ಮೈಸೂರು, (ಸೆ.19); ನಾಡದೇವತೆ ಶ್ರೀ ಚಾಮುಂಡೇಶ್ವರಿ ಅಮ್ಮನವರ ದರ್ಶನ ಪಡೆದು, ಮೈಸೂರಿನ ಕೆಂಪೇಗೌಡ ಕಲ್ಯಾಣ ಮಂಟಪದಲ್ಲಿ ಆಯೋಜಿಸಲಾಗಿದ್ದ
ಜೆಡಿಎಸ್ ಪ್ರಾಥಮಿಕ ಸದಸ್ಯತ್ವ ನೋಂದಣಿ ಹಾಗೂ ಬೂತ್ ಸಮಿತಿ ಅಭಿಯಾನಕ್ಕೆ ಜೆಡಿಎಸ್ ಯುವ ಘಟಕದ ರಾಜ್ಯಾಧ್ಯಕ್ಷರಾದ ನಿಖಿಲ್ ಕುಮಾರಸ್ವಾಮಿ ಅವರು ಚಾಲನೆ ನೀಡಿದರು.
ಹರಿತಲೇಖಿ ವಾಟ್ಸಪ್ ಗುಂಪಿಗೆ ಸೇರಲು ಈ ಲಿಂಕ್ ಬಳಸಿ: https://chat.whatsapp.com/B9AsQ3oyN5ELPfrzOPhl9j
ನಂತರ ಸಭೆಯಲ್ಲಿ ಮಾತನಾಡಿದ ಅವರು, ಇವತ್ತು ಮೈಸೂರಿನಲ್ಲಿ ಮೂರನೇ ವಾರಕ್ಕೆ ಕಾಲಿಟ್ಟಿದ್ದೇವೆ, ಮೊದಲನೇ ವಾರ ತುಮಕೂರು, ಕಳೆದ ವಾರ ಕೊಪ್ಪಳ ಇವತ್ತು ಮೈಸೂರು ಜಿಲ್ಲೆಗೆ ಹೀಗೆ ಪ್ರತಿ ವಾರವು ಜಿಲ್ಲೆಯದ್ಯಾಂತ
ಪ್ರವಾಸ ಕೈಗೊಳ್ಳುತ್ತಿದ್ದೇವೆ ಎಂದು ತಿಳಿದರು.
ಪಕ್ಷವನ್ನು ತಳಮಟ್ಟದಿಂದ ಕಟ್ಟುವ ನಿಟ್ಟಿನಲ್ಲಿ ಇದೊಂದು ಮಹತ್ವದ ನಿರ್ಧಾರವಾಗಿದೆ.ಇವತ್ತು ಬೂತ್ ಮಟ್ಟದಲ್ಲಿ ಪಕ್ಷವನ್ನ ಕಟ್ಟಬೇಕು, ಪಕ್ಷದ ಕಟ್ಟ ಕಡೆಯ ಕಾರ್ಯಕರ್ತರನ್ನ ಗುರುತಿಸುವ ಪ್ರಾಮಾಣಿಕ ಕೆಲಸ ಮಾಡ್ತೀನಿ ಎಂದರು.
ಜೆಡಿಎಸ್ ಪಕ್ಷದ ಸದಸ್ಯತ್ವ ನೊಂದಣಿ ಮತ್ತು ಬೂತ್ ಮಟ್ಟದ ಸಮಿತಿ ರಚನೆ ಆಗಬೇಕು ಎಂದು ಮಾಜಿ ಪ್ರಧಾನಿ ದೇವೇಗೌಡರು ಕರೆ ಕೊಟ್ಟಿದ್ದರು. ಇವತ್ತು ರಾಜ್ಯದಲ್ಲಿ ಪ್ರತಿ ಸಮಾಜವನ್ನು ಒಗ್ಗೂಡಿಸಿ ಎಲ್ಲಾ ಸಮುದಾಯಕ್ಕೂ ದೇವೇಗೌಡರು ಕೊಡುಗೆ ನೀಡಿದ್ದಾರೆ ಎಂದರು.
