದೆ. ವೈದ್ಯರು ತಕ್ಷಣ ರಕ್ತ ಕೊಡಿ ಎಂದು ಹೇಳಿದ್ದಾರೆ. ಅದಕ್ಕೆ ನಾವು ರಕ್ತ ಕೊಡಲು ಹೊರಟಿದ್ದೇವೆ’ ಎಂದು ಹೇಳಿ ಅಲ್ಲಿಂದು ಹೊರಟು ವೈದ್ಯರ ಬಳಿ ಹೋಗಿ ‘ನಾನು ಗಜರಾಜನಿಗೆ ರಕ್ತ ಕೊಡುತ್ತನೆ. ನನ್ನ ರಕ್ತ ತಗೆದುಕೊಳ್ಳಿ’ ಎಂದು ಹೇಳಿತು. ಆದರೆ ವೈದ್ಯರು ಇರುವೆಯ ಧೈರ್ಯಕ್ಕೆ ಅಭಿನಂದನೆ ಸಲ್ಲಿಸಿದರು.

ಅಪಹಾಸ್ಯ ಮಾಡದೆ ‘ಗಜರಾಜನ ಗಾಯಕ್ಕೆ ಹೊಲಿಗೆ ಹಾಕಿ ರಕ್ತ ಹೋಗುವುದು ನಿಂತಿದೆ. ಅದಕ್ಕೆ ನಿನ್ನ ರಕ್ತದ ಅಗತ್ಯ ಇಲ್ಲ’ ಎಂದು ಹೇಳಿದರು. ಆಗ ಕೆಲವು ಪ್ರಾಣಿಗಳು ನಾವು ಮಾತನಾಡುವುದು ಬಿಟ್ಟು ಧೈರ್ಯದಿಂದ ರಕ್ತ ಕೊಡಲು ವೈದ್ಯರ ಹತ್ತಿರ ಹೋಗಲೇ ಇಲ್ಲ ಎನ್ನುವ ತಪ್ಪಿನ ಅರಿವು ಮಾಡಿಕೊಂಡವು.

ಇರುವೆಯ ಸಾಹಸ ಮತ್ತು ಧೈರ್ಯ ಮೆಚ್ಚಿ ಎಲ್ಲಾ ಪ್ರಾಣಿಗಳು ಕೊಂಡಾಡಿದವು.

ಕೃಪೆ: ಬಸವರಾಜ.ರಾ.ಅಗಸರ ( ಸಾಮಾಜಿಕ ಜಾಲತಾಣ)

ರಾಜಕೀಯ

ನಿಖಿಲ್ ಕುಮಾರಸ್ವಾಮಿ ನೇತೃತ್ವದಲ್ಲಿ ಜೆಡಿಎಸ್‌ನಿಂದ ಸಾಕಪ್ಪ ಸಾಕು ಕಾಂಗ್ರೆಸ್ ಸರ್ಕಾರ ಅಭಿಯಾನ

ನಿಖಿಲ್ ಕುಮಾರಸ್ವಾಮಿ ನೇತೃತ್ವದಲ್ಲಿ ಜೆಡಿಎಸ್‌ನಿಂದ ಸಾಕಪ್ಪ ಸಾಕು ಕಾಂಗ್ರೆಸ್ ಸರ್ಕಾರ ಅಭಿಯಾನ

ಬೆಂಗಳೂರು: ರಾಜ್ಯ ಕಾಂಗ್ರೆಸ್ ಸರಕಾರದ ದರ ಏರಿಕೆ, ಭ್ರಷ್ಟಾಚಾರದ ವಿರುದ್ಧ ಸಿಡಿದೆದ್ದಿರುವ ಜೆಡಿಎಸ್ (JDS) ಪಕ್ಷವು, ಸರಕಾರದ ವಿರುದ್ಧ ವಿನೂತನ ಅಭಿಯಾನ ಆರಂಭಿಸಿದೆ. ಯುವ ಜನತಾದಳ ರಾಜ್ಯಾಧ್ಯಕ್ಷರಾದ ನಿಖಿಲ್ ಕುಮಾರಸ್ವಾಮಿ ಅವರ ನೇತೃತ್ವದಲ್ಲಿ ‘ಸಾಕಪ್ಪಾ

