Site icon Harithalekhani

ಹೊಸಹಳ್ಳಿಯಲ್ಲಿ ಪೌಷ್ಠಿಕ ಆಹಾರ ಸಪ್ತಾಹ

ದೊಡ್ಡಬಳ್ಳಾಪುರ, (ಸೆ.17); ಮಹಿಳಾ ಮತ್ತು ಮಕ್ಕಳ ಅಭಿವೃದ್ಧಿ ಇಲಾಖೆವತಿಯಿಂದ ತಾಲೂಕಿನ ಹೊಸಹಳ್ಳಿ ಸರ್ಕಾರಿ ಪ್ರೌಢಶಾಲೆ ಆವರಣದಲ್ಲಿ ಪೌಷ್ಠಿಕ ಆಹಾರ ಸಪ್ತಾಹ ಕಾರ್ಯಕ್ರಮವನ್ನು ಇಂದು ಆಯೋಜಿಸಲಾಗಿತ್ತು.

ಬೆಂಗಳೂರು ಗ್ರಾಮಾಂತರ ಜಿಲ್ಲಾ ನಿರೂಪಣಾಧಿಕಾರಿ ಅನಿತಾಲಕ್ಷ್ಮೀ ಅವರು ಕಾರ್ಯಕ ಉದ್ಘಾಟಿಸಿದರು.

ಈ ವೇಳೆ ಮಾತನಾಡಿದ ಅವರು, ಅಪೌಷ್ಟಿಕತೆಯನ್ನು ನಾವು ಹೋಗಲಾಡಿಸಬೇಕು. ಇಂದಿನ ದಿನದಲ್ಲಿ ಆರೋಗ್ಯ ಎನ್ನುವುದು ತುಂಬಾ ಪ್ರಮುಖವಾದದ್ದು. ಮೊಳಕೆ ಕಟ್ಟಿದ ಕಾಳುಗಳು ತಿನ್ನಿರಿ, ತಾಯಿಯರು ಮಕ್ಕಳನ್ನು ಪ್ರೀತಿಯಿಂದ ಕಾಣಬೇಕು ಎಂದರು.

ಊಟದ ಸಮಯದಲ್ಲಿ ತರಕಾರಿಗಳನ್ನು ತಿನ್ನಬೇಕು. ಇದರ ಕುರಿತು ತಾಯಿಯರು ಹೆಚ್ಚಿನ ಜವಾಬ್ದಾರಿ ತೆಗೆದುಕೊಳ್ಳಬೇಕು ಎಂದು ತಿಳಿಸಿದರು.

ಕಾರ್ಯಕ್ರಮದಲ್ಲಿ ಹೊಸಹಯ ವೃತ್ತದ ಮೇಲ್ವಿಚಾರಕಿ ಟಿ.ಲಕ್ಷ್ಮೀದೇವಮ್ಮ, ವೈದ್ಯಾಧಿಕಾರಿ ಇಂದು, ಸಿಹೆಚ್‌ಒ ಪುಷ್ಪ, ಶಾಲೆಯ ಮುಖ್ಯ ಶಿಕ್ಷಕರಾದ ವೆಂಕಟೇಶಯ್ಯ, ಮೈಲಮ್ಮ, ಗ್ರಾಪಂ ಅಧ್ಯಕ್ಷೆ ನಾಗರತ್ನಮ್ಮ, ಮುಖಂಡರಾದ ವೆಂಕಟೇಶ್, ಲಕ್ಷ್ಮೀನಾರಾಯಣಪ್ಪ, ಹೊಸಹಳ್ಳಿ ವೃತ್ತ ಅಂಗನವಾಡಿ, ಆಶಾ ಕಾರ್ಯಕರ್ತರೆಯರು ಇದ್ದರು.

ಮಾಹಿತಿ ಇಷ್ಟವಾಗಿದ್ದರೆ ಶೇರ್ ಮಾಡಿ: ಕ್ಷಣ ಕ್ಷಣದ ಮಾಹಿತಿಗಾಗಿ ಹರಿತಲೇಖನಿ Facebook, Koo, Dailyhunt ಮೂಲಕ ಫಾಲೋ ಮಾಡಿ. Whatsup, Telegram ಗುಂಪಿಗೆ ಸೇರಿ ನಮ್ಮೊಂದಿಗೆ ಜೊತೆಯಾಗಿ….<!–

–>

Exit mobile version