ಮಂಗಳೂರು, (ಸೆಪ್ಟೆಂಬರ್ 16): ಗಣೇಶ ಚತುರ್ಥಿ ಸಂದರ್ಭದ ಮೆರವಣಿಗೆ ವೇಳೆ ಮುಸ್ಲಿಂ ಸಮುದಾಯದವರು ನೀರು, ಪಾನೀಯ, ಸಿಹಿ ಹಂಚಿದ್ದ ವಿಡಿಯೋ ವ್ಯಾಪಕ ವೈರಲ್ ಬೆನ್ನಲ್ಲೇ, ಬಂಟ್ವಾಳದ ಮಾಣಿ ಜಂಕ್ಷನ್ ಮತ್ತು ಕೊಡಾಜೆ ಇಂದಿನ ಈದ್ ಮಿಲಾದ್ ವೇಳೆ ಮತ್ತೊಮ್ಮೆ ಕೋಮು ಸೌಹಾರ್ದತೆಗೆ ಸಾಕ್ಷಿಯಾಗಿದೆ.
ಈದ್ ಮಿಲಾದ್ ಹಿನ್ನೆಲೆಯಲ್ಲಿ ಬಂಟ್ವಾಳ ತಾಲೂಕಿನ ಮಾಣಿ ಜಂಕ್ಷನ್ ಮತ್ತು ಕೊಡಾಜೆಯಲ್ಲಿ ಮುಸ್ಲಿಂ ಬಾಂಧವರಿಗೆ ಹಿಂದೂಗಳು ಸಿಹಿ, ಐಸ್ಕ್ರೀಂ, ನೀರಿನ ಬಾಟಲಿ ವಿತರಣೆ ಮಾಡಿ ಭಾವೈಕ್ಯತೆಗೆ ಸಾಕ್ಷಿಯಾಗಿದ್ದಾರೆ.
ಮಾಣಿ ಜಂಕ್ಷನ್ನಲ್ಲಿ ಈದ್ ಮಿಲಾದ್ ಮೆರವಣಿಗೆ ನಡೆಯುತ್ತಿತ್ತು. ಈ ವೇಳೆ ಕೇಸರಿ ಶಾಲು ಹಾಕಿಕೊಂಡ ಹಿಂದೂ ಯುವಕರು ಮುಸ್ಲಿಂ ಮುಖಂಡರು ಮತ್ತು ಮಕ್ಕಳಿಗೆ ಸಿಹಿ, ಐಸ್ಕ್ರೀಂ, ನೀರಿನ ಬಾಟಲ್ ವಿತರಣೆ ಮಾಡಿದರು. ಈ ಮಾಣಿ ಜಂಕ್ಷನ್ನಲ್ಲಿ ಬಿಸಿ ರೋಡ್ ಕೇವಲ 20 ಕಿಮೀ ದೂರದಲ್ಲಿದೆ. ಏಕೆಂದರೆ ಇಬ್ಬರು ವ್ಯಕ್ತಿಗಳ ಹೇಳಿಕೆಯಿಂದಾಗಿ ಆ ಪ್ರದೇಶದಲ್ಲಿ ಪರಿಸ್ಥಿತಿ ಉದ್ವಿಗ್ನಗೊಂಡಿತ್ತು.
ಅಂತೆಯೇ ಕೊಡಾಜೆಯಲ್ಲೂ ಕೂಡ ಹಿಂದೂಗಳು ಈದ್ ಮಿಲಾದ್ ಮೆರವಣಿಗೆಯಲ್ಲಿದ್ದ ಮುಸ್ಲಿಮರಿಗೆ ಸಿಹಿ ಹಂಚಿದರು.
ಜುಮ್ಮಾ ಮಸೀದಿಯಿಂದ ಬಂದಿದ್ದ ಈದ್ ಮಿಲಾದ್ ಮೆರವಣಿಗೆಯಲ್ಲಿ ಭಾಗವಹಿಸಿದ್ದ ಮುಸ್ಲಿಂ ಬಾಂಧವರಿಗೆ ಹಿಂದೂಗಳು ಸ್ವೀಟ್ ಬಾಕ್ಸ್ ವಿತರಿಸಿ ಹಬ್ಬದ ಶುಭಾಶಯ ಕೋರಿದ್ದಾರೆ.
ಈ ಕುರಿತಾದ ವಿಡಿಯೋಗಳು ಸಾಮಾಜಿಕ ಜಾಲತಾಣದಲ್ಲಿ ವೈರಲ್ ಆಗಿದೆ.
ಮಾಹಿತಿ ಇಷ್ಟವಾಗಿದ್ದರೆ ಶೇರ್ ಮಾಡಿ: ಕ್ಷಣ ಕ್ಷಣದ ಮಾಹಿತಿಗಾಗಿ ಹರಿತಲೇಖನಿ Facebook, Koo, Dailyhunt ಮೂಲಕ ಫಾಲೋ ಮಾಡಿ. Whatsup, Telegram ಗುಂಪಿಗೆ ಸೇರಿ ನಮ್ಮೊಂದಿಗೆ ಜೊತೆಯಾಗಿ….</