[ccc_my_favorite_select_button post_id="105115"]
2ನೇ ವಿಮಾನ ನಿಲ್ದಾಣ; ಸ್ಥಳ ಪರಿಶೀಲನೆ ನಡೆಸಿದ ತಂಡ

2ನೇ ವಿಮಾನ ನಿಲ್ದಾಣ; ಸ್ಥಳ ಪರಿಶೀಲನೆ ನಡೆಸಿದ ತಂಡ

ಉದ್ದೇಶಿತ ಎರಡನೇ ಅಂತಾರಾಷ್ಟ್ರೀಯ ವಿಮಾನ ನಿಲ್ದಾಣಕ್ಕೆ (2nd Airport) ರಾಜ್ಯ ಸರಕಾರವು ಗುರುತಿಸಿರುವ ಮೂರು ಸ್ಥಳಗಳ ಪೈಕಿ

[ccc_my_favorite_select_button post_id="105102"]
ಪಂಬನ್ ಸೇತುವೆ ಲೋಕಾರ್ಪಣೆ| Video ನೋಡಿ

ಪಂಬನ್ ಸೇತುವೆ ಲೋಕಾರ್ಪಣೆ| Video ನೋಡಿ

ರಾಮೇಶ್ವರಂ: ತಮಿಳುನಾಡಿನ ಪಂಬನ್ ಮತ್ತು ಹಿಂದೂ ಮಹಾಸಾಗರದಲ್ಲಿನ ದ್ವೀಪದ ರಾಮೇಶ್ವರಂ ನಗರವನ್ನು ಸಂಪರ್ಕಿಸುವ ಪಂಬನ್ ವರ್ಟಿಕಲ್ ಲಿಫ್ಟ್ (ಮೇಲ್ಮುಖ ತೆರೆದುಕೊಳ್ಳುವ) ಪಂಬನ್ ಸೇತುವೆಯನ್ನು (Pamban pridge) ಪ್ರಧಾನಿ ನರೇಂದ್ರ ಮೋದಿ ಭಾನುವಾರ ಮಧ್ಯಾಹ್ನ 12.30ರಲ್ಲಿ

[ccc_my_favorite_select_button post_id="105011"]
los angeles fire| ಅಮೆರಿಕ ಕಾಡ್ಗಿಚ್ಚು: ಸಾವಿನ ಸಂಖ್ಯೆ 11ಕ್ಕೆ| Video

los angeles fire| ಅಮೆರಿಕ ಕಾಡ್ಗಿಚ್ಚು: ಸಾವಿನ ಸಂಖ್ಯೆ 11ಕ್ಕೆ| Video

ಹಾಲಿವುಡ್ ಹಿಲ್ ಹಾಗೂ ಸ್ಟುಡಿಯೋ ಸಿಟಿಗೆ ಹೊತ್ತಿಕೊಂಡಿದ್ದ ಬೆಂಕಿಯನ್ನು ವಿಮಾನ, ಹೆಲಿಕಾಪ್ಟರ್ ಗಳ ಮೂಲಕ ನೀರು ಸಿಂಪಡಿಸಿ ನಂದಿಸಲಾಗಿತ್ತು los Angeles fire

[ccc_my_favorite_select_button post_id="100721"]