62 ವರ್ಷದಲ್ಲಿ ಬಿಜೆಪಿ ಜೊತೆಗೆ ಹೋಗಿರಲಿಲ್ಲ, ಆದರೆ ಮೈತ್ರಿಗೆ ದೇವೇಗೌಡರೆ ಒಪ್ಪಿಗೆ ಸೂಚಿಸಿದರು
ಪ್ರಾದೇಶಿಕ ಪಕ್ಷ ಉಳಿಸಿ ಬೆಳೆಸಬೇಕು.ಹಾಗೆಯೇ ಕುಮಾರಣ್ಣ ಅವರು ರಾಜ್ಯಕ್ಕೆ ಕೊಟ್ಟಿರುವ ಕೊಡುಗೆ ಇವತ್ತಿಗೂ ಕೂಡ ಮರೆಯೋದಕ್ಕೆ ಆಗುವುದಿಲ್ಲ ಎಂದರು.
ನೀವೆಲ್ಲರೂ ಪ್ರೀತಿಯಿಂದ ಅಣ್ಣ ಅನ್ನುವ ಪದ ಚಿತ್ರರಂಗದಲ್ಲಿ ಡಾ. ರಾಜಕುಮಾರ್ ಅವರಿಗೆ ಅಣ್ಣಾವ್ರು ಎಂದು ಕರೆಯುತ್ತಿದ್ವಿ. ರಾಜಕಾರಣದಲ್ಲಿ ಪ್ರೀತಿಯಿಂದ ಅಣ್ಣ ಅಂತ ಕುಮಾರಣ್ಣ ಅಂತ ನಿವೆಲ್ಲರೂ ಮನೆಯ ಮಗನ ರೀತಿ ಬೆಳೆಸಿದ್ದೀರಿ ಆಶೀರ್ವಾದಿಸಿದ್ದಿರಿ ಎಂದರು.
ಕುಮಾರಣ್ಣ ಕೇಂದ್ರ ಮಂತ್ರಿಯಾದ ನಂತರ ಜೆಡಿಎಸ್ ಕಾರ್ಯಕರ್ತರಲ್ಲಿ ಹೊಸ ಹುರುಪು, ಉತ್ಸಾಹ, ಹುಮ್ಮಸ್ಸು ಪ್ರಾರಂಭವಾಗಿದೆ. ಮುಂಬರುವ ಜಿಲ್ಲಾ ಪಂಚಾಯಿತಿ, ತಾಲ್ಲೂಕು ಪಂಚಾಯಿತಿ, ನಗರ ಸ್ಥಳೀಯ ಸಂಸ್ಥೆ ಚುನಾವಣೆಗಳಲ್ಲಿ ಅತಿ ಹೆಚ್ಚು ಸ್ಥಾನಗಳನ್ನು ಗೆಲ್ಲುವುದರ ಮೂಲಕ ಕುಮಾರಣ್ಣನ ಮುಂಬರುವ ದಿನಗಳಲ್ಲಿ 5 ವರ್ಷದಕಾಲ ಮುಖ್ಯಮಂತ್ರಿ ಮಾಡುವುದಕ್ಕೆ ಶಕ್ತಿ ಬರುತ್ತೆ ಎಂದು ತಿಳಿಸಿದರು.
ಇದನ್ನೂ ಓದಿ: Doddaballapura: ಕಾರ್‌ನಲ್ಲಿ ಬಂದು ಸರಗಳ್ಳತನ..!
ಪ್ರಾದೇಶಿಕ ಪಕ್ಷ ಮುಂಬರುವ ದಿನಗಳಲ್ಲಿ ರಾಜ್ಯದ 31 ಜಿಲ್ಲೆಯಲ್ಲೂ ಪ್ರವಾಸ ಮಾಡಿ ಸದೃಢವಾಗಿ ಕಟ್ಟುವಂತ ಪ್ರಾಮಾಣಿಕ ಕೆಲಸ ಮಾಡ್ತೀನಿ ನೀವೆಲ್ಲರೂ ನಮಗೆ ಕೈ ಜೋಡಿಸಬೇಕು ಈ ನಿಟ್ಟಿನಲ್ಲಿ ಎಲ್ಲ ಕಾರ್ಯಕರ್ತರು ತಮ್ಮ ಶಕ್ತಿ ಮೀರಿ ಸದಸ್ಯತ್ವ ನೋಂದಣಿ ಮತ್ತು ಬೂತ್ ಕಮಿಟಿಗಳ ನೇಮಕದಲ್ಲಿ ತೊಡಗಿ, ಪಕ್ಷವನ್ನು ಬಲಪಡಿಸುವಂತೆ ಮನವಿ ಮಾಡಿದರು.ಇಂದಿನಿಂದಲೇ ಪಕ್ಷದ ಕಾರ್ಯಕರ್ತರು ಕೆಲಸ ಆರಂಭಿಸುವಂತೆ ಅವರು ಕರೆ ನೀಡಿದರು.