ಕ್ರೀಡೆ

ಬೆಂ.ಗ್ರಾ.ಜಿಲ್ಲಾ ಮಟ್ಟದ ಸರ್ಕಾರಿ ನೌಕರರ ಕ್ರೀಡಾಕೂಟ ಮತ್ತು ಸಾಂಸ್ಕೃತಿಕ ಸ್ಪರ್ಧೆಗೆ ಚಾಲನೆ

ಬೆಂ.ಗ್ರಾ.ಜಿಲ್ಲಾ ಮಟ್ಟದ ಸರ್ಕಾರಿ ನೌಕರರ ಕ್ರೀಡಾಕೂಟ ಮತ್ತು ಸಾಂಸ್ಕೃತಿಕ ಸ್ಪರ್ಧೆಗೆ ಚಾಲನೆ

ನೌಕರರ ಕ್ಷೇಮಾಭಿವೃದ್ಧಿಗೆ ಎಲ್ಲಾ ಸಹಕಾರ ನೀಡಲಾಗುವುದು, ಜಿಲ್ಲೆಯ ಅಭಿವೃದ್ಧಿಯಲ್ಲಿ ಸರ್ಕಾರಿ ನೌಕರರ ಪಾತ್ರ ಬಹಳ ಮುಖ್ಯ, ಜಿಲ್ಲೆಯ ಎಲ್ಲಾ ಅಭಿವೃದ್ಧಿ ಕೆಲಸಗಳನ್ನು ತ್ವರಿತವಾಗಿ ಪೂರ್ಣಗೊಳಿಸಬೇಕು. Sports Meet

[ccc_my_favorite_select_button post_id="104998"]
MBBS ವಿದ್ಯಾರ್ಥಿ ಆತ್ಮಹತ್ಯೆಗೆ ಶರಣು..!

MBBS ವಿದ್ಯಾರ್ಥಿ ಆತ್ಮಹತ್ಯೆಗೆ ಶರಣು..!

ಎಂಬಿಬಿಎಸ್ (MBBS) ವಿದ್ಯಾರ್ಥಿಯೊಬ್ಬ ಆತ್ಮಹತ್ಯೆ (Suicide) ಮಾಡಿಕೊಂಡಿರುವ ಘಟನೆ ತಾಲೂಕಿನ

[ccc_my_favorite_select_button post_id="105122"]
ಸಹೋದರಿಯರ ದಾರುಣ ಸಾವು.. ಮುಗಿಲುಮುಟ್ಟಿದ ತಾಯಿಯ ಅಕ್ರಂದನ

ಸಹೋದರಿಯರ ದಾರುಣ ಸಾವು.. ಮುಗಿಲುಮುಟ್ಟಿದ ತಾಯಿಯ ಅಕ್ರಂದನ

ತಂದೆ ಇಲ್ಲದೆ ಇಬ್ಬರು ಮಕ್ಕಳೇ ಜೀವನಾಧಾರ ಅಂತ ಬದುಕು ಕಟ್ಟಿಕೊಂಡಿದ್ದ ತಾಯಿಯ ಆಕ್ರಂದನ ಮುಗಿಲುಮುಟ್ಟಿದೆ. ಸ್ಥಳಕ್ಕೆ ಪೊಲೀಸರು ಭೇಟಿ krushihonda

[ccc_my_favorite_select_button post_id="105079"]

ಆರೋಗ್ಯ

ಸಿನಿಮಾ

ಕಲಾವಿದರು ಮಾಸಾಶನ ಪಡೆಯಲು ಜೀವಿತಾವಧಿ ಪ್ರಮಾಣ ಪತ್ರ ಸಲ್ಲಿಸಿ

ಕಲಾವಿದರು ಮಾಸಾಶನ ಪಡೆಯಲು ಜೀವಿತಾವಧಿ ಪ್ರಮಾಣ ಪತ್ರ ಸಲ್ಲಿಸಿ

ನಿಗದಿತ ಅರ್ಜಿ ನಮೂನೆಯನ್ನು ಸಹಾಯಕ ನಿರ್ದೇಶಕರ ಕಛೇರಿ, ಕನ್ನಡ ಮತ್ತು ಸಂಸ್ಕೃತಿ ಇಲಾಖೆ ಜಿಲ್ಲಾಡಳಿತ ಭವನ, ಕೊಠಡಿ ಸಂಖ್ಯೆ:118 Affidavit

[ccc_my_favorite_select_button post_id="104955"]
error: Content is protected